ಸಂವಿಧಾನ ಭಾರತೀಯರ ಧರ್ಮಗ್ರಂಥವಾಗಲಿ: ಲಿಂಗರಾಜ ತಾರಫೈಲ

0
16

ಕಲಬುರಗಿ: ತಾಲೂಕಿನ ನಡುವಿನಹಳ್ಳಿ ಗ್ರಾಮದಲ್ಲಿ ಡಿಎಮ್.ಎಸ್.ಎಸ್.ಸಂಘಟನೆಯ ನೂತನ ಗ್ರಾಮ ಶಾಖೆ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಡಿಎಮ್.ಎಸ್.ಎಸ್ ರಾಜ್ಯಾಧ್ಯಕ್ಷ ಲಿಂಗರಾಜ ತಾರಫೈಲ ಅವರು ಮಾತನಾಡಿ ಸಂವಿಧಾನದ ಅಡಿಯಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕರಿಗೂ ಮೂಲಭೂತ ಹಕ್ಕುಗಳಿವೆ. ಭಾರತವು ಹಲವಾರು ಧರ್ಮ, ಜಾತಿ, ಬುಡಕಟ್ಟು, ಭಾಷೆ ಪ್ರದೇಶಗಳ ಜನರನ್ನು ಒಳಗೊಂಡ ಸುಂದರವಾದ ಶ್ರೇಷ್ಟ ದೇಶವಾಗಿದೆ.

Contact Your\'s Advertisement; 9902492681

ಎಲ್ಲರೂ ಸೌಹಾರ್ದ ಜಾತಿ ಸಹೋದರತ್ವದ ಭಾವನೆಗಳೊಂದಿಗೆ ಈ ದೇಶದಲ್ಲಿ ಬದುಕುವದಾದರೆ ದೇಶ ಸದೃಡವಾಗಿರಲು ಸಂವಿಧಾನ ಭಾರತೀಯರ ಧರ್ಮಗ್ರಂಥವಾಗಬೇಕೆಂದು ಆಶಯ ವ್ಯಕ್ತಪಡಿಸಿ ಇಂದಿನ ಎಲ್ಲಾ ಸಮುದಾಯದ ನಾವುಗಳು ಸುರಕ್ಷಿತವಾಗಿ ಬದುಕಲು ನಮಗೊಸ್ಕರ ನಮ್ಮ ಮುಂದಿನ ಯುವ ಪೀಳಿಗೆಗಾಗಿ ನಮ್ಮ ಸಂವಿಧಾನವನ್ನು ಅದರ ಆದರ್ಶಗಳನ್ನು ರಕ್ಷಿಸಬೇಕು. ಮತ್ತು ಭಾರತದ ಸಂವಿಧಾನ ಪೂರ್ಣವಾಗಿ ಯುವಜನಾಂಗ ಓದಬೇಕು ಹಾಗೂ ಸಂವಿಧಾನ ಕುರಿತು ಜನರಿಗೆ ಅರಿವು ಜಾಗೃತಿ ಮೂಡಿಸಬೇಕೆಂದು ನೂತನ ಶಾಖೆ ಪದಾಧಿಕಾರಿಗಳಿಗೆ ಕರೆಕೊಟ್ಟರು.

ರಾಜ್ಯ ಪ್ರಧಾನಕಾರ್ಯದರ್ಶಿ ಬಸವರಾಜ ಜವಳಿ ಮಾತನಾಡಿ ದಲಿತ ಚಳುವಳಿಯ ನೇತಾರ ಮಹಾತ್ಮ ಪ್ರೋ.ಬಿ.ಕೃಷ್ಣಪ್ಪ ನವರ ಆದರ್ಶ ಸಿದ್ಧಾಂತಗಳನ್ನು ಮುಂದಿಟ್ಟುಕೊಂಡು ಡಿ.ಎಂ.ಎಸ್.ಎಸ್.ಸಂಘಟನೆಯು ಅವರ ಆಸೆಯಂತೆ ಅವರ ಕನಸುಗಳನ್ನು ಸಹಕಾರಗೊಳಿಸಲು ಗ್ರಾಮೀಣ ಭಾಗದಲ್ಲಿ ಇರುವಂತಹ ಜನಾಂಗವನ್ನು ಜಾಗೃತಗೊಳಿಸುತ್ತ ಅನ್ಯಾಯಕ್ಕೆ ಒಳಗಾಗುತ್ತಿರುವ ಮಹಿಳೆಯರ ಸುರಕ್ಷತೆಯ ಬಗ್ಗೆ ಶಿಕ್ಷಣ, ರಾಜಕೀಯ, ಉದ್ಯೋಗ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಸರಾಯಿ, ಜೂಜು,ಮಟಾಕ ಮತ್ತು ಮೌಡ್ಯಚಾರಣೆಗಳಾದ ದೇವದಾಸಿಯಂತಹ ಅನಿಷ್ಟ ಪದ್ಧತಿಯಿಂದ ಜನರನ್ನು ಮುಕ್ತಗೊಳಿಸಲು ಸಂಘಟನೆಯು ಜಿಲ್ಲೆಯಲ್ಲಿ ನೂತನ ಗ್ರಾಮ ಶಾಖೆಗಳನ್ನು ಉದ್ಘಾಟನೆ ಮಾಡುವುದರ ಮೂಲಕ ಜನಜಾಗೃತಿ ಕಾರ್ಯ ಮಾಡುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ನೂತನ ಗ್ರಾಮ ಶಾಖೆಯ ೯ ಜನ ಸದಸ್ಯರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಗ್ರಾಮದ ಮುಖಂಡರಾದ ಶರಣಗೌಡ ಹೊನಗುಂಟಾ ರವರು ವಹಿಸಿದ್ದು, ಈ ಸಂದರ್ಭದಲ್ಲಿ ಶರಣಪ್ಪ ಸುಬೇದಾರ, ರಾಜು ಸಾಹುಕಾರ ಬಾಳಿ, ಮರಲಿಂಗ ಮಲ್ಲಾಬಾದಿ, ಈಶ್ವರ ಹಳ್ಳಿ, ವಿಜಯಕುಮಾರ ದೊಡ್ಡಮನಿ, ಸಂತೋಷ ಪಾಟೀಲ, ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here