ಶಹಾಬಾದ: ಕಾರ್ಮಿಕರ, ದುರ್ಬಲರ ಮತ್ತು ಶೋಷಿತ ವರ್ಗದವರ ಧ್ವನಿಯಾಗಿ ಕೆಲಸ ಮಾಡುವ ಪ್ರಭಾವಿ ನಾಯಕ ಎಂದರೆ ಕೆ.ಬಿ.ಶಾಣಪ್ಪರಾಗಿದ್ದರು ಎಂದು ರಾಷ್ಟ್ರ ಭಾಷಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ದಿಲೀಪ್ ಯಲಶೆಟ್ಟಿ ಹೇಳಿದರು.
ಅವರು ಬುಧವಾರ ನಗರದ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯಲ್ಲಿ ಆಯೋಜಿಸಲಾದ ಮಾಜಿ ಸಚಿವ ದಿ.ಕೆ.ಬಿ.ಶಾಣಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಚಿವರಾಗಿ, ರಾಜ್ಯಸಭಾ ಸದಸ್ಯರಾಗಿ, ವಿಧಾನ ಪರಿ?ತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರೂ ಅವರಲ್ಲಿ ಅಹಂ ಭಾವನೆ ಇರಲಿಲ್ಲ. ಅವರೊಬ್ಬ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದರು.ಅಲ್ಲದೇ ಎಲ್ಲರೊಂದಿಗೆ ಬೆರೆಯುವ ಸಮಾಜಮುಖಿ ವ್ಯಕ್ತಿತ್ವ ಅವರಲ್ಲಿ ಕಾಣಬಹುದಿತ್ತು. ಅವರ ಅಗಲಿಕೆಯಿಂದ ಸಮಾಜಕ್ಕೆ ನಷ್ಟವಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.
ರಾಷ್ಟ್ರಭಾಷಾ ಶಿಕ್ಷಣ ಸಮಿತಿಯ ಸದಸ್ಯ ಅಶೋಕ ಸೋಮ್ಯಾಜಿ ಮಾತನಾಡಿ, ಕೆ. ಬಿ.ಶಾಣಪ್ಪ ಅವರು ಶಹಾಬಾದನಲ್ಲೆ ಓದಿ ಬೆಳೆದು , ಕಾರ್ಮಿಕ ನಾಯಕರಾಗಿ ಮತ್ತು ಶಹಾಬಾದ ಮತಕ್ಷೇತ್ರದಿಂದಲೇ ಶಾಸಕರಾಗಿ ಆಯ್ಕೆಯಾದವರು. ಶಹಾಬಾದ ನಗರದ ಹಾಗೂ ಇಲ್ಲಿನ ಜನರ ಜತೆ ಯಾವಾಗಲೂ ಉತ್ತಮ ಒಡನಾಟವಿತ್ತು.
ನಮ್ಮ ಸಂಸ್ಥೆಯ ಕಟ್ಟಡಕ್ಕೆ ಆರ್ಥಿಕವಾಗಿ ತಮ್ಮ ಅನುದಾನದಲ್ಲಿ ಸಹಾಯ ಮಾಡಿದ್ದರು. ಅವರೊಬ್ಬ ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ದಲಿತ ನಾಯಕರಾಗಿದ್ದರು. ಸದನದಲ್ಲಿ ಸದಾ ನೊಂದ ಜನರ ದನಿಯಾಗಿದ್ದರು.ಅವರ ನಿಧನದಿಂದ ಒಬ್ಬ ನೇರ ನಿ?ರ ಸ್ವಭಾವದ ನಾಯಕರನ್ನು ಕಳೆದುಕೊಂಡಂತಾಗಿದೆ ಎಂದರು.
ಗಣ್ಯರಾದ ರಾಜೇಶ ವರ್ಮಾ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ರಾಷ್ಟ್ರಭಾಷಾ ಶಿಕ್ಷಣ ಸಮಿತಿಯ ಸದಸ್ಯ ಅನೀಲ ಭೋರಗಾಂವಕರ್, ಮುಖ್ಯ ಗುರುಮಾತೆ ದಮಯಂತಿ ಸೂರ್ಯವಂಶಿ, ಬಾಬಾ ಸಾಹೇಬ ಸಾಳುಂಕೆ, ವೀರಯ್ಯ ಹಿರೇಮಠ, ಶ್ರೀರಾಮ ಚವ್ಹಾಣ ಇತರರು ಇದ್ದರು.