ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು: ಇರ್ಷಾದ್ ಅಲಿ

0
14

ಕಲಬುರಗಿ: ಘನ ಮತ್ತು ದ್ರವ ತ್ಯಾಜ್ಯವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕಾಗಿರುವುದು ಪ್ರತಿಯೊಂದು ಬಡಾವಣೆಯಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಎಲ್ಲರೂ ಶ್ರಮಿಸಬೇಕು ಮತ್ತು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕಿದೆ.

ಸ್ವಚ್ಛತೆಯಿರುವ ಕುಟುಂಬ ಸುಖಿ ಕುಟುಂಬ ಎಂಬ ನಾನ್ನುಡಿಯಂತೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಪರಿಕಲ್ಪನೆ ನಮ್ಮಲ್ಲಿ ಮೊದಲಿನಿಂದಲ್ಲೂ ಬೇರೂರಿದೆ. ಸ್ವಚ್ಛತೆ ಎಲ್ಲಿರುತ್ತದೆಯೋ ಅಲ್ಲೇ ಅಭಿವೃದ್ಧಿಯಿರುತ್ತದೆ, ಆದಕಾರಣ ನಮ್ಮ ಮನೆ-ನಮ್ಮ ಗ್ರಾಮ ಸ್ವಚ್ಛವಾಗಿಟ್ಟುಕೊಳ್ಳುವುದಾಗಿ ಪ್ರತಿಯೊಬ್ಬರು ಪ್ರತಿಜ್ಞೆ ಮಾಡಬೇಕೆಂದು ದಲಿತ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಅಲಿ ಹೇಳಿದರು.

Contact Your\'s Advertisement; 9902492681

ಮಹಾನಗರ ಪಾಲಿಕೆಯ ವಾರ್ಡ್ 38 ರಲ್ಲಿ ಬರುವ ಹೀರಾಪೂರ ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಅವರು, ಕಳೆದ ಮೂರು ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಬಡಾವಣೆಯಲ್ಲಿ ಎಲ್ಲಾ ಚರಂಡಿಗಳು ತುಂಬಿ ಹೋಗಿದ್ದು, ನೀರು ರಸ್ತೆಯ ಮೇಲೆ ಬರುತ್ತಿರುವುದರಿಂದ ಬಡಾವಣೆಯ ನಾಗರೀಕರಿಗೆ ಓಡಾಡಲು ಅಸ್ತವ್ಯಸ್ತ ಆಗುತ್ತಿರುವುದರಿಂದ ಚರಂಡಿಗಳಲ್ಲಿ ಸಿಲುಕಿಕೊಂಡಿರುವಂತಹ ಕಸವನ್ನು ತೆಗೆಸಿ ಸ್ವಚ್ಛತೆಯನ್ನು ಮಾಡಲಾಯಿತು ಎಂದರು.

ಶಿಸ್ತು ಹಾಗೂ ಆದರ್ಶ ಪಾಲಿಸುವುದರೊಂದಿಗೆ ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡಿದರೆ ಆರೋಗ್ಯವಂತರಾಗಿರಬಹುದು ಎಂದು ಅಭಿಪ್ರಾಯಪಟ್ಟರು. ಬಡಾವಣೆಯ ರಸ್ತೆಯ ಪಕ್ಕದಲ್ಲಿ ಬಳೆದಿರುವ ಗಿಡಗಂಟಿಗಳನ್ನು ತೆಗೆಸಲಾಯಿತು.

ಬಡಾವಣೆಯಲ್ಲಿ ಹಂದಿಗಳ ಕಾಟ ಹೆಚ್ಚಾಗಿರುವುದರಿಂದ ಹಂದಿಗಳನ್ನು ಬೇರೆಡೆ ಸ್ಥಳಾಂತರಿಸಲಾಯಿತು ಎಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here