ಕಲಬುರಗಿ: ದೇಶದಾದ್ಯಂತ ಕರೋನಾ ಮಹಾಮಾರಿಯು ತನ್ನ ಅರ್ಭಟಕ್ಕೆ ಲಕ್ಷಾಂತರ ಜನರು ಬಲಿಯಾಗಿದ್ದಾರೆ. ಅದರಂತೆ ಜಿಲ್ಲೆಯೂ ದಿನೇದಿನೆ ಕೋವಿಡ್-19 ಎರಡನೇ ಅಲೆಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನ ಭಯಭೀತರಾಗಿದ್ದು, ಚಂದು ಪಾಟೀಲ ಫೌಂಡೆಷನ್ ಸಂಸ್ಥೆ ವತಿಯಿಂದ 24×7 ಉಚಿತ ಅಂಬ್ಯುಲೆನ್ಸ ಸೇವೆಗೆ ಕ್ರೆಡೆಲ್ ಅಧ್ಯಕ್ಷ ಹಾಗೂ ಭಾರತೀಯ ಜನತಾ ಪಾರ್ಟಿ ಯುವ ನಾಯಕರಾದ ಚಂದು ಪಾಟೀಲ್ ಚಾಲನೆ ನೀಡಿದರು.
ಅಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿ ಮಾತನಾಡುತ್ತಾ ಅವರು, ಉಚಿತ ನೀರಿನ ಟ್ಯಾಂಕ್ ವ್ಯವಸ್ಥೆ ಮಾಡಲಾಗಿದೆ ಇದರ ಸಮರ್ಥಯೂ 12,000. ಲೀಟರ್ ನಷ್ಟು ಇದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ್ ಅವರು ಮಾತನಾಡುತ್ತಾ ನೂತನವಾಗಿ ಚಂದು ಪಾಟೀಲ್ ಫೌಂಡೇಷನ್ ಸಂಸ್ಥೆ ವತಿಯಿಂದ ಉಚಿತವಾಗಿ ಅಂಬ್ಯುಲೆನ್ಸ್ ಸೇವೆ ಪ್ರಾರಂಭವಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟೀಯ ಸ್ವಯಂ ಸೇವಕ ಸಂಘ ವಿಭಾಗೀಯ ಪ್ರಚಾರಕರಾದ ವಿಜಯ ಮಾಂತೇಶ ಜಿ., ಉತ್ತರ ಪ್ರಾಂತ್ ಭೈದಿಕ್ ಪ್ರಮುಖ ಕೃಷ್ಣ ಜಿ., ಡಾ. ಕೈಲಾಶ್ ಪಾಟೀಲ್, ಭಾರತೀಯ ಜನತಾ ಪಾರ್ಟಿ ಕಲಬುರಗಿ ನಗರ ಜಿಲ್ಲಾ ಅಧ್ಯಕ್ಷ ಸಿದ್ದಜಿ ಪಾಟೀಲ್, ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್, ರಮೇಶ್ ತಿಪನೂರ, ಚನ್ನವೀರ ಲಿಂಗನವಾಡಿ, ಉತ್ತರ ಮಂಡಲದ ಪ್ರಧಾನ ಕಾರ್ಯದರ್ಶಿ ಬಿ. ಜಯ ಸಿಂಗ್ ಇದ್ದರು.