ಅರುಂಧತಿ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಸೇವೆಗಳ ಕೇಂದ್ರ ಉದ್ಘಾಟನೆ

0
10

ಸುರಪುರ: ನಗರದ ರಂಗಂಪೇಟೆಯ ಅರುಂಧತಿ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಸೇವೆಗಳ ಕೇಂದ್ರ ಉದ್ಘಾಟನಾ ಕಾರ್ಯಕ್ರಮ ನಡೆಸಲಾಯಿತು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು,ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ನವನಗರ ಹುಬ್ಬಳ್ಳಿ ಹಾಗು ಅರುಂಧತಿ ಕಾನೂನು ಮಹಾವಿದ್ಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ದಿವಾಣಿ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿತ ದಂಡಾಧಿಕಾರಿಗಳು ಹಾಗು ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಚಿದಾನಂದ ಬಡಿಗೇರವರು ಉದ್ಘಾಟಿಸಿ ಮಾತನಾಡಿ, ಕಾನೂನು ಸೇವಾ ಕೇಂದ್ರ ಆರಂಭಿಸುವ ಮೂಲಕ ಎಲ್ಲರಿಗೂ ಅನುಕೂಲ ಕಲ್ಪಿಸಿರುವುದು ಉತ್ತಮವಾದ ಕಾರ್ಯವಾಗಿದೆ.ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿದರು.ಅಲ್ಲದೆ ಕಾನೂನು ಎಲ್ಲರಿಗೂ ಸಮಾನವಾದ ಹಕ್ಕುಗಳನ್ನು ನೀಡಿದೆ ಸಾರ್ವಜನಿಕರು ಕಾನೂನುಗಳನ್ನು ಅರಿತುಕೊಳ್ಳುವ ಮೂಲಕ ಎಲ್ಲರು ಕಾನೂನು ಪಾಲನೆಗೆ ಮುಂದಾಗಬೇಕೆಂದು ತಿಳಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ನ್ಯಾಯವಾದಿಗಳಾದ ನಿಂಗಣ್ಣ ಚಿಂಚೋಡಿ,ದೇವಿಂದ್ರಪ್ಪ ಬೇವಿನಕಟ್ಟಿ,ಬಸವರಾರಾಜ ಕಿಲ್ಲೇದಾರ,ಅಕರ ಸರಕಾರಿ ವಕೀಲ ನಂದನಗೌಡ ಪಾಟೀಲ್, ಬಿ.ಈಡಿ ಕಾಲೇಜಿನ ಪ್ರಾಂಶುಪಾಲರಾದ ರೇಣುಕಾ ಕನಕಗಿರಿ ಹಾಗು ನಿಂಗಣ್ಣಹೆಗ್ಗಣದೊಡ್ಡಿ ಮಾತನಾಡಿ ಮಹಿಳೆಯರಿಗೆ ಕಾನೂನು ನೀಡಿರುವ ಹಕ್ಕುಗಳು ಹಾಗು ಸಾಮಾಜಿಕ ನ್ಯಾಯದ ಕುರಿತು ವಿದ್ಯಾರ್ಥಿಗಳಿಗೆ ಕಾನೂನಿನ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಸಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ರಾಘವೇಂದ್ರ ಜಾಗೀರದಾರ,ಶ್ರೀಮತಿ ದಿವ್ಯಾರಾಣಿ ಹಾಗು ಪೊಲೀಸ್ ಅಧಿಕಾರಿಗಳು ವೇದಿಕೆ ಮೇಲಿದ್ದರು,ಕಾಲೇಜಿನ ಪ್ರಾಂಶುಪಾಲರಾದ ಶರಣಪ್ಪ ಬಿ.ಅನ್ಸೂರ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ವಕೀಲ ಯಲ್ಲಪ್ಪ ಹುಲಿಕಲ್,ಖಲೀಲ ಅಹ್ಮದ್ ಸೇರಿದಂತೆ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗು ಸಿಬ್ಬಂದಿಗಳು ಮತ್ತು ಕಾನೂನು ವಿಭಾಗದ ವಿದ್ಯಾರ್ಥಿಗಳಿದ್ದರು.ಹಣಮಂತ ನಿರೂಪಿಸಿದರು,ನಿಂಗಣ್ಣ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here