ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ: ಮಲ್ಲೇಶಿ ಮೋಹಿತೆ

0
114

ಶಹಾಬಾದ: ಜನರಲ್ಲಿ ಕಾನೂನು ಅರಿವಿನ ಕೊರತೆ ಯಿಂದಾಗಿ ಅಹಿತಕರ ಘಟನೆಗಳು ನಡೆಯುತ್ತಿದ್ದು, ಹೀಗಾಗಿ ಪ್ರತಿ ಯೊಬ್ಬರೂ ಕಾನೂನು ಬಗ್ಗೆ ಅರಿಯುವ ಅನಿವಾರ್ಯವಿದ್ದು, ಕಾನೂನು ಸೇವೆಗಳ ಪ್ರಾಧಿಕಾರದಿಂದ ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸಲಾಗುತ್ತಿದೆ ಎಂದು ನಗರದ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲೇಶಿ ಪರಶುರಾಮ ಮೋಹಿತೆ ತಿಳಿಸಿದರು.

ಅವರು ಕಾನೂನು ಸೇವಾ ಸಮಿತಿ ಚಿತ್ತಾಪೂರ ಮತ್ತು ನ್ಯಾಯಾವಾಧಿಗಳ ಸಂಘದ ವತಿಯಿಂದ ಆಯೋಜಿಸಲಾದ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ನಿತ್ಯ ಜೀವನದಲ್ಲಿ ಕಾನೂನನ್ನು ಪಾಲಿಸಿದರೆ ನೆಮ್ಮದಿ ಕಾಣಬಹುದು. ಕಾನೂನಿನ ಅರಿವಿಲ್ಲ ಎಂದ ಮಾತ್ರಕ್ಕೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ಪ್ರತಿಯೊಬ್ಬರು ಕಾನೂನು ಅರಿಯುವುದರ ಜತೆಗೆ ಪಾಲನೆಗೆ ಮುಂದಾಗಬೇಕು. ಇದರಲ್ಲಿ ಸಮಾಜದ ಶಾಂತಿ, ನೆಮ್ಮದಿ ಬದುಕು ಅಡಗಿದೆ ಜನರಲ್ಲಿ ಕಾನೂನು ಅರಿವಿನ ಕೊರತೆಯಿಂದಾಗಿ ಅಹಿತಕರ ಘಟನೆಗಳು ನಡೆಯುತ್ತಿದ್ದು, ಅನೇಕರು ಶಿಕ್ಷೆಗೆ ಗುರಿಯಾಗುತ್ತಿದ್ದಾರೆ.

ಹೀಗಾಗಿ ಪ್ರತಿಯೊಬ್ಬರೂ ಕಾನೂನು ಬಗ್ಗೆ ಅರಿಯುವ ಅನಿವಾರ್ಯವಿದೆ. ಇಂದು ಅನೇಕ ವ್ಯಾಜ್ಯಗಳು ಕೋರ್ಟ್ ಮೆಟ್ಟಿಲೇರುತ್ತಿವೆ. ಜನರಲ್ಲಿ ಕಾನೂನು ಅರಿವಿನ ಕೊರತೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ಅದಕ್ಕಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ರೂಪಿಸಲಾಗಿದೆ. ಬಾಲ ಕಾರ್ಮಿಕ ವಿರೋ- ಕಾಯ್ದೆ, ಮೋಟಾರು ವಾಹನ ಕಾಯ್ದೆ , ಸ್ತ್ರೀ ಭ್ರೂಣ ಹತ್ಯೆ,ಹಿರಿಯ ನಾಗರಿಕರ ಹಿತರಕ್ಷಣಾ ಕಾಯ್ದೆ, ಭೂಸುಧಾರಣಾ ಕಾಯ್ದೆ ಮೊದಲಾದ ವಿವಿಧ ವಿಚಾರಗಳಿಗೆ ಸಂಬಂಧಪಟ್ಟಂತೆ ಇರುವ ಕಾನೂನುಗಳ ಕುರಿತು ಮಾಹಿತಿಯನ್ನು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನ್ಯಾಂiiವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಶಿಂಧೆ ಮಾತನಾಡಿ, ಈ ದೇಶದ ಕಾನೂನುಗಳನ್ನು ನಾವು ಪರಿಪಾಲನೆ ಮಾಡಲೇಬೇಕು. ಇಲ್ಲದಿದ್ದರೆ ನಮ್ಮ ಹಕ್ಕುಗಳಿಂದ ವಂಚಿತರಾಗಬೇಕಾಗುತ್ತದೆ. ಕಾನೂನು ನಮ್ಮ ವಿರುದ್ಧವಾಗಿ ಅಲ್ಲ ನಮ್ಮ ರಕ್ಷಣೆಗಾಗಿಯೇ ಇವೆ. ತಪ್ಪಿತಸ್ಥರಿಗೆ ಶಿಕ್ಷೆಕೂಡ ಕಾನೂನಿನಿಂದ ಸಾಧ್ಯವಾಗುತ್ತದೆ. ಇದರ ಮುಂದೆ ಎಲ್ಲರೂ ಸಮಾನರು. ಸಾರ್ವಜನಿಕರಿಗೆ ಅರಿವು ಮೂಡಿಸುವ ಹಾಗೂ ನೊಂದವರಿಗೆ ಕಾನೂನು ಆಸರೆ ಇದೆ ಎಂಬ ಉದ್ದೇಶದಿಂದ ಈ ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದರು.

ನೊಂದವರ ಪರಿಹಾರ ಯೋಜನೆಗಳ ಬಗ್ಗೆ ನ್ಯಾಯವಾದಿಗಳಾದ ರಘುವೀರಸಿಂಗ ಠಾಕೂರ ಹಾಗೂ ಮೂಲ ಕಾನೂನುಗಳ ಬಗ್ಗೆ ನ್ಯಾಯವಾದಿಗಳಾದ ಉಮಾದೇವಿ.ಎಂ.ಮಲಕೂಡ ಮಾಹಿತಿ ಒದಗಿಸಿದರು. ಮುಖ್ಯ ಅತಿಥಿಗಳಾಗಿ ಸರಕಾರಿ ಸಹಾಯಕ ಅಭಿಯೋಜಕರಾದ ಸುನೀತಾ ಮರತೂರ, ನ್ಯಾಯಾವಾದಿ ಅತುಲ್.ಎಂ.ಯಲಶೆಟ್ಟಿ , ಸಂಘದ ಕಾರ್ಯದರ್ಶಿ ಡಿ.ಸಿ ಕುಲಕುಂದಿಕರ ಸೇರಿದಂತೆ ವಕೀಲರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here