ಜಮಶೆಟ್ಟಿ ಬಡಾವಣೆಗೆ ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿ ಮನವಿ

0
10

ಕಲಬುರಗಿ: ನಗರದ ವಾರ್ಡ್ ನಂ, ೪೮ರಲ್ಲಿ ಬರುವ ಜಮಶೆಟ್ಟಿ ನಗರ ಬಡಾವಣೆಗೆ ಅಗತ್ಯ ಮೂಲ ಭೂತ ಸೌಕರ್ಯಗಳನ್ನು ಒದಗಿ ಸುವಂತೆ ಜೈಕನ್ನಡಿಗರ ಸೇನೆಯ ನಿಯೋಗ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲಲಿಸಿ ಒತ್ತಾಯಿಸಿದೆ. ಜಮಶೆಟ್ಟಿ ಬಡಾವಣೆ ಅಗತ್ಯ ಮೂಲ ಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ ಒಳಚರಂಡಿ, ವಿದ್ಯುತದೀಪ ಸೇರಿದಂತೆ ವಿವಿಧ ಸಮಸ್ಯೆಗಳಿಂದ ನರಳುತ್ತಿದ್ದು, ಮಳೆ ನೀರು ನಿಂತು ಸಂಚಾರಕ್ಕೆ ತೀವ್ರ ಅಡ್ಡಿಯಾಗುತ್ತಿದೆ, ಎಂದು ಸೇನೆಯ ಅಧ್ಯಕ್ಷ ದತ್ತು ಎಚ್. ಭಾಸಗಿ ಅವರು ಪಾಲಿಕೆ ಆಯುಕ್ತರಿಗೆ ಮನವಿಕೆ ಮಾಡಿದರು.

ಈ ಬಡಾವಣೆಯ ಮುಖ್ಯ ರಸ್ತೆಗಳು ಹಾಗೂ ಬಡಾವಣೆಯ ಒಳಗಿನ ರಸ್ತೆಗಳು ತುಂಬಾ ಹದಗೆಟ್ಟು ಹೋಗಿದ್ದು, ಮಳೆಬಂದಾಗ ರಸ್ತೆಯ ತುಂಬೆಲ್ಲ ನೀರು ನಿಲ್ಲುವುದರಿಂದ ರಸ್ತೆಯ ಮೇಲೆ ವಾಹನಗಳ ಸಂಚಾರಕ್ಕೂ ಮತ್ತು ನಡೆದುಕೊಂಡು ಹೋಗುವುದಕ್ಕೂ ಆಗುವುದಿಲ್ಲ. ವಯಸ್ಸಾದ ವಯೋವೃದ್ಧರು ಚಿಕ್ಕ ಮಕ್ಕಳಿಗೆ ತೊಂದರೆಯಾಗುತ್ತಿದೆ ಕೂಡಲೇ ರಸ್ತೆ, ಚರಂಡಿ ನಿಮಾರ್ಣಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಅವರು ಮನವಿ ಮಾಡಿದರು.

Contact Your\'s Advertisement; 9902492681

ಓಡಾಡುವುದರಿಂದ ರಸ್ತೆ ಮೇಲೆ ನೀರಿನಿಂದ ಅಪಘಾತವಾಗುವ ಸಂದರ್ಭಗಳು ಇರುತ್ತವೆ ವಿದ್ಯುತ ದೀಪಗಳು ಸರಿಯಾಗಿಲ್ಲದ ಕಾರಣ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದೆ ಜನರಿಗೆ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ.ಈ ಬೇಡಿಕೆಯನ್ನು ಪರಿಶೀಲಿಸಿ ಅತಿ ಶೀಘ್ರವೇ ಕ್ರಮ ಕೈಗೊಂಡು ಬಡಾವಣೆಗೆ ಮೂಲ ಭೂತ ಸೌಕರ್ಯ ಒದಗಿಸಿ ಕೊಡ ಬೇಕೆಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಶೇಷಗಿರಿ ಮರತೂರಕರ್, ಸಿದ್ದು ಬುರನ್ನಪುರ, ಶರಣು, ಸಿದ್ದು, ನವೀನ್, ಪ್ರಶಾಂತ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here