ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೆಲಸದಲ್ಲಿ ತೊಡಗಬೇಕು: ಶೃಂಗೇರಿ

0
75

ಶಹಾಬಾದ: ಮಹಾಮಾರಿ ಕೋವಿಡ್ ೧೯ ವೈರಸ್‌ನಿಂದ ದೂರವಿರಲು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಅಗತ್ಯವಿದ್ದು, ಕಾರ್ಮಿಕರು ಮಾಸ್ಕ್ ಧರಿಸಿ ಕೆಲಸದಲ್ಲಿ ತೊಡಬೇಕೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ ಹೇಳಿದರು.

ಅವರು ಭಂಕೂರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣದಲ್ಲಿ ನಿರತರಾದ ಕಾರ್ಮಿಕರಿಗೆ ಮಾಸ್ಕ್ ಸ್ಯಾನಿಟೈಜರ್ ವಿತರಿಸಿ ಮಾತನಾಡಿದರು.

Contact Your\'s Advertisement; 9902492681

ಇಡೀ ಮನುಕುಲವನ್ನೇ ತಲ್ಲಣಗೊಳಿಸಿದ ಕೋವಿಡ್ ೧೯ ವೈರಸ್‌ನಿಂದ ಜನರು ತತ್ತರಿಸಿ ಹೋಗಿದ್ದಾರೆ.ಇದರ ಹತೋಟಿಗೆ ಸಾಮಾಜಿಕ ಅಂತರವೇ ರಾಮಭಾಣವಾಗಿದೆ.ಈ ನಿಟ್ಟಿನಲ್ಲಿ ಕಾರ್ಮಿಕರು ನಿತ್ಯ ಮಾಸ್ಕ್ ಧರಿಸುವುದು ನಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ನಿಮ್ಮ ಆರೋಗ್ಯವಾಗಿದ್ದರೇ ತಾನೇ ಏನಾದರೂ ಮಾಡಲು ಸಾಧ್ಯ. ಎಲ್ಲಕ್ಕಿಂತ ದೊಡ್ಡ ಭಾಗ್ಯ ಆರೋಗ್ಯ ಭಾಗ್ಯ.ಅದನ್ನು ಅರಿತು ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡಿ. ಸರಕಾರ ಲಾಕ್‌ಡೌನ ಸಂದರ್ಭದಲ್ಲಿ ಕಾಂಇಕರು ಕೆಲಸವಿಲ್ಲದೇ ಅವರ ಬದುಕು ಅತಂತ್ರವಾಗಬಾರದು.ಯಾರು ಹಸಿವಿನಿಂದ ನರಳಾಡಬಾರದೆಂಬ ಉದ್ದೇಶದಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುತ್ತಿದೆ.ಅದರ ಸಂಪೂರ್ಣ ಉಪಯೋಗ ಪಡೆದುಕೊಂಡು ಕಾರ್ಯನಿರ್ವಹಿಸುವುದಲ್ಲದೇ ನಿಮ್ಮ ಆರೋಗ್ಯ ಬಗ್ಗೆಯೂ ಕಾಳಜಿ ವಹಿಸಿ ಎಂದರು.

ಈ ಸಂದರ್ಭದಲ್ಲಿ ತಾಂತ್ರಿಕ ಅಧಿಕಾರಿ ಅಶೋಕ, ಸಮುದಾಯ ಸಂಪನ್ಮೂಲ ವ್ಯಕ್ತಿ ಭೀಮರಾಯ ರಾವೂರ, ಕಾಯಕ ಬಂಧು ಕೇಮಲಿಂಗ ನರೋಣಾ ಹಾಗೂ ಕಾರ್ಮಿಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here