ಕಲಬುರಗಿ: ಜಿಲ್ಲೆಯ ಹೊರ ವಲಯ, ಹಾಗರಗಾ ಹತ್ತಿರ ಬೆಳಿಗ್ಗೆ 4.30 ಗಂಟೆ ಸುಮಾರಿಗೆ ವ್ಯಕ್ತಿ ಓರ್ವನನ್ನು ಕೊಲೆ ಮಾಡಿರುವ ಘಟನೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಸಂಭವಿಸಿದೆ.
ಲಕ್ಮೀಕಾಂತ ಭೀಮಶಾ (40) ಕೊಲೆಯಾದ ವ್ಯಕ್ತಿ. ಲಕ್ಮೀಕಾಂತ ಹಾಗರಹಾ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ಇಂದು ಬೆಳಿಗ್ಗೆ 4.30 ಗಂಟೆ ಸುಮಾರಿಗೆ ಮನೆಯಿಂದ ನಗರದ ಕಣ್ಣಿ ಮಾರುಕಟೆಗೆ ತರಕಾರ ತೆಗೆದೊಕೊಳ್ಳಲು ತೆರಳಿದ್ದಾಗ ಹಾಗರಗಾ ಮತ್ತು ಮಲಗತ್ತಿ ರಸ್ತೆ ಮದ್ಯೆ ಅತನನ್ನು ತಡೆದು ಕೊಲೆ ಮಾಡಿದ್ದಾರೆಂದು ತಿಳಿದುಬಂದಿದೆ.
ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೊಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸುರ ಬಲೆ ಬಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಕುರಿತು ಕಲಬುರಗಿ ವಿಶ್ವ ವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.