ಶಹಾಬಾದ: ನಗರದಲ್ಲಿ ಗುರುವಾರ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನಡೆದ ಪರೀಕ್ಷಾ ಕೇಂದ್ರಗಳಿಗೆ ತಹಸೀಲ್ದಾರ ಸುರೇಶ ವರ್ಮಾ, ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯಸ್ವಾಮಿ ರುದ್ನೂರ, ಜಿಲ್ಲಾ ಉಪನಿರ್ದೇಶಕ ಅಶೋಕ ಭಜಂತ್ರಿ ಅವರು ಬೇಟಿ ನೀಡಿ ವೀಕ್ಷಣೆ ಮಾಡಿದರು.
ಶಹಾಬಾದ ತಾಲೂಕಿನಲ್ಲಿ ಗಂಗಮ್ಮ ಎಸ್. ಮರಗೋಳ, ಬಾಲ ವಿದ್ಯಾ ಮಂದಿರ, ಎಸ್.ಜಿ.ವರ್ಮಾ, ಬಸವ ಸಮಿತಿ, ಎಮ್‌ಸಿಸಿ ಹಾಗೂ ಭಂಕೂರ ಸರಕಾರಿ ಪ್ರೌಢಶಾಲೆಗಳಲ್ಲಿ ಪರೀಕ್ಷೆ ನಡೆದಿವೆ. ಆರು ಪರೀಕ್ಷಾ ಕೇಂದ್ರಗಳಿದ್ದು ಸುಮಾರು ೧೫೪೦ ಮಕ್ಕಳು ಪರೀಕ್ಷೆ ಬರೆದರು. ಪರೀಕ್ಷೆಯ ಕೊನೆಯ ದಿನವಾದ ಗುರುವಾರ ಎಲ್ಲಾ ಮಾಧ್ಯಮದ ೩ ಭಾಷಾ ವಿ?ಯಗಳ ಪರೀಕ್ಷೆಗಳು ಶಾಂತಿಯುತವಾಗಿ ಜರುಗಿತು.
ಪರೀಕ್ಷಾ ಕೇಂದ್ರಗಳಿಗೆ ತಹಸೀಲ್ದಾರ ಸುರೇಶ ವರ್ಮಾ, ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯಸ್ವಾಮಿ ರುದ್ನೂರ, ಡಿಡಿಪಿಐ ಭಜಂತ್ರಿ ಅವರು ಬೇಟಿ ನೀಡಿ ಪರಿಶೀಲಿಸಿದರು.
ಅಲ್ಲದೇ ಕೆಲವು ವಿದ್ಯಾರ್ಥಿಗಳು ಮಾಸ್ಕ್ ಧರಿಸದಿರುವುದನ್ನು ಕಂಡು ಪರೀಕ್ಷಾ ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡರು. ವಿದ್ಯಾರ್ಥಿಗಳಿಗೆ ಮಾಸ್ಕ್ ಮೂಗಿನ ಕೆಳಗಡೆ ಹಾಕದೇ ಮೂಗಿನ ಮೇಲೆ ಹಾಕಿಕೊಂಡು ಪರೀಕ್ಷೆಗೆ ಬರೆಯಿರಿ.ಯಾವುದೇ ಭಯ ಬೇಡ.ಧೈರ್ಯದಿಂದ ಎದುರಿಸಿ ಎಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಕರಣಿಕ್ ಪರೀಕ್ಷಾ ಕೇಂದ್ರದ ಎಲ್ಲಾ ಶಿಕ್ಷಕರಿಗೆ, ಆಶಾ ಕಾರ್ಯಕರ್ತರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದರು.
ಪ್ರಾರಂಭದಲ್ಲಿ ಮುಖ್ಯಗೇಟನಲ್ಲೇ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿ ಮಾಸ್ಕ್ ನೀಡಿ ಪರೀಕ್ಷಾ ಕೇಂದ್ರದ ಒಳಗೆ ಕಳುಹಿಸಲಾಗಿತ್ತು.
ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಾವಿತ್ರಿ ಪಾಟೀಲ, ಲಲಿತಾ, ಜಗನ್ನಾಥ, ವೆಂಕಟೇಶ ಚಿನ್ನೂರ್,ಶಿವಯೋಗಿ ಕಟ್ಟಿ, ಎಸ್.ಬಿ.ಪಾಟೀಲ, ವಿಶ್ವಾನಾಥ ಹೂಗಾರ ಸೇರಿದಂತೆ ಅನೇಕರು ಇದ್ದರು.