ವೀರಯೋಧರ ತ್ಯಾಗ ಬಲಿಧಾನ ಎಂದಿಗೂ ಸ್ಮರಣೀಯ: ಬಸವರಾಜ ಯಳಸಂಗಿ

0
12

ಆಳಂದ:ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ಮೊದಲಿಗೆ ಭಾರತಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವೀರಯೋಧರ ತ್ಯಾಗ ಬಲಿಧಾನವನ್ನು ಸ್ಮರಿಸಲಾಯಿತು.

ಈ ಸಂಧರ್ಭದಲ್ಲಿ ಶ್ರೀ ಶರಣಬಸವೇಶ್ವರ ದೇವಸ್ಥಾನ ನವ ತರುಣ ಕಮೀಟಿಯ ಅಧ್ಯಕ್ಷರಾದ ಬಸವರಾಜ ಯಳಸಂಗಿ ಹಾಗೂ ಬಿಜೆಪಿ ಮುಖಂಡರಾದ ಶ್ರೀಶೈಲ ಮಾಲಿಪಾಟೀಲ ಮಾತನಾಡಿ, ಕಾರ್ಗಿಲ್ ಯುದ್ಧ ೧೯೯೯ರ ಮೇನಲ್ಲಿ ಆರಂಭವಾಗಿ ಎರಡು ತಿಂಗಳ ಕಾಲ ನಡೆಯಿತು, ಲೇಹ್ ಹೆದ್ದಾರಿವರೆಗೆ ಆಕ್ರಮಿಸಿಕೊಂಡಿದ್ದ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಯಿತು.

Contact Your\'s Advertisement; 9902492681

ಸೇನೆಯ ಅಧಿಕಾರಿಗಳು ಸೇರಿದಂತೆ ೫೨೭ ಮಂದಿ ಭಾರತೀಯ ಯೋಧರು ಹುತಾತ್ಮರಾದರು. ಪಾಕಿಸ್ಥಾನಕ್ಕೆ ತಕ್ಕ ಪ್ರತುತ್ತರ ನೀಡಿದ ಭಾರತೀಯ ಸೇನೆ ಜುಲೈ ೨೬ ರಂದು ’ಆಪರೇಷನ್ ವಿಜಯ್’ ಯಶಸ್ವಿ ಎಂದು ಘೋಷಿಸಿತು. ಅಂದಿನಿಂದ ಕಾರ್ಗಿಲ್ ವಿಜಯೋತ್ಸವ ದಿನ ಆಚರಿಸಲಾಗುತ್ತಿದೆ. ಯುವಕರು ದೇಶಪ್ರೇಮ ಬೆಳೆಸಿಕೊಳ್ಳಬೇಕು ಎಂದರು.

ಭಾರತ್ ಮಾತಾ ಕೀ ಜೈ, ಒಂದೇ ಮಾತರಂ, ಜೈ ಜವಾನ-ಜೈಕಿಸಾನ ಜೈಕಾರಗಳು ಮೊಳಗಿದವು. ಈ ಸಂಧರ್ಭದಲ್ಲಿ ಮಲ್ಲಿನಾಥ ನಾಗಶೆಟ್ಟಿ, ಈರಪ್ಪ ನಂದಿ, ಶ್ರೀಶೈಲ ಹಳಿಮನಿ, ವಿಶ್ವ ಪಾಟೀಲ್, ಶ್ರೀನಿವಾಸ ಜೋಶಿ, ನಾಗರಾಜ ಪಾಟೀಲ್, ಅನೀಲ ನಾಗೂರ, ಕ್ಷೇಮಲಿಂಗ ಕಂಭಾರ, ಸಚಿನ ಶೀಲವಂತ, ರಾಜು ಮಡಿವಾಳ, ಶರಣು ಹಳಿಮನಿ, ಅನಿಲ ಮಠಪತಿ, ಸಂತೋಷ ಸೇರಿದಂತೆ ಅನೇಕ ಯುವಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here