ಬೆಳಗಾವಿ: ರಮೇಶ್ ಜಾರಕಿಹೊಳಿ ರಾಜೀನಾಮೆಗೆ ತ್ರಿ ಈಡಿಯಟ್ಸ್ ಅಳಿಯಂದಿರೇ ಕಾರಣ ಎಂದು ಗೋಕಾಕ್ ನಲ್ಲಿ ಸಹೋದರ ಲಖನ್ ಜಾರಕಿಹೊಳಿ ಗಂಭೀರ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಕಳೆದ ಒಂದು ವರ್ಷದಿಂದ ನಮ್ಮೊಂದಿಗೆ ಸಂಪರ್ಕದೊಂದಿಗೆ ಇಲ್ಲ. ಅಂಬಿರಾವ್, ಅಪ್ಪಿರಾವ್, ಶಂಕರ್ ಪಾಟೀಲ್ ಮೂರು ಜನ ಅಳಿಯಂದಿರ ಮಾತು ಕೇಳಿ ಈ ರೀತಿ ರಮೇಶ್ ಮಾಡುತ್ತಿದ್ದಾರೆ ಎಂದು ಗುಡುಗಿದ ಅವರು, ನಾನು ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತರಾಗಿದ್ದೇವೆ. ಗೋಕಾಕ್ ಕಾಂಗ್ರೆಸ್ ನ ಭದ್ರಕೋಟೆ ಪಕ್ಷವನ್ನು ಕಟ್ಟಿ ಬೆಳೆಸುತ್ತೇವೆ ಎಂದರು.
ಅವರು ಹೇಳಿದರೆ ಚುನಾವಣೆಯಲ್ಲಿ ರಮೇಶ್ ವಿರುದ್ಧ ಸ್ಪರ್ಧೆಗೆ ಸಿದ್ದ. ಕಳೆದ ಒಂದು ವರ್ಷದಿಂದ ಅವರ ಸಂಪರ್ಕ ಬಿಟ್ಟಿದ್ದೇನೆ. ಅಳಿಯರ ಮಾತು ಕೇಳಿ ಸಹೋದರರನ್ನ ರಮೇಶ್ ದೂರು ಮಾಡಿಕೊಂಡಿದ್ದಾರೆ. ಅಳಿಯ ಅಪ್ಪಿರಾವ್ ಪಾಟೀಲ್ ಮಹಾರಾಷ್ಟ್ರದ ಗಡಹಿಂಗ್ಲಜ್ ನಿಂದ ಶಾಸಕರಾಗಲು ರಮೇಶ್ ನ ತಲೆಕೆಡಸಿದ್ದಾರೆ ಎಂದು ಆರೋಪಿಸಿದರು.
ಅಳಿಯರ ಮಾತು ಕೇಳಿ ರಮೇಶ್ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ, ಈಗ ರಾಜೀನಾಮೆ ಕೊಡುತ್ತಿದ್ದಾರೆ. ರಮೇಶ್ ಹೋದ ಮೇಲೆ ಗೋಕಾಕ್ ನಲ್ಲಿ ನಾನೇ ಕಾಂಗ್ರೆಸ್ ಮುನ್ನಡೆಸುತ್ತೇನೆ ಎಂದು ಹೇಳಿದರು.