ಶಹಾಬಾದ: ನಗರದಲ್ಲಿ ಡೆಂಗ್ಯೂ ಸಾಂಕ್ರಾಮಿಕ ರೋಗಗಳ ಭೀತಿಯ ಹಿನ್ನೆಲೆಯಲ್ಲಿ ಸೊಳ್ಳೆಗಳ ಹಾವಳಿ ನಿಯಂತ್ರಿಸಲು ನಗರಸಭೆಯಿಂದ ಫಾಗಿಂಗ್ ಸಿಂಪರಣೆ ಕಾರ್ಯ ಭರದಿಂದ ಸಾಗಿದೆ. ಫಾಗಿಂಗ್ ಯಂತ್ರ ಬಳಸಿ ನಗರಸಭೆಯ ಸಿಬ್ಬಂದಿಗಳು ವಾರ್ಡ ನಂ. ೧೪ ಹಾಗೂ ೧೫ರ ಬಡಾವಣೆಯ ಪ್ರತಿಯೊಂದು ಮನೆಗೆ ಭೇಟಿ ನೀಡಿ ಮನೆಯ ಹೊರಗೆ ಫಾಗಿಂಗ್ ಕಾರ್ಯ ನಡೆಸಿದರು.
ಈಗಾಗಲೇ ವಾರ್ಡ ನಂ. ೧೪ರಲ್ಲಿ ಡೆಂಗ್ಯೂ ರೋಗ ಬಾಲಕರಲ್ಲಿ ಕಾಣಿಸಿಕೊಂಡಿದ್ದು , ಆ ಪ್ರದೇಶದಲ್ಲಿ ಫಾಗಿಂಗ್ ಮಾಡಲಾಗುತ್ತಿದೆ. ಸೊಳ್ಳೆಗಳು ಹೆಚ್ಚು ಬಾದಿಸುತ್ತಿರುವ ಪಟ್ಟಣದ ವಾರ್ಡಗಳಿಗೆ ಫಾಗಿಂಗ್ ಮಾಡುವ ಕಾರ್ಯ ನಿರಂತರ ನಡೆಯುತ್ತಿದೆ.ಇದಾದ ನಂತರ ನಗರಸಭೆಯ ಎಲ್ಲಾ ವಾರ್ಡಗಳಲ್ಲಿಯೂ ಫಾಗಿಂಗ್ ಕಾರ್ಯ ನಡೆಯಲಿದೆ ಎಂದು ನಗರಸಭೆಯ ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ತಿಳಿಸಿದರು.
ಈಗಾಗಲೇ ನಗರಸಭೆಯ ಆರೋಗ್ಯ ನಿರೀಕ್ಷಕರು ಹಾಗೂ ನಗರಸಭೆಯ ಸದಸ್ಯರು ಸೇರಿಕೊಂಡು ಡೆಂಗ್ಯೂ ಪೀಡಿತರ ಮನೆಮನೆಗೆ ಬೇಟಿ ನೀಡಿ ವಿಚಾರಿಸಿದ್ದಾರೆ.ಅಲ್ಲದೇ ಮನೆಯ ಮುಂದಿನ ಚರಂಡಿ ತುಂಬಿಕೊಂಡಿದೆ.ಸೊಳ್ಳೆಗಳ ಹಾವಳಿ ವಿಪರೀತವಾಗಿದೆ ಎಂದು ಸಾರ್ವಜನಿಕರು ದೂರು ಸಲ್ಲಿಸಿದ್ದಾರೆ.ಅದಕ್ಕೆ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಎಲ್ಲಾ ಕ್ರಮಕೈಗೊಂಡಿದಲ್ಲದೇ ಚರಂಡಿ ಸುತ್ತಮುತ್ತ ಹಾಗೂ ಸೊಳ್ಳೆಗಳ ಹಾವಳಿ ಹೆಚ್ಚಾಗಿರುವ ಸ್ಥಳದಲ್ಲಿ ಬ್ಲಿಚಿಂಗ್ ಪೌಡರ್ ಕೂಡ ಸಿಪಂರಣೆ ಮಾಡಲಾಗಿದೆ.
ಅಲ್ಲದೇ ಮನೆಯ ಸುತ್ತಮುತ್ತ ಒಡೆದ ಬಾಟಲ್, ಹಳೆ ಟೈರ್, ಡ್ರಮ್‌ಗಳಲ್ಲಿ ಶೇಖರಣೆಗೊಂಡ ನೀರನ್ನು ಆದಷ್ಟು ವಾರದೊಳಗೆ ಇಲ್ಲದಂತೆ ಮಾಡಬೇಕು. ಒಂದು ವೇಳೆ ಒಂದು ವಾರ ನೀರು ಇದ್ದರೇ ಅದರಲ್ಲಿ ಸೊಳ್ಳೆಗಳ ಲಾರ್ವಾ ಉತ್ಪತ್ತಿಯಾಗುತ್ತದೆ.ಆದಷ್ಟು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಳೆಗಾಲ ಇರುವುದರಿಂದ ಹೆಚ್ಚಾಗಿ ಬಿಸಿ ನೀರು ಕುಡಿಯುವುದನ್ನು ರೂಡಿಸಿಕೊಳ್ಳಬೇಕೆಂದು ಜಾಗೃತಿ ಮೂಡಿಸಿದರು.
ಮೋಡ ಕವಿದ ವಾತಾವರಣ, ಮಳೆ ಮತ್ತು ಚರಂಡಿಯಲ್ಲಿ ಕೊಳಚೆ ಶೇಖರಣೆಯಿಂದ ಸಾಂಕ್ರಾಮಿಕ ರೋಗಗಳ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.ನಗರದ ಕೆಲ ಬಡಾವಣೆಯಲ್ಲಿ ಡೆಂಗ್ಯೂ ಪತ್ತೆಯಾದ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸಲು ಫಾಗಿಂಗ್, ಚರಂಡಿ ಸ್ವಚ್ಛತೆ ಹಾಗೂ ಬ್ಲಿಚಿಂಗ್ ಪೌಡರ್ ಬಳಕೆ ಮಾಡುವುದರ ಮೂಲಕ ಸೊಳ್ಳೆಗಳ ನಿಯಂತ್ರಣಕ್ಕೆ ಎಲ್ಲಾ ಕ್ರಮ ಕೈಗೊಂಡಿದ್ದೆವೆ- ಡಾ.ಕೆ.ಗುರಲಿಂಗಪ್ಪ ಪೌರಾಯುಕ್ತ ನಗರಸಭೆಯ ಶಹಾಬಾದ.