ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಗ್ರಾಪಂ ನೌಕರರಿಂದ ಧರಣಿ

0
56

ಶಹಾಬಾದ: ತಾಲೂಕಿನ ವಿವಿಧ ಗ್ರಾಪಂಗಳ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಗುರುವಾರ ತಾಪಂ ಎದುರುಗಡೆ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದಿಂದ ಅರ್ನಿದಿಷ್ಟ ಧರಣಿ ಸತ್ಯಾಗ್ರಹ ನಡೆಸಿದರು.

ಬೆಳಿಗ್ಗೆಯಿಂದಲೇ ಪ್ರಾರಂಭವಾದ ಮಳೆಯನ್ನು ಲೆಕ್ಕಿಸದೇ ಪ್ರತಿಭಟನಾಕಾರರು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ತಾಪಂ ಅಧಿಕಾರಿಗಳಿಗೆ ಒತ್ತಾಯಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಮುಖಂಡ ಸುನೀಲ ಮಾನ್ಪಡೆ, ತಾಲೂಕಿನ ವಿವಿಧ ಗ್ರಾಪಂಗಳ ಸಿಬ್ಬಂದಿಗಳ ವೇತನ ನೀಡುತ್ತಿಲ್ಲ. ಸುಮಾರು ಒದೊಂದು ಗ್ರಾಪಂ ನೌಕರರ ೧೪ರಿಂದ ೧೫ ತಿಂಗಳಿನಿಂದ ವೇತನ ನೀಡದಿರುವುದರಿಂದ ನೌಕರರು ಸಂಕಷ್ಟದಲ್ಲಿದ್ದಾರೆ. ಅವರ ಕುಟುಂಬದ ನಿರ್ವಹಣೆ ಮಾಡುವುದು, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ತಪಾಸಣೆಗೂ ಹಣವಿಲ್ಲದೇ ತೊಂದರೆಪಡುತ್ತಿದ್ದಾರೆ.ಸರ್ಕಾರ ವೇತನ ನೀಡಲು ಆದೇಶ ನೀಡಿದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ನೌಕರರ ನರಳಾಟಕ್ಕೆ ಕಾರಣವಾಗಿದೆ.ಇಂದು ಅನಿವಾರ್ಯವಾಗಿ ಬೀದಿಗಿಲಿದು ಹೋರಾಟ ನಡೆಸಬೇಕಾಗಿ ಬಂದಿದೆ ಎಂದರು.

ಅಲ್ಲದೇ ವಿವಿಧ ಬೇಡಿಕೆಗಳಾದ ೧೫ ನೇ ಹಣಕಾಸು ಯೋಜನೆಯಡಿ ೧೦% ಅನುದಾನದಲ್ಲಿ ಸಿಬ್ಬಂದಿಗಳ ವೇತನ ಪಾವತಿಸಬೇಕು. ತೊನಸನಹಳ್ಳಿ(ಎಸ್) ಗ್ರಾಪಂ ಕರ ವಸೂಲಿಗಾರರಾಗಿ ಸೇವೆ ಸಲ್ಲಿಸಿ ಗ್ರೇಡ-೨ ಕಾರ್ಯದರ್ಶಿಯಾಗಿ ಪದನ್ನೋತಿ ಹೊಂದಿದ ಪ್ರಯುಕ್ತ ಖಾಲಿಯಾಗಿರುವ ಕರ ವಸೂಲಿಗಾರ ಹುದ್ದೆಗೆ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಪಂಪ ಆಪರೇಟರ್‌ದಿಂದ ಬಿಲ್ ಕಲೆಕ್ಟರ್‌ಗೆ ಪದೋನ್ನತಿ ನೀಡಬೇಕು. ಗ್ರಾಪಂ ಸಿಬ್ಬಂದಿಗಳ ಅಕ್ರಮ ನೇಮಕಾತಿ ಮಾಡಿಕೊಂಡಿರುವ ಬಗ್ಗೆ ತನಿಖೆ ಮಾಡಿ ನೇಮಕಾತಿ ರದ್ದು ಪಡಿಸಬೇಕು.

ಪ್ರಸ್ತುತ ಸೇವೆ ಸಲ್ಲಿಸಿರುವ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಗಳ ದಾಖಲೆಗಳು ಸಂಬಂಧಿಸಿದ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಂದ ಸಂಘಕ್ಕೆ ಸಲ್ಲಿಸಬೇಕು. ಎಲ್ಲಾ ಗ್ರಾಪಂಗಳಲ್ಲಿ ಸಿಬ್ಬಂದಿಗಳ ಸೇವಾ ಪುಸ್ತಕ ನಿರ್ವಹಣೆ ಮಾಡಬೇಕು. ಸಿಬ್ಬಂದಿಗಳ ಬಾಕಿ ಉಳಿದ ಜಿಪಂ ಅನುಮೋದನೆ ಶೀಘ್ರವೇ ಮಾಡಬೇಕು. ಸರ್ಕಾರಿ ಆದೇಶದಂತೆ ಕರ ವಸೂಲಿಯಲ್ಲಿ ೪೦% ಸಿಬ್ಬಂದಿ ವೇತನ ಪಾವತಿಸಬೇಕು. ಇಎಫ್‌ಎಮ್‌ಐ ಬಾಕಿ ಇರುವ ಸಿಬ್ಬಂದಿಗಳನ್ನು ಅನುಮೋದಿಸಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಹಲವಾರು ಬಾರಿ ತಿಳಿಸಿದರೂ ಬೇಡಿಕೆಗಳು ಈಡೇರಿಲ್ಲ.ಆದ್ದರಿಂದ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು.ಇಲ್ಲದಿದ್ದರೇ ಉಗ್ರವಾದ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಂತರ ಒಂದು ದಿನದಲ್ಲಿ ಬೇಡಿಕೆ ಈಡೇರಿಸಬೇಕು.ಇಲ್ಲದಿದ್ದರೇ ಹೋರಾಟ ಮುಂದುವರೆಯುತ್ತದೆ ಎಂದು ತಾಪಂ ಇಓ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ತಾಲೂಕಾ ಉಪಾಧ್ಯಕ್ಷ ಸಿದ್ರಾಮಯ್ಯಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ.ಸಿ. ಹೊನಗುಂಟಾ, ಖಜಾಂಚಿ ಚಿತ್ರಶೇಖರ ದೇವರಮನಿ, ಸಿಐಟಿಯು ತಾಲೂಕಾಧ್ಯಕ್ಷ ಶೇಖಮ್ಮ ಕುರಿ, ಎಸ್‌ಎಫ್‌ಐನ ಸಿದ್ದಲಿಂಗ ಪಾಳಾ, ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಪೂಜಪ್ಪ ಮೇತ್ರೆ, ವಿಶ್ವರಾಜ ಫಿರೋಜಬಾದ ಸೇರಿದಂತೆ ಗ್ರಾಪಂ ಸಿಬ್ಬಂದಿಗಳ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here