ಜಾಗತಿಕ ಲಿಂಗಾಯಿತ ಮಹಾಸಭಾ ನೂತನ ಕಾರ್ಯಲಯ ಉದ್ಘಾಟನೆ

0
62

ಅಫಜಲಪುರ : ಅಫಜಲಪುರ ಪಟ್ಟಣದ ಬಸಣ್ಣ ಗುಣಾರಿ ಬಿಲ್ಡಿಂಗನಲ್ಲಿ ತಾಲೂಕ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಲಯವನ್ನು ಬೆಂಗಳೂರಿನ ಜಾಗತಿಕ ಲಿಂಗಾಯಿತ ಮಹಾಸಭಾ ಸದಸ್ಯರಾದ ಡಾ. ಜೆ.ಎಸ್.ಪಾಟೀಲ ಅವರು ಉದ್ಘಾಟಿಸಿ ನೆರವೇರಿಸಿದರು.

ನಂತರ ಮಾತನಾಡಿದ ಅವರು ಜಾಗತಿಕ ಲಿಂಗಾಯತ ಮಹಾಸಭೆ ರಾಷ್ಟ್ರ ಮಟ್ಟದಲ್ಲಿ ಉದ್ಘಾಟಿಸಿಲು ಕಾರಣ ಮತ್ತು ಅದರ ಅನಿವಾರ್ಯತೆಯನ್ನು ತಿಳಿಸಿದಲ್ಲದೇ ಲಿಂಗಾಯತ ಧರ್ಮದ ಒಗ್ಗಟ್ಟಿಗಾಗಿ ಐತಿಹಾಸಿಕ ಸೈದ್ದಾಂತಿಕ, ಸಂಘಟನಾತ್ಮಕ ನೆಲೆಗಟ್ಟು ಅನಿವಾರ್ಯವೆಂದರು.

Contact Your\'s Advertisement; 9902492681

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ವಿಶ್ವನಾಥ ಕೋಣೇಶ್ವರರು ಮಾತನಾಡಿ ನಿಮ್ಮ‌ ನಂತರದ ಪೀಳಿಗೆಗೆ ಅಂದರೆ ಯುವಕರಿಗೆ ಲಿಂಗಾಯತ ಧರ್ಮದ ತತ್ವ ಸಿದ್ದಾಂತಗಳು ತಿಳುವಳಿಕೆ ನೀಡುವುದು ಬಹಳ ಅಗತ್ಯವಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.  ಕಲ್ಬುರ್ಗಿ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅದ್ಯಕ್ಷರಾದ ಪ್ರಭುಲಿಂಗ ಮಹಾಗಾಂವಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದ ನೇತೃತ್ವವನ್ನು ಅಫಜಲಪುರ ತಾಲೂಕ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಬಸಣ್ಣ ಗುಣಾರಿ ಅವರು ಮಾತನಾಡಿ ತಾಲೂಕ ಮಟ್ಟದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಕಚೇರಿ ಪ್ರಾರಂಭ ಮಾಡುವುದು ಬಹುದಿನದ ಆಸೆಯಾಗಿತ್ತು ಇಂದು ಉದ್ಘಾಟನೆಗೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು ಈ ಕಾರ್ಯಲಯದಲ್ಲಿ ಇನ್ನು ಮುಂದೆ ಹತ್ತು ಹಲವಾರು ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದ ಅವರು ಈಗಾಗಲೇ ಮಹಾಸಭಾದ ಅಡಿಯಲ್ಲಿ ತಾಲೂಕ ಮಟ್ಟಣದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳು ಮತ್ತು ಬಸವಣ್ಣನವರ ಚಿಂತನೆ ಹಾಗೂ ವಿಚಾರಗಳು ಜರುಗಿವೆ ಎಂದು ತಿಳಿಸಿದರು.
ಪ್ರಸ್ತಾವಿಕವಾಗಿ ಶರಣ ಅಮೃತರಾವ ಪಾಟೀಲ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶರಣ ಗೋಪಾಲ ಹಳ್ಳಾಳ ಅವರು ಫ.ಗು.ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು, ಕಾರ್ಯಕ್ರಮದದಲ್ಲಿ ಕಲ್ಬುರ್ಗಿ ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಆರ್.ಜಿ.ಶೆಟಗಾರ, ರೈತಪರ ಹೋರಾಟಗಾರ ಶ್ರೀಮಂತ ಬಿರಾದಾರ, ಸದಾಶಿವ ಮೇತ್ರೆ, ರಾಜೇಂದ್ರ ನಿರೋಣಿ, ಡಾ.ಸಿ.ವಿ.ಟಕ್ಕಳಕಿ, ಶಂಕ್ರೆಪ್ಪ ಮಣ್ಣೂರ, ಮುರಗೇಂದ್ರ ಮಸಳಿ, ಸಿದ್ದಣಗೌಡ ಮಾಲಿಪಾಟೀಲ, ಇದ್ದರು.

ವಚನ ಸಂಗೀತವನ್ನು ಶರಣೆ ಮಹಾನಂದ ಪಾಟೀಲ ನಡಿಸಿಕೊಟ್ಟರು,ಪ್ರ.ಕಾರ್ಯದರ್ಶಿ ಮಹೇಶ ಆಲೇಗಾಂವ ಅವರು ಸ್ವಾಗತಿಸಿದರು. ನಿರೂಪಣೆಯನ್ನು ಸ್ಪೂರ್ತಿ ಕಾಲೇಜಿನ ಸಂಸ್ಥಾಪಕರಾದ ಜಿ.ಎಸ್.ಬಾಳಿಕಾಯಿ ನಡಿಸಿಕೊಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here