ಕಲಬುರಗಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರ್ಗಿ ಹಾಗೂ ಮೌನಯೋಗಿ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗೆ ಉಚಿತ ಕೋವಿಡ್-19 ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಆಯೋಜಕರಾದ ಅಂಜನಾ ಯಾತನೂರ ತಿಳಿಸಿದ್ದಾರೆ.
ಶನಿವಾರ ದಿನಾಂಕ 31 ಜುಲೈ 2021,ಸ್ಥಳ: ಮಹಾಲಕ್ಷ್ಮಿ ದೇವಸ್ಥಾನ, ಸ್ವಸ್ತಿಕ್ ನಗರ,ಕಲಬುರ್ಗಿ. ಕಡ್ಡಾಯವಾಗಿ ಸಾರ್ವಜನಿಕರು ಆಧಾರ್ ಕಾರ್ಡ್ ತೆಗೆದುಕೊಂಡು ಬರಬೇಕು. ಉಚಿತ ಕೊರೊನಾ ಲಸಿಕಾ ಶಿಬಿರದ ಆಯೋಜನೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದ್ದಾರೆ.