ಕಲಬುರಗಿ: ಕರ್ನಾಟಕ ರಾಜ್ಯ ಬರಹಗಾರರ ಬಳಗದ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಆನ್ ಲೈನ್ ಕವಿಗೋಷ್ಠಿಗೆ ಯುವ ಕವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಾಹಿತಿ ಧರ್ಮಣ್ಣ ಧನ್ನಿ ತಿಳಿಸಿದ್ದಾರೆ.
ಈ ವಾರ ಪ್ರಕೃತಿ ವಿಷಯವಾಗಿ ಸ್ವರಚಿತ ಕವನ ರಚನಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ಸಿದ್ದರಾಮ ಸರಸಂಬಿ(ಪ್ರಥಮ), ಮಂಜುಳಾ ಗುತ್ತೇದಾರ(ದ್ವಿತೀಯ) ಮತ್ತು ಸ್ಮೀತಾ ಭಂಡಾರಿ(ತೃತೀಯ) ಹಾಗೂ ಎನ್ ಆರ್ ರಗಟೆ ಮತ್ತು ಮಲ್ಲಮ್ಮ ಕಾಳಗಿ ಅವರ ಕವನಗಳು ಮೆಚ್ಚುಗೆ ಪಡೆದವು. ಶಿಕ್ಷಕಿ ಚಂದ್ರಕಲಾ ಪಾಟೀಲ ಅವರು ತೀರ್ಫುಗಾರರಾಗಿದ್ದರು. ಬಳಗದ ಅಧ್ಯಕ್ಷ ಮಹಾಂತೇಶ ಎನ್ ಪಾಟೀಲ ಅವರು ನೇತೃತ್ವ ವಹಿಸಿದರು.
ಈ ಕವಿಗೋಷ್ಠಿಯಲ್ಲಿ ಒಟ್ಟು ೨೫ ಜನ ಕವುಗಳು ಪಾಳ್ಗೊಂಡಿದ್ದರು. ಹಾಗೂ ಬರಹಗಾರರ ಬಳಗದ ಕಲಬುರಗಿ ಉತ್ತರ ವಲಯದ ವತಿಯಿಂದ ನಡೆದ ಕವಿಗೋಷ್ಠಿ ಸ್ಪರ್ಧೆಯಲ್ಲಿ ಸಿದ್ದರಾಮೇಗೌಡ ಅರಳಕುಪ್ಪೆ ಅವರು ಪ್ರಥಮ ಸ್ಥಾನ ಪಡೆದರು. ತಂಡ ಮುಖ್ಯಸ್ಥೆ ರೇಣುಕಾ ಶ್ರೀಕಾಂತ ಅವರು ನಿರ್ವಾಹಕರಾಗಿದ್ದರು. ಶಿಕ್ಷಕಿ ಸುರೇಖಾ ಬಿರಾದಾರ ತೀರ್ಫುಗಾರಾಗಿ ಕೆಲಸ ನಿರ್ವಹಿಸಿದರು.