ಕಲಬುರಗಿ: ಕೊರೊನಾ ಸೊಂಕಿನಿಂದ ಮರಣ ಹೊಂದಿರುವ ಪ್ರತಿ ಕುಟುಂಬಕ್ಕೆ 5ಲಕ್ಷ ರೂ.ಪರಿಹಾರ ಘೋಷಣೆ ಮಾಡಬೇಕೆಂದು ಅಖಿಲ ಭಾರತ ಯುವಜನ ಒಕ್ಕೂಟ AIYF ಕಲ್ಬುರ್ಗಿ ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್.ಅಟ್ಟೂರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಮೃತಪಟ್ಟವರಲ್ಲಿ ಹೆಚ್ಚು ಜನರು ಕುಟುಂಬದ ಜವಾಬ್ದಾರಿ ಹೊತ್ತಿರುವ ಯಜಮಾನರೆ ಮರಣ ಹೊಂದಿದ್ದಾರೆ ಕುಟುಂಬದ ಅವಲಂಬಿತ ಸದಸ್ಯರ ಸ್ಥಿತಿ ಚಿಂತಾಜನಕ ವಾಗಿದೆ.ಲಕ್ಷ ಲಕ್ಷ ಸಾಲ ಮಾಡಿ ಆಸ್ಪತ್ರೆ ಚಿಕಿತ್ಸೆ ನೀಡಿದರು ಸಾಲವೇ ಉಳಿಯಿತ್ತು ವಿನಃ ಜೀವ ಉಳಿಯಲಿಲ್ಲ. ಸಾಲಗಾರರ ಕರೆಗಳು ಮಾತ್ರ ನಿಲ್ಲುತ್ತಿಲ್ಲ. ಮೊದಲೇ ಯಜಮಾನರನ್ನು ಕಳೆದುಕೊಂಡ ದುಸ್ಥಿತಿಯಲ್ಲಿರುವ ಕುಟುಂಬ ಹೊಟ್ಟೆ ತುಂಬಿಸೋದೇ ಕಷ್ಟದ ಸಂದರ್ಭದಲ್ಲಿ ಸಾಲ ಯಾವ ರೀತಿ ತೀರಿಸಬೇಕೆಂದು ಕಣ್ಣೀರು ಹಾಕುತ್ತಿದ್ದಾರೆ.
ಇಂತಹ ಬಡ ಕುಟುಂಬಗಳ ಕಷ್ಟಕ್ಕೆ ಸರಕಾರ ಬೇಗ ಸ್ಪಂದಿಸಿ ಪರಿಹಾರ ಧನ ನೀಡಬೇಕು. ಕೆಲವರು ಮಗಳ ಮದುವೆ ಮಾಡಬೇಕೆಂದು ನಿಶ್ಚಿತಾರ್ಥ ಮಾಡಿ ವಾರ ಮುಂಚಿತವಾಗಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ, ಮದುವೆಗೆ ಹಣವಿರದೆ ಎಷ್ಟೋ ಮದುವೆಗಳು ರದ್ದಾಗಿವೆ,ಹಲವಾರು ಮಕ್ಕಳು ತಾಯಿ ತಂದೆಯನ್ನು ಕಳೆದುಕೊಂಡು ಅನಾಥವಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕೊರೋನಾ ಸೊ೦ಕಿನಿ೦ದ ಮರಣ ಹೊಂದಿದವರಿಗೆ 1ಲಕ್ಷ ರೂ.ಪರಿಹಾರ ಘೋಷಣೆ ಮಾಡಿರುವುದು ಸ್ವಾಗತಾರ್ಹ, ಆದರೆ ಮೃತಪಟ್ಟವರ ಆಸ್ಪತ್ರೆಯ ವೆಚ್ಚವೇ ಲಕ್ಷ ಲಕ್ಷ ಆಗಿರುತ್ತದೆ.ಅದಕ್ಕಾಗಿ ಕೇಂದ್ರ ಸರಕಾರದಿಂದ ವಿಶೇಷ ಅನುದಾನ ಪಡೆದುಕೊಂಡು ಸಾವಿನಲ್ಲಿ ಬಡವ- ಶ್ರೀಮಂತರೆನ್ನದೆ ಮರಣ ಹೊಂದಿದ ಪ್ರತಿ ಕುಟುಂಬಕ್ಕೂ 5ಲಕ್ಷ ರೂ.ಪರಿಹಾರ ಧನ ನೀಡಿ ಅವಲಂಬಿತ ಕುಟುಂಬದ ಸದಸ್ಯರ ಜೊತೆಗೆ ನಾವಿದ್ದೇವೆ ಎಂದು ಧೈರ್ಯ ತುಂಬುವದರೊಂದಿಗೆ ಸರಕಾರ ಕಷ್ಟಕ್ಕೆ ಬೇಗ ಸ್ಪಂದಿಸಬೇಕೆಂದು ಒತ್ತಾಯಿಸಿದರು.