ನವದೆಹಲಿ: ದೇಶೆದ ಸಂಪತು ರೈಲ್ವೆ ಇಲಾಖೆಯ ಶತಾಬ್ದಿ ಮತ್ತು ರಾಜಧಾನಿ ಎಕ್ಸಪ್ರೆಸ್ ರೈಲುಗಳನ್ನು ಖಾಸಗೀಕರಣಗೊಳಿಸುವ ಮಾತುಗಳು ಈ ಹಿಂದೆ ಕೇಳಿಬಂದಿತ್ತು, ಎಲ್ಲಾ ಉಹಾಪುಹಾಗಳಿಗೆ ಕೇಂದ್ರ ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ರಾಜ್ಯಸಭೆಯಲ್ಲಿ ಮಾತನಾಡಿ, ಯಾವುದೇ ಕಾರಣಕ್ಕೂ ರೈಲ್ವೇ ಇಲಾಖೆಯನ್ನು ಖಾಸಗೀಕರಣಗೊಳಿಸುವುದಿಲ್ಲ ಎಂದು ಸ್ಟಷ್ಟನೆ ನೀಡಿ, ಖಾಸಗಿ ರೈಲು ಸೇವೆಗೆ ಅನುಮತಿ ನೀಡುವ ಪ್ರಸ್ತಾವನೆ ಸರಕಾರದ ಮುಂದಿದೆ ಎಂದು ತಿಳಿಸಿದ್ದಾರೆ.
ದೇಶದ ಅತೀ ದೊಡ್ಡ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೊಂದಿದ ರೈಲ್ವೆ ಇಲಾಖೆಯ ಖಾಸಗೀಕರಣಗೊಳಿಸುವ ಇರಾದೆ ಸರ್ಕಾರಕ್ಕಿಲ್ಲ. ಆದರೆ ಅವಶ್ಯಕತೆಗನುಗುಣವಾಗಿ ಒಂದು ವೇಳೆ ಖಾಸಗಿ ರೈಲು ಸೇವೆಯ ಅಗತ್ಯತೆ ಕಂಡು ಬಂದರೆ ಈ ಕುರಿತು ಯೋಚಿಸಲಾಗುವುದು ಎಂದು ಗೋಯೆಲ್ ತಿಳಿಸಿದರು.