ಶಹಾಬಾದ: ಶಾಸಕರ ಕೈಗೆ ಕಟ್ಟಡ ಕಾರ್ಮಿಕರ ಆಹಾರ ಕಿಟ್ ಯಾಕೆ ? ಎನ್ನುವ ಘೋ?ಣೆಯೊಂದಿಗೆ ಆಹಾರ ಕಿಟ್, ಟೋಲ್ ಕಿಟ್, ಸೇಪ್ಟಿಕಿಟ್, ತಂತ್ರಾಂಶ ಖರೀದಿ ಮೊದಲಾದವುಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಹಿಸಿ ಗುರುವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್(ಸಿಐಟಿಯು) ವತಿಯಿಂದ ನಗರದ ಅಂಚೆ ಕಚೇರಿಯ ಮುಂದೆ ಪ್ರತಿಭಟನೆಯನ್ನು ನಡೆಸಿ ಪೋಸ್ಟ್ ಕಾರ್ಡಗಳನ್ನು ಪೋಸ್ಟ್ ಮಾಡುವುದರ ಮೂಲಕ ಮಾಸಾಚರಣೆಗೆ ಚಾಲನೆ ನೀಡಲಾಯಿತು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಸಂಘದ ಅಧ್ಯಕ್ಷ ಭೀಮಶಾ ಹಳ್ಳಿ ಮಾತನಾಡಿ,ಈಗಾಗಲೇ ಮಂಡಳಿಯು ೨೦೩೩ ಕೋಟಿ ರೂ. ಗಳ ಹಣವನ್ನು ೨೧-೨೨ ಸಾಲಿನಲ್ಲಿ ಖರ್ಜು ಮಾಡುವ ತೀರ್ಮಾನ ಕೈ ಗೊಂಡಿದೆ. ಇಂತಹ ತೀರ್ಮಾನಗಳಲ್ಲಿ ಕೊಟ್ಯಾಂತರ ರೂ. ಭ್ರ?ಚಾರ ನಡೆಯುವ ಸಾಧ್ಯತೆಗಳಿಗೆ. ಕೂಡಲೇ ಮಧ್ಯ ಪ್ರವೇಶಿಸುವಂತೆ ಕೋರಿ ಕಾನೂನು ಸೇವಾ ಪ್ರಾಧಿಕಾರದ ಮುಖ್ಯಸ್ಥರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕರ್ನಾಟಕ ರಾಜ್ಯದಲ್ಲಿ ಒಂದು ಲಕ್ಷ ಪೋಸ್ಟ್ ಕಾರ್ಡಗಳ ಮೂಲಕ ಹಾಗೂ ಇ-ಮೇಲ್ ಮಾಸಾಚರಣೆಯನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಆ ಭಾಗದ ಒಂದು ಅಂಗವಾಗಿ ಕಲಬುರಗಿ ನಗರದಲ್ಲಿ ಚಾಲನೆ ನೀಡುತ್ತಿದ್ದೇವೆ. ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ಸರಣಿ ಕಾರ್ಯಕ್ರಮಗಳ ಮೂಲಕ ಕಟ್ಟಡ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಈ ತಿರ್ಮಾನಗಳ ಕುರಿತಾಗಿ ಪ್ರಸಾರ ಮಾಡಿ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಿ ಹೋರಾಟ ನಡೆಸಲಾಗುತ್ತಿದೆ ಎಂದರು.
ಒಂದು ತಿಂಗಳು ವ್ಯಾಪಕವಗಿ ಪ್ರಚಾರ ಹಾಗೂ ಹೋರಾಟದ ವಿಡಿಯೋ ಜಾಗೃತಿ ಮೂಡಿಸಿ ೨೦೨೧ ಸೆಪ್ಟೆಂಬರ್ ೦೧ ರಂದು ಸಾವಿರಾರು ಕಾರ್ಮಿಕರನ್ನು ಸೇರಿಸಿ ಕಲ್ಯಾಣ ಮಂಡಳಿ ಕೈಗೊಂಡ ಕಾರ್ಮಿಕ ವಿರೋಧಿ ತಿರ್ಮಾನಗಳನ್ನು ಕೈ ಬಿಡಲು ಆಗ್ರಹಿಸಿ ಕಟ್ಟಡ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಗೆ ಮುತ್ತಿಗೆ ಹಾಕಲಾಗುಲಾಗುವುದು ಎಂದು ಹೇಳಿದರು.
ಉಪಾಧ್ಯಕ್ಷ ರಾಮು ಜಾಧವ, ಪ್ರಧಾನ ಕಾರ್ಯದರ್ಶಿ ನಾಗಪ್ಪ ರಾಯಚೂರಕರ್, ಖಜಾಂಚಿ ಅರ್ಜುನ ನಾಟೇಕಾರ, ಗ್ರಾಪಂ ನೌಕರರ ಸಂಘದ ತಾಲೂಕಾ ಕಾರ್ಯದರ್ಶಿ ಮಲ್ಲಣ್ಣ.ಸಿ.ಹೊನಗುಂಟಾ, ಸಿಐಟಿಯು ತಾಲೂಕಾಧ್ಯಕ್ಷ ಶೇಖಮ್ಮ ಕುರಿ, ಶಿವಶರಣಪ್ಪ ಗೋಳಾ(ಕೆ), ನಿಲೇಶ ರಾಠೋಡ, ಲಕ್ಷ್ಮಿಕಾಂತ ಸಾಗರ, ಪ್ರಕಾಶ ಕುಸಾಳೆ, ನೀಲು ಚವ್ಹಾಣ, ಭೀಮಶಾ ಗೋಳಾ(ಕೆ), ಸಲಾಮ್ ಮಿಸ್ತ್ರಿ, ಮಲ್ಲಣ್ಣ, ಹಾಜಪ್ಪ ಸೇರಿದಂತೆ ಇತರರು ಹಾಜರಿದ್ದರು.