ಪಿಂಚಣಿ ಬಿಡುಗಡೆಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ

0
24

ಕಲಬುರಗಿ: ವಿಕಲಚೇತನ, ವೃದ್ಧಾಪ್ಯ ಮತ್ತು ವಿಧವಾ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಿಗೆ ನೀಡುವ ಪಿಂಚಣಿ  ಸ್ಥಗಿತಗೊಂಡಿದ್ದು ಅದನ್ನು ಪುನರ್ ಆರಂಭಿಸಬೇಕು ಎನ್ನುವದು  ಸೇರಿದಂತೆ ವಿವಿಧ ಜನಪರ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾ ಜೆಡಿಎಸ್ ಯುವಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ನಡೆಸಿ ಮನವಿ ಸಲ್ಲಿಸ ಲಾಯಿತು.

೨೦೧೮-೧೯ ನೆಯ  ಸಾಲಿನಲ್ಲಿ  ಬೆಳೆ ಸಾಲ ಮನ್ನಾ ಆಗಿದ್ದು ಅದರ ಪ್ರಯೋಜನ ಕಲಬುರಗಿ ಜಿಲ್ಲೆಯ ರೈತರಿಗೆ ಸಿಕ್ಕಿಲ್ಲ. ಆದ್ದರಿಂದ  ಸರಕಾರ  ಸಾಲ ಮನ್ನಾಹಣ ಬಿಡುಗಡೆ ಮಾಡಿ ಹೊಸ  ಸಾಲ ವಿತರಿಸಲು ಆಗ್ರಹಿಸಲಾಯಿತು.

Contact Your\'s Advertisement; 9902492681

ಸ್ಲಂ ಬೋರ್ಡನಿಂದ ಮನೆಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡ ಬೇಕು. ವಿವಿಧ ನಿಗಮಗಳಿಂದ, ಸಣ್ಣ ವ್ಯಾಪಾರಿಗಳಿಗೆ, ನಿರುದ್ಯೋಗಿಗಳಿಗೆ, ಮಹಿಳೆಯರಿಗೆ ಬ್ಯಾಂಕ್  ಸಾಲ ವಿತರಿ ಸ ಬೇಕು. ಪ್ರಧಾನ ಮಂತ್ರಿ ಆವಾ ಸ್ ಯೋಜನೆಯಡಿ ವಸತಿ ರಹಿತರಿಗೆ ಮನೆ ನಿರ್ಮಿಸಿ ಕೊಡ ಬೇಕು ಎಂದು ಆಗ್ರಹಿ ಸಲಾಯಿತು.

ಪ್ರತಿಭಟನೆಯಲ್ಲಿ  ಮುಖಂಡರಾದ ಶಾಮರಾವ ಸೂರನ್, ಮನೋಹರ ಪೋದ್ದಾರ, ಸಂಜೀವನ್‌ಯಾಕಾಪುರ, ಜಿಲ್ಲಾ  ಯುವ  ಜೆಡಿಎಸ್ ಅಧ್ಯಕ್ಷ  ಅಲಿಂ ಇನಾಮದಾರ, ಶಂಕರ ಕಟ್ಟಿ ಸಂಗಾವಿ, ಕೃಷ್ಣ ರೆಡ್ಡಿ,ನರ ಸಯ್ಯ ಗುತ್ತೇದಾರ,ಮೈನೋದ್ದೀನ್ ಕ ಲ್ಯಾಣಿ, ನಾಗಣ್ಣ ವಾರದ, ದೇವಿಂದ್ರ ಹಸನಾಪುರ  ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here