ಸುರಪುರ: ಸರಕಾರದ ಆದೇಶದಂತೆ ಸೋಮವಾರ ದಿಂದ ೧೫ ರಿಂದ ೨೦ ಬಸ್‌ಗಳನ್ನು ಓಡಿಸಲಾಗುತ್ತದೆ ಎಂದು ಸುರಪುರ ಘಟಕ ವ್ಯವಸ್ಥಾಪಕ ಭದ್ರಪ್ಪ ತಿಳಿಸಿದರು.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ,ಕಳೆದ ಅನೇಕ ದಿನಗಳಿಂದ ಲಾಕ್‌ಡೌನ್ ಘೋಷಣೆಯಾದಾಗಿನಿಂದ ಬಸ್‌ಗಳ ಸಂಚಾರವಿಲ್ಲದೆ ನಿಲ್ಲಿಸಲಾಗಿತ್ತು.ಆದ್ದರಿಂದ ಇಂದು ಬೆಳಿಗ್ಗೆಯಿಂದ ಡಿಪೋದಲ್ಲಿನ ಎಲ್ಲಾ ಬಸ್‌ಗಳಿಗೆ ಸ್ಯಾನಿಟೈಜ್ ಮಾಡಲಾಗುತ್ತದೆ ಜೊತೆಗೆ ಬಸ್ ನಿಲ್ದಾಣದಲ್ಲಿಯೂ ಸ್ಯಾನಿಟೈಜ್‌ಗೊಳಿಸಲಾಗಿದೆ ಎಂದು ತಿಳಿಸಿದರು.ಅಲ್ಲದೆ ಸರಕಾರದ ಆದೇಶದಂತೆ ಸಂಚಾರ ಆರಂಭಿಸಲಾಗುತ್ತಿದ್ದು ಸೀಮಿತ ಮಾರ್ಗಗಳಿಗೆ ಮಾತ್ರ ಬಸ್‌ಗಳು ಓಡಲಿವೆ ಎಂದು ತಿಳಿಸಿದ್ದಾರೆ.ಬಸ್‌ಗಳಲ್ಲಿ ಪ್ರತಿಶತ ೫೦% ರಷ್ಟು ಜನರನ್ನು ಮಾತ್ರ ಪ್ರಯಾಣಿಸಲು ಅನುಮತಿಸಲಾಗಿದೆ.ಅಲ್ಲದೆ ಪ್ರಯಾಣಿಕರ ತಪಾಸಣೆಯೊಂದಿಗೆ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸೋಮವಾರ ಮೊದಲ ದಿನ ಕಲಬುರ್ಗಿ ಯಾದಗಿರಿ ಕೆಂಭಾವಿ ಹುಣಸಗಿ ಸಿಂಧನೂರ ವರೆಗೆ ಓಡಿಸಲು ಆದೇಶವಿದೆ,ಇನ್ನುಳಿದಂತೆ ಹೆಚ್ಚಿನ ಮಾರ್ಗಗಳಿಗೆ ಬಸ್ ಓಡಿಸಲು ಮಾರ್ಗಸೂಚಿ ಬಂದನಂತರ ಇನ್ನುಳಿದ ಕಡೆಗಳಿಗೆ ಬಸ್‌ಗಳನ್ನು ಓಡಿಸಲಾಗುತ್ತದೆ. ಅಲ್ಲದೆ ಗ್ರಾಮೀಣ ಭಾಗಕ್ಕೆ ಇನ್ನೂ ಬಸ್‌ಗಳನ್ನು ಒಡಿಸಲು ಆದೇಶವಿಲ್ಲದ ಕಾರಣ ಅನುಮತಿಯ ವರೆಗೂ ಓಡಿಸುತ್ತಿಲ್ಲ ಎಂದು ತಿಳಿಸಿದ್ದಾರೆ.