ರಾಂಪುರೆಯವರ 100ನೇ ಜನ್ಮದಿನ ಆಚರಣೆ

0
89

ಆಳಂದ : ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎ.ವ್ಹಿ ಪಾಟೀಲ್ ಪದವಿ ಮಹಾ ವಿದ್ಯಾಲಯದಲ್ಲಿ ಇಂದು ದಿ. ಮಹಾದೇವಪ್ಪ ರಾಂಪುರೆಯವರ 100ನೇ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪ್ರೊ. ಎಸ್ ಎಸ್ ಕಮ್ಮಾರ ರಾಂಪುರೆಯವರ ಜೀವನ ಮತ್ತು ಹೋರಾಟದ ಹಾದಿಯ ಬಗ್ಗೆ ವಿವರವಾಗಿ ಮಾತನಾಡಿದರು.

Contact Your\'s Advertisement; 9902492681

ಸಭೆಯ ಅಧ್ಯಕ್ಷತೆಯನ್ನು ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್. ಡಿ.ಭದಿ೯ಯವರು ಮಾತನಾಡುತ್ತಾ, ಮಹಾದೇವಪ್ಪ ರಾಂಪುರೆಯವರ ಜೀವನ  ಹೋರಾಟಕ್ಕೆ ಮೀಸಲಾಗಿತ್ತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅವರು ಅಕ್ಷರ ಕ್ರಾಂತಿಯನ್ನೇ ಸೃಷ್ಟಿಸಿದ ಮಹಾನರು. ಗ್ರಾಮೀಣ ಪ್ರದೇಶದಲ್ಲಿ ಕಾಲೇಜುಗಳುನ್ನು ಪ್ರಾರಂಭಿಸಿ ಮನೆ ಮನೆಗಳಲ್ಲಿ ಅಕ್ಷರ ದೀಪ ಹಚ್ಚಿ ಗ್ರಾಮೀಣ ಮಹಿಳೆಯರಿಗೆ ದಾರಿ ದೀಪವಾದರು.

ಆಗೀನ ಕಾಲದಲ್ಲಿ ಈ ಭಾಗದಲ್ಲಿ ತಾಂತ್ರಿಕ, ವೈದ್ಯಕೀಯ  ವಿದ್ಯಾಲಯಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳ ದಾಹ ನೀಗೀಸಿದ ಮಹಾನರು. ರಾಜಕೀಯವಾಗಿ, ಶೈಕ್ಷಣಿಕ ವಾಗಿ, ಸಾಂಸ್ಕೃತಿಕವಾಗಿ ಈ ಭಾಗವನ್ನು ಶ್ರೀಮಂತಗೊಳಿಸಿದರು. ಮೂರು ಬಾರಿ ಲೋಕಸಭೆ ಸದಸ್ಯರಾಗಿ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸುತ್ತ ಅಭಿವೃದ್ಧಿಗಾಗಿ ಹಗಲಿರುಳು ಶ್ರಮವಹಿಸಿ ದ ಮಹಾನುಭಾವರು ಎಂದು ಸಭೆಯನ್ನುದ್ದೆಸಿಸಿ ಮಾತನಾಡಿದರು.

ಕೊನೆಯಲ್ಲಿ ಪ್ರೊ. ಸಂಗೀತಾ ಯಳಸಂಗಿ ಯವರ ವಂದನಾಪ೯ಣೆಯೊಂದಿಗೆ ಕಾಯ೯ಕ್ರಮ ಮುಕ್ತಾಯಗೊಂಡಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here