ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಮಾರಕ: ಲಕ್ಷ್ಮಣ ದಸ್ತಿ

0
47

ಕಲಬುರಗಿ: ವಿಜಯ ಭಾಸ್ಕರ ಸಮಿತಿಯ  ಆಡಳಿತ ಸುಧಾರಣೆ ವರದಿಯಂತೆ ಪ್ರಾದೇಶಿಕ ಆಯುಕ್ತರ ಕಛೇರಿ ರದ್ದು ಮಾಡುವುದು ಆಡಳಿತ ವಿಕೇಂದ್ರಿಕರಣ ವ್ಯವಸ್ಥೆಗೆ ವಿರುದ್ಧವಾಗಿದೆ. ಹಿಂದುಳಿದ  ಕಲ್ಯಾಣ ಕರ್ನಾಟಕ ಪ್ರದೇಶದಂತಾ ನಮ್ಮ ಭಾಗದ ಅಭಿವೃದ್ಧಿಗೆ ಇದು ಮಾರಕವಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ವಿಜಯ ಭಾಸ್ಕರ ಸಮಿತಿಯ  ಆಡಳಿತ ಸುಧಾರಣೆಯ  ವರದಿಯಲ್ಲಿ ಬಹಳಷ್ಟು ಅಂಶಗಳು ಜನಪರ ಆಡಳಿತಕ್ಕೆ ಪೂರಕವಾಗಿವೆ ಅದಕ್ಕೆ ನಮ್ಮ ಸಮತಿ ಸ್ವಾಗತಿಸುತ್ತದೆ  ಆದರೆ ಪ್ರಾದೇಶಿಕ ಆಯುಕ್ತರ ಕಛೇರಿ ರದ್ದು ಮಾಡಿ ಕಂದಾಯ ಆಯುಕ್ತಾಲಯದ  ರಚನೆಯ   ಶಿಫಾರಸ್ಸು  ರಾಜಧಾನಿ ಬೆಂಗಳೂರಿಗೆ ಅಧಿಕಾರ ಕೇಂದ್ರೀರಣ ಮಾಡಿದಂತಾಗುವದು. ರಾಜಧಾನಿ ಬೆಂಗಳೂರಿನಿಂದ ಬಹು ದೂರವಿರುವ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಇದರಿಂದ ಬಹಳ ತೊಂದರೆ ಆಗುವುದರಲ್ಲಿ ಸಂಶಯವೆ ಇಲ್ಲಾ ಸಮಿತಿ ಇದಕ್ಕೆ ಬಲವಾಗಿ ಖಂಡಿಸುತ್ತದೆ.

Contact Your\'s Advertisement; 9902492681

ಸರಕಾರ ಪ್ರಾದೇಶಿಕ ಆಯುಕ್ತರ ಕಛೇರಿ ರದ್ದು ಮಾಡುವ ಶಿಫಾರಸ್ಸು ಕೈ ಬಿಡಬೇಕು. ಈ  ಬಗ್ಗೆ ಕಲ್ಯಾಣ ಕರ್ನಾಟಕ ಪ್ರದೇಶದ ಸಚಿವರು, ಸಂಸದರು, ಶಾಸಕರು ಗಂಭೀರವಾಗಿ ಪರಿಗಣಿಸಲು ಸಮಿತಿ ಒತ್ತಾಯಿಸುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here