ಶಹಾಬಾದ:ಹಸಿವಿಗೆ ಮತ್ತು ಹಸಿದವರಿಗೆ ಅನ್ನ ನೀಡುವವರಿಗೆ ಯಾವುದೇ ಜಾತಿ, ಧರ್ಮ, ವರ್ಗ ಇಲ್ಲ ಎಂಬುದಕ್ಕೆ ನಗರದ ಸಿಟಿಜೆನ್ ಕ್ಲಬ್ ಉದಾಹರಣೆಯಾಗಿದೆ ಎಂದು ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.
ಅವರು ಶುಕ್ರವಾರ ನಗರದ ಸಹರಾ ಸಭಾಂಗಣದಲ್ಲಿ ಸಿಟಿಜೆನ್ ಕ್ಲಬ್ ವತಿಯಿಂದ ಕೊರೊನಾ ವಾರಿಯರ್ಸ್‌ಗೆ ಆಯೋಜಿಸಲಾದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಹಸಿವು ಯಾವುದೇ ಧರ್ಮ, ಜಾತಿ, ವರ್ಗಕ್ಕೆ ಸೀಮಿತವಾಗಿಲ್ಲ.ಕೊರೊನಾದಂತಹ ಸಂದರ್ಭದಲ್ಲಿ ಹಸಿದವರ ನೆರವಿಗೆ ಬಂದವರೇ ನಿಜವಾದ ದೇವತಾ ಮೂರ್ತಿಗಳು.ಅನ್ನ ನೀಡುವುದೇ ನಿಜವಾದ ಧರ್ಮ.ಅನ್ನದಾನ ಮಾಡಲು ಆ ವ್ಯಕ್ತಿಗಳಿಗೆ ದೇವರ ಕೃಪೆಯಿರಬೇಕು ಎಂಬುದು ನನ್ನ ಭಾವನೆ.ಕಾರಣ ಬಲ್ಲವರು ಬಹಳವಿದ್ದರೂ ಕೊಡುವ ಮತ್ತು ನೀಡುವ ಹೃದಯವಿಲ್ಲ.ಆದರೆ ಇಲ್ಲಿನ ಸಿಟಿಜೆನ್ ಕ್ಲಬ್‌ನ ಸದಸ್ಯರು ಕೂಡಿಕೊಂಡು ಹಸಿದವರ ಬಾಗಿಲಿಗೆ ಆಹಾರವನ್ನು ತಲುಪಿಸುವ ಮೂಲಕ ಮಾನವೀಯತೆಯ ಕೆಲಸ ಮಾಡುತ್ತಿದೆ.
ಈ ಕಾರ್ಯ ನಿರಂತರವಾಗಿ ಸಾಗಲಿ.ಅಲ್ಲದೇ ಕಲಬುರಗಿ ವಿಷನ್ ೨೦೫೦ ಹೊಸ ಯೋಜನೆಯ ಮೂಲಕ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸಲು ಮೂರು ಹಂತಗಳಲ್ಲಿ ಕಾರ್ಯತತ್ಪರವಾಗಬೇಕಿದೆ. ಅಲ್ಲದೇ ಶಹಾಬಾದ ನಗರವನ್ನು ಎಲ್ಲಾ ರಂಗಗಳಲ್ಲಿ ಅಭಿವೃದ್ಧಿಪಡಿಸಲು ಸಾರ್ವಜನಿಕರು ಸಹಕಾರ ಬೇಕಾಗಿದೆ.ಇಲ್ಲಿನ ಕಲ್ಲುಗಣಿಯ ಫರ್ಸಿ ಕಲ್ಲು ಹೊಳಪು ಬರುವಂತೆ ಮಾಡಿ ಜಾಗತಿಕ ಮಟ್ಟದಲ್ಲಿ ಹೆಸರು ಬರುವಂತೆ, ಸುಣ್ಣದ ಕಲ್ಲಿನ ಬಳಕೆ ಮಾಡುವತ್ತ ಯೋಚನೆ ಹಾಕಿದ್ದೆವೆ.ಇದರಿಂದ ಅನೇಕ ಕಾರ್ಖಾನೆಗಳು ಇಲ್ಲಿ ಬಂದರೆ ನಿರೋದ್ಯೋಗ ಸಮಸ್ಯೆ ಬಗೆಹರಿಸಲಿದೆ.ಜನರ ಆರ್ಥಿಕ ಮಟ್ಟ ಸುಧಾರಿಸಲಿದೆ.ಆದ್ದರಿಂದ ಈ ನಿಟ್ಟಿನಲ್ಲಿಯೂ ಯುವಕರು ಮುಂದಾಗಬೇಕಿದೆ ಎಂದರು.
ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಮಾತನಾಡಿ, ಎಲ್ಲಾ ಧರ್ಮಗಳ ತಿರುಳು ಕೂಡ ಹಸಿದವರಿಗೆ ನೆರವಾಗುವುದು.ಇಂತಹ ಸಂಕಷ್ಟದ ಸಮಯದಲ್ಲಿ ಹಸಿದವರಿಗೆ ನೆರವಾಗುವ ಕಾಳಜಿ ಇರುವ ಮನಸ್ಸುಗಳಾಗಿ ಕೆಲಸ ಮಾಡಿದ್ದು ಸಿಟಿಜೆನ್ ಕ್ಲಬ್ ಸದಸ್ಯರು ಎಂದರೆ ಅತಿಶೋಯಕ್ತಿಯಾಗಲಾರದು ಎಂದು ಹೇಳಿದರು.
ಡಾ.ರಹೀಮ್, ಡಾ.ಶಂಕರ, ಡಾ.ಸಂಧ್ಯಾ ಕಾನೇಕರ್, ಆರೋಗ್ಯ ನಿರೀಕ್ಷಣಾ ಅಧಿಕಾರಿ ಯುಸೂಫ ನಾಕೇದಾರ, ಆರೋಗ್ಯ ಇಲಾಖೆಯ ಶಿವಕುಮಾರ, ಸಂಧ್ಯಾರಾಣಿ, ಸಹರಾ ಇಬ್ರಾಹಿಂ ಸೇಠ ಹಾಗೂ ಪತ್ರಕರ್ತರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಗರದ ಸಹರಾ ಸಭಾಂಗಣದಲ್ಲಿ ಸಿಟಿಜೆನ್ ಕ್ಲಬ್ ವತಿಯಿಂದ ಕೊರೊನಾ ವಾರಿಯರ್ಸ್‌ಗೆ ಆಯೋಜಿಸಲಾದ ಸನ್ಮಾನ ಸಮಾರಂಭದಲ್ಲಿ , ಉಪಾಧ್ಯಕ್ಷ ಜಮೀರ್ ಬೇಗ್, ಪ್ರಧಾನ ಕಾರ್ಯದರ್ಶಿ ಮಹ್ಮದ್ ಅಜರೋದ್ದಿನ್ ಸೇರಿದಂರೆ ಸರ್ವ ಸದಸ್ಯರು ಇದ್ದರು.