ಕೋವಿಡ್-19 ನಿಂದಾಗಗಿ ಹೆತ್ತವರನ್ನು ಕಳೆದುಕೊಂಡ ಮಾನಸಿಕ ಅಸ್ವಸ್ಥ ಬಾಲಕನಿಗೆ ವಿಠಲ್ ನಾಯಕ್ ನೆರವು

0
52

ಚಿತ್ತಾಪುರ: ತಾಲ್ಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಕೋವಿಡ್ ನಿಂದಾಗಿ ಹೆತ್ತವರನ್ನು ಕಳೆದುಕೊಂಡ ಮಾನಸಿಕ ಅಸ್ವಸ್ಥ ಬಾಲಕನಿಗೆ ಶಿವಕುಮಾರ ಕಮರಡಗಿ ನೆರವಿಗೆ ಧಾವಿಸಿ ಯುವ ಮುಖಂಡ ವಿಠಲ ನಾಯಕ ವೈಯಕ್ತಿಕವಾಗಿ (10,000/-) ಹತ್ತು ಸಾವಿರ ಧನ ಸಹಾಯ ನೀಡಿ ಸಾಂತ್ವನ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಂದೆ ಏನೇ ಸಹಾಯ ಬೇಕಾದರೆ ಮಾಡಲು ಸಿದ್ದ ನಾನು ಕೂಡ ತಮ್ಮ ಕುಟುಂಬದ ಒಬ್ಬ ಸದಸ್ಯ ಎಂದು ತಿಳಿದು ಸಂಕೋಚವಿಲ್ಲದೆ ಕಷ್ಟದಲ್ಲಿ ಸಹಾಯ ಕೇಳು ಎಂದು ಬಾಲಕನಿಗೆ ಧೈರ್ಯ ತುಂಬಿದರು.

Contact Your\'s Advertisement; 9902492681

ಕಾಂಇಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೆಲಸದಲ್ಲಿ ತೊಡಗಬೇಕು: ಶೃಂಗೇರಿ

ಕೋರೋನಾದಿಂದ ಅನಾಥವಾದ ಮಕ್ಕಳಿಗಾಗಿ ನಮ್ಮ ಯಡಿಯೂರಪ್ಪ ಅವರ ಸರ್ಕಾರ ನೆರವಿಗಾಗಿ “ಮುಖ್ಯಮಂತ್ರಿ ಬಾಲಸೇವಾ ಯೋಜನೆ” ಜಾರಿಗೆ ತಂದು ಅನಾಥರಾಗಿ, ಕುಟುಂಬದಿಂದ ವಂಚಿತರಾಗಿ ಆಶ್ರಯದಲ್ಲಿರುವ, ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ದೃಷ್ಟಿಯಿಂದ, ತಿಂಗಳಿಗೆ 3,500 ರೂ. ಗಳನ್ನು ನೀಡಲಾಗುತ್ತಿದ್ದು ಅದರನ್ವಯ ಬಾಲಕನಿಗೆ ಪರಿಹಾರ ಕೊಡಿಸುಲು
ಮುಖಂಡರಾದ ಭೀಮರೆಡ್ಡಿಗೌಡ ಕುರಾಳ,ನಾಗೇಂದ್ರಪ್ಪ ಸಾಹು ಮುಕ್ತದಾರ,ಪೋಮು ರಾಠೋಡ, ಸಾಬಣ್ಣ ಆನೇಮಿ,ಈರಣ್ಣ ಮಲಕಂಡಿ,ಶಾಂತಕುಮಾರ ಎಣ್ಣಿ ರೊಂದಿಗೆ ಸೇರಿ ಇಂತಹ ಇನ್ನೂ ಕೇಲವು ಕುಟುಂಬದ ವಂಚಿತ ಮಕ್ಕಳ ಭವಿಷ್ಯದ ಪರಿಹಾರಕ್ಕಾಗಿ ಶ್ರಮಿಸುತ್ತೆವೆ ಎಂದು ವಾಡಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ ಹೇಳಿದರು.

ಈ ಸಂದರ್ಭದಲ್ಲಿ ತಾಲ್ಲೂಕ ಎಸ್ ಸಿ ಮೂರ್ಚಾದ ಅಧ್ಯಕ್ಷರು ಹಾಗೂ ಶಹಬಾದ-ವಾಡಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ರಾಜು ಮುಕ್ಕಣ್ಣ,ಪುರಸಭೆ ಸದಸ್ಯರಾದ ರಾಜೇಶ್ ಅಗ್ರವಾಲ,ಬಸವರಾಜ ಕಿರಣಗಿ,ಮಲ್ಲು ಇಂದೂರ, ನಾಗರಾಜಗೌಡ ಗೌಡಪ್ಪನೂರ್ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here