ವಿದ್ಯಾರ್ಥಿಗಳು ಸಂಶೋಧನೆಯತ್ತ ಹೆಚ್ಚು ಗಮನ ಹರಿಸಬೇಕು: ಡಾ.ಎನ್.ವಿ.ಪ್ರಸಾದ

0
21

ಕಲಬುರಗಿ: ಹೊಸ ಕೋರ್ಸಗಳನ್ನು ಆರಂಭಿಸುವ ಮೂಲಕ ಶರಣಬಸವ ವಿಶ್ವವಿದ್ಯಾಲಯವು ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತುಂಗದ ಸ್ಥಾನದಲ್ಲಿದ್ದು ಜೊತೆಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಂಶೋಧನೆ ಮಾಡಲು ಪ್ರೋತ್ಸಾಹಿಸಬೇಕು ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಡಾ.ಎನ್.ವಿ.ಪ್ರಸಾದ ಹೇಳಿದರು.

ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಜರುಗಿದ ಶರಣಬಸವ ವಿಶ್ವವಿದ್ಯಾಲಯದ ೪ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಓದು ಕೇವಲ ಉದ್ಯೋಗಕ್ಕಾಗಿ ಅಲ್ಲದೇ ದೇಶದ ಅಭಿವೃಧ್ದಿಗೆ ಸಂಶೋಧನಯಲ್ಲಿ ತೊಡಗಿಕೊಳ್ಳಬೇಕು. ಮುಖ್ಯವಾಗಿ ಪಿಎಚ್.ಡಿ ಹಾಗೂ ಪಿಜಿ ವಿದ್ಯಾರ್ಥಿಗಳು ಇತ್ತ ಗಮನ ಹರಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶ್ವವಿದ್ಯಾಲಯವು ವಿದೇಶಿ ಭಾಷೆಗಳನ್ನು ಪಠ್ಯದಲ್ಲಿ ಅನುಷ್ಠಾನಗೊಳಿಸುವ ಮೂಲಕ ವಿಧ್ಯಾರ್ಥಿಗಳಿಗೆ ಹುರಿದುಂಬಿಸಬೇಕೆಂದು ಕರೆ ನೀಡಿದರು.

Contact Your\'s Advertisement; 9902492681

ಗಣಿತ ಹಾಗೂ ಸಂಖ್ಯಾಶಾಸ್ತ್ರದಲ್ಲಿ ಈ ಭಾಗದ ವಿಧ್ಯಾರ್ಥಿಗಳು ತುಂಬಾ ಹಿಂದೆ ಇದ್ದು ಶಿಕ್ಷಕರು ವಿಧ್ಯಾರ್ಥಿಗಳಿಗೆ ಉತ್ತೇಜಿಸುವತ್ತ ಗಮನ ಹರಿಸಬೇಕು. ದಿನದಿಂದ ದಿನಕ್ಕೆ ತಂತ್ರಜ್ಞಾನವು ಅಭಿವೃದ್ದಿಗೊಳ್ಳುತ್ತಿದ್ದು ಜೊತೆಜೊತೆಗೆ ಆಧುನಿಕವಾಗಿ ಚುರುಕುಗೊಳ್ಳಬೇಕೆಂದು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿಶ್ವವಿದ್ಯಾಲಯವು ಮಾನವ ಮೌಲ್ಯಗಳಾಧಾರಿತ ಇನ್ನೂ ಹೆಚ್ಚು ಹೊಸ ಕೋರ್ಸಗಳನ್ನು ಆರಂಭಿಸಬೇಕೆಂದು ಕರೆ ನೀಡಿದರು. ಕೇಂದ್ರ ಸರಕಾರದ ಹೊಸ ಶಿಕ್ಷಣ ನೀತಿ (ಓಇP) ವಿಧ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಪಾಲ್ಗೂಂಡ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಮಾತನಾಡುತ್ತ, ಡಾ.ಶರಣಬಸವಪ್ಪ ಅಪ್ಪಾ ಅವರ ಕನಸಿನ ಕೂಸಾದ ಶರಣಬಸವ ವಿಶ್ವವಿದ್ಯಾಲಯ ಪ್ರಾರಂಭಿಸಿದ ವರ್ಷದಂದು ಚಿರಂಜೀವಿ ದೊಡ್ಡಪ್ಪಾ ಅಪ್ಪಾ ಅವರು ಜನಿಸಿದರು ಹಾಗೇ ಲಿಂ.ದೊಡ್ಡಪ್ಪಾ ಅಪ್ಪಾ ಅವರು ಶಾಲೆ ಪ್ರಾರಂಭಿಸಿದ ವರ್ಷದಂದು ಡಾ.ಶರಣಬಸವಪ್ಪ ಅಪ್ಪಾಜಿ ಅವರು ಜನಿಸಿದರು. ಡಾ.ಅಪ್ಪಾ ಅವರ ಆಶಯದಂತೆ ವಿಶ್ವವಿದ್ಯಾಲಯವು ಇನ್ನೂ ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ವಿಧ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತೆವೆಂದು ಭರವಸೆ ನೀಡಿದರು.

ಪ್ರಾಸ್ತವಿಕವಾಗಿ ಮಾತನಾಡಿದ ವಿವಿ ಕುಲಸಚಿವ ಡಾ.ಅನೀಲಕುಮಾರ ಬಿಡವೆ ವಿಶ್ವವಿದ್ಯಾಲಯ ೪ ವರ್ಷದಿಂದ ನಡೆದುಬಂದ ದಾರಿಯನ್ನು ಒಂದೊಂದಾಗಿ ವಿವರಿಸಿದರು. ಡಾ. ಶರಣಬಸವಪ್ಪ ಅಪ್ಪಾಜಿ ಹಾಗೂ ಮಾತೋಶ್ರೀ ಡಾ.ದಾಕ್ಷಯಿಣಿ ಅವ್ವಾಜಿ ಅವರ ಆಶೀರ್ವಾದದಿಂದ ಹಾಗೂ ಎಲ್ಲರ ಪರಿಶ್ರಮದಿಂದ ಶರಣಬಸವ ವಿಶ್ವವಿದ್ಯಾಲಯವು ನಮ್ಮ ಭಾಗದಲಿಯೇ ಪ್ರತಿಷ್ಠಿತ ವಿಶ್ವವಿದ್ಯಾಲಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿ ಕುಲಪತಿ ಡಾ.ನಿರಂಜನ.ವಿ.ನಿಷ್ಠಿ ಕ್ಯಾಂಪಸ್ ಆಯ್ಕೆಯಲ್ಲಿ ವಿವಿಧ ವಿಭಾಗಗಳ ವಿಧ್ಯಾರ್ಥಿಗಳು ದೇಶದ ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಕ್ಕಾಗಿ ಅಭಿನಂದಿಸಿದರು. ಮಹಾಮಾರಿ ಕರೋನ ಬಂದ ದಿನಗಳಲ್ಲಿ ಅದನ್ನು ಹೊಗಲಾಡಿಸಲು ಸಂಶೋಧನೆಯಿಂದಲೆ ಸಾಧ್ಯವಾಗಿದೆ. ವಿಧ್ಯಾರ್ಥಿಗಳು ತಮ್ಮ ಜೀವನ ರೂಪಿಸಿಕೊಳ್ಳಬೇಕೆಂದರೆ ಕೇವಲ ಓದಿನಲ್ಲಿ ಮಗ್ನರಾಗದೆ ಇತರ ಚಟುವಟಿಗಳಲ್ಲಿಯೂ ಪರಿಣಿತಿ ಹೊಂದಬೇಕು. ಜೀವನದಲ್ಲಿ ನಾವುಗಳು ಕೇವಲ ಆರ್ಥಿಕವಾಗಿ ಸಬಲರಾಗದೆ ಹಣವನ್ನು ಹೇಗೆ ಮತ್ತು ಎಲ್ಲಿ ಹೂಡಿಕೆ ಮಾಡಬೇಕು ಎನ್ನುವುದನ್ನು ಮನಗಾಣಬೇಕು. ನಮ್ಮ ಓದು ಮತ್ತು ಸಂಶೋಧನೆ ದೇಶಕ್ಕೆ ಹಾಗೂ ಮುಂದಿನ ಪೀಳಿಗೆಗೆ ಉಪಯೋಗವಾಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕ್ಯಾಂಪಸ್ ಆಯ್ಕೆಯಲ್ಲಿ ವಿವಿಧ ವಿಭಾಗಗಳ ವಿಧ್ಯಾರ್ಥಿಗಳು ದೇಶದ ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಕ್ಕಾಗಿ ೨೦೦ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಹಾಗೂ ಕಾರಣಿಭೂತರಾದ ವಿವಿ ಪ್ಲೇಸ್‌ಮೆಂಟ್ ಅಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸಮಕುಲಪತಿ ಪ್ರೊ.ವಿ.ಡಿ.ಮೈತ್ರಿ ಮತ್ತು ಎನ್.ಎಸ್.ದೇವರಕಲ್, ಕುಲಸಚಿವ (ಮೌಲ್ಯಮಾಪನ) ಡಾ.ಲಿಂಗರಾಜ ಶಾಸ್ತ್ರೀ, ಡೀನ್‌ರಾದ ಡಾ.ಲಕ್ಷ್ಮೀ ಪಾಟೀಲ ಮಾಕಾ ಹಾಗೂ ಡಾ.ಬಸವರಾಜ ಮಠಪತಿ ಇದ್ದರು.

ಸಂಗೀತ ವಿಭಾಗದವರು ಪ್ರಾರ್ಥನ ಗೀತೆ ಹಾಡಿದರು. ಎಂ.ಟಿ.ಎ ವಿಭಾಗದ ಡೀನ್ ವಾಣಿಶ್ರೀ ಸ್ವಾಗತಿಸಿದರು. ಗೋದುತಾಯಿ ಇಂಜಿನಿಯರಿಂಗ್ ಕಾಲೇಜಿನ ಅಭಿಲಾಷಾ ಮತ್ತು ಚೇತನಾ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಪ್ರೊ.ನಾಗಬಸವಣ್ಣ ಗುರಾಗೋಳ ವಂದಿಸಿದರು.

ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಜರುಗಿದ ಶರಣಬಸವ ವಿಶ್ವವಿದ್ಯಾಲಯದ ೪ನೇ ಸಂಸ್ಥಾಪನಾ ದಿನಾಚರಣೆಯಲ್ಲಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಅವರ ಹುಟ್ಟು ಹಬ್ಬದ ನಿಮಿತ್ತ ಕೇಕ ಕತ್ತರಿಸಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಸಿಬ್ಬಂದಿ ವರ್ಗದವರು ಶ್ರೀ ಬಸವರಾಜ ದೇಶಮುಖ ಅವರಿಗೆ ಸನ್ಮಾನಿಸಿದರು ಹಾಗೂ ಬಸವರಾಜ ದೇಶಮುಖ ಅವರು ವಿವಿಯ ಆವರಣದಲ್ಲಿ ಸಸಿ ನೆಡುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here