ಹಲ್ಲೆ ಮಾಡಿದವರ ಕ್ರಮಕ್ಕೆ ಒತ್ತಾಯಿಸಿ ಕೋಲಿ ಸಮಾಜದಿಂದ ಡಿವಾಯ್‌ಎಸ್‌ಪಿಗೆ ಮನವಿ

0
46

ಶಹಾಬಾದ:ತಾಲೂಕಿನ ದೇವನತೆಗನೂರ ಗ್ರಾಮದ ಕೋಲಿ ಸಮಾಜದ ಕುಟುಂಬ ಸದಸ್ಯರ ಮೇಲೆ ಅಲ್ಪಸಂಖ್ಯಾತರ ಗುಂಪೊಂದು ಹಲ್ಲೆ ಮಾಡಿರುವುದು ಖಂಡಿಸಿ ಹಾಗೂ ಹಲ್ಲೆ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಕೋಲಿ ಸಮಾಜದ ವತಿಯಿಂದ ಡಿವೈಎಸ್‌ಪಿ ಉಮೇಶ ಚಿಕ್ಕಮಠ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನಾಕಾರರು ಮಾತನಾಡಿ, ಈಗಾಗಲೇ ಮಂಗಳವಾರದಂದು ದೇವತೆಗನೂರ ಒಂದೇ ಸಮುದಾಯದ ಹೈದರ ಅಲಿ ಹಾಗೂ ಹುಸೇನ ಮಧ್ಯೆ ಜಗಳ ಸಂಭವಿಸಿದಾಗ ಕೋಲಿ ಸಮಾಜದ ಕಾರ್ತಿಕ ಎಂಬ ಬಾಲಕ ಹೊಲದಿಂದ ಬರುವಾಗ ಹೈದರ ಅಲಿ ಹುಸೇನಿನ ಗೆಳೆಯ ಅವನ ಪರವಾಗಿ ಬಂದಿರಬಹುದೆಂದು ಕಾರ್ತಿಕ ಮೇಲೆ ಹಲ್ಲೆ ಮಾಡಿದ್ದಾನೆ. ಆ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಹೈದರಲಿಗೆ ದಬ್ಬಿದ ಪರಿಣಾಮ ಹೈದರ ಅಲಿ ನೆಲಕ್ಕೆ ಬಿದ್ದು ತಲೆಗೆ ಪೆಟ್ಟಾಗಿದೆ.

Contact Your\'s Advertisement; 9902492681

ಈ ಘಟನೆಗೆ ಸಂಬಂಧಿಸಿದಂತೆ ಹೈದರ ಅಲಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾನೆ. ಅಲ್ಲದೇ ಹೊಲದಿಂದ ಬರುವ ನನ್ನ ಮಗನ ಮೇಲೆ ಸುಮ್ಮನೆ ಹಲ್ಲೆ ಮಾಡಲು ಮುಂದಾದ ಹೈದರಲಿ ಮೇಲೆ ಪ್ರತಿದೂರು ಸಲ್ಲಿಸಲು ಕಾರ್ತಿಕ ತಂದೆ ಶಿವಯೋಗಿ, ಅವರ ದೊಡ್ಡಪ್ಪ ವಿಜಯಕುಮಾರ ಠಾಣೆಗೆ ಹೋದಾಗ ಪಿಐ ಅವರು ಪ್ರತಿದೂರು ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ. ನಂತರ ೩೦೭ ಕೇಸ್ ದಾಖಲಿಸಲಾಗಿದೆ.

ಆದರೂ ಬುಧವಾರ ರಾತ್ರಿ ಏಕಾಏಕಿ ಹೈದರ ಅಲಿ ಗುಂಪೊಂದು ಮನೆಯಲ್ಲಿದ್ದ ಕಾರ್ತಿಕ ತಂದೆ, ದೊಡ್ಡಪ್ಪ ಹಾಗೂ ತಾಯಿಯ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿರುವುದು ಮಾತ್ರ ಅಕ್ಷಮ್ಯಅಪರಾಧ. ಒಂದು ವೇಳೆ ಪಿಐ ಅವರು ಪ್ರತಿದೂರು ತೆಗೆದುಕೊಂಡಿದ್ದರೇ ಈ ಹಲ್ಲೆ ಆಗುತ್ತಿರಲಿಲ್ಲ.ಅವರ ನಿರ್ಲಕ್ಷ್ಯತನದಿಂದ ಈ ಘಟನೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಕೂಡಲೇ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರಲ್ಲದೇ ಹಾಗೂ ಮುಂದೆ ಏನಾದರೂ ಅನಾಹುತವಾದರೆ ಹೈದರ ಅಲಿ ಹೊಣೆಗಾರರಾಗುತ್ತಾನೆ ಎಂದು ಹೇಳಿದರು.

ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ ತಳವಾರ, ಉಪಾಧ್ಯಕ್ಷ ಶಿವಕುಮಾರ ಬುರ್ಲಿ, ಪ್ರಧಾನ ಕಾರ್ಯದರ್ಶಿ ಬೆಳ್ಳಪ್ಪ ಖಣದಾಳ, ಮುಖಂಡರಾದ ನಿಂಗಣ್ಣ ಹುಳಗೋಳಕರ್,ಶಿವಕುಮಾರ ನಾಟೇಕಾರ,ಮರಲಿಂಗ ಗಂಗಬೋ, ಲೋಹಿತ್ ಮಳಖೇಡ, ತಿಪ್ಪಣ್ಣ ನಾಟೇಕಾರ,ಚಂದ್ರಕಾಂತ ನಾಟೇಕಾರ, ಪರಮಾನಂದ ಯಲಗೋಡಕರ್,ಸುಭಾಷ ಜಾಪೂರ,ಮೌನೇಶ ಕೊಡ್ಲಿ, ದೇವೆಂದ್ರಪ್ಪ ಹೊನಗುಂಟಿ, ಮಲ್ಲಿಕಾರ್ಜುನ ನಾಟೇಕಾರ, ರವಿ ಸಣತಮ,ಕಾಶಣ್ಣ ಚನ್ನೂರ್,ಶರಣು ಹಲಕರ್ಟಿ,ರಾಯಪ್ಪ ಹುರಮುಂಜಿ, ಶರಣು.ಮಹೇಶ ಯಲೇರಿ, ರಾಜು ಸಣತಮ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here