ಜೂ.೧೪ ರಂದು ಸಾಹಿತಿ, ಕವಿ-ಕಲಾವಿದರಿಗಾಗಿ ‘ಕೋವಿಡ್ ಲಸಿಕೆ ಕ್ಯಾಂಪ್’

0
24

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರ ನೇತೃತ್ವದಲ್ಲಿ ೧೮ ವರ್ಷದ ಮೇಲ್ಪಟ್ಟ ಜಿಲ್ಲೆಯ ಸಾಹಿತಿಗಳು, ಕವಿ-ಕಲಾವಿದರಿಗಾಗಿ ಜೂನ್ ೧೪ ರ ಬೆಳಗ್ಗೆ ೧೦.೩೦ ಕ್ಕೆ ನಗರದ ಪತ್ರಿಕಾ ಭವನದಲ್ಲಿ ಕೋರೊನಾ ಲಸಿಕೆ ಕ್ಯಾಂಪ್ ಆಯೋಜಿಸಲಾಗಿದೆ ಎಂದು ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ತಿಳಿಸಿದ್ದಾರೆ.

ಸಾಹಿತಿಗಳು ತಮ್ಮ ಬರಹದ ಮೂಲಕ ಸಮಾಜದ ಚಿಕಿತ್ಸಕರೆನಿಸಿಕೊಂಡಿದ್ದಾರೆ. ಇಂಥ ಸಮಾಜದ ಜವಾಬ್ದಾರಿ ಸ್ಥಾನದಲ್ಲಿರುವ ಅವರಿಗೆ ಕೋವಿಡ್ ಲಸಿಕೆ ಕ್ಯಾಂಪ್ ಆಯೋಜಿಸಿ, ಇಡೀ ದೇಶವನ್ನೇ ಅಲ್ಲೋಲ-ಕಲ್ಲೋಲ ಮಾಡಿರುವ ಹೆಮ್ಮಾರಿ ಕೊರೊನಾ ವೈರಸ್‌ಗೆ ಲಸಿಕೆಯೇ ಮದ್ದಾಗಿದ್ದು, ಹಾಗಾಗಿ, ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ಭಾರತವನ್ನು ಕೋವಿಡ್-೧೯ ಮುಕ್ತವನ್ನಾಗಿ ಮಾಡೋಣ ಎಂದು ಅವರು ವಿವರಿಸಿದ್ದಾರೆ.

Contact Your\'s Advertisement; 9902492681

ಲಸಿಕೆ ಪಡೆಯಲಿಚ್ಚಿಸುವವರು ತಮ್ಮ ಆಧಾರ ಕಾರ್ಡ್‌ನ ನಕಲು ಪ್ರತಿಯೊಂದಿಗೆ ಸಂಘಟಕರಾದ ವಿಜಯಕುಮಾರ ತೇಗಲತಿಪ್ಪಿ-೯೮೮೦೩ ೪೯೦೨೫ – ಸುರೇಶ ಬಡಿಗೇರ-೯೯೪೫೫ ೭೦೨೩೪ ಗೆ ಸಂಪರ್ಕಿಸಲು ಅವರು ಪ್ರಕಟಣೆಯ ಮೂಲಕ ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here