ಆಳಂದ: ಭಾರತ ಮತ್ತು ಬಾಂಗ್ಲಾ ಗಡಿಯಲ್ಲಿ ವೈರಿಗಳ ಗುಂಡಿನದಾಳಿಗೆ ತುತ್ತಾಗಿ ವೀರಮರಣವನ್ನಪ್ಪಿದ ಬಿಎಸ್‌ಎಫ್ ಯೋಧ ತಾಲೂಕಿನ ಚಿಂಚನಸೂರ ಗ್ರಾಮದ ರಾಜಕುಮಾರ ಮಾವೀನಕರ್ ಅವರಿಗೆ ಪಟ್ಟಣದಲ್ಲಿ ವಿವಿಧ ಸಂಘಟನೆಗಳಿಂದ ಪ್ರತ್ಯೇಕವಾಗಿ ಶೃದ್ಧಾಂಜಲಿ ಸಲ್ಲಿಸಲಾಯಿತು.
ಪಟ್ಟಣದ ಬಸ್ ನಿಲ್ದಾಣ ಮುಂದೆ ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಹಾಗೂ ತಾಲೂಕು ಘಟಕದ ಆಶ್ರಯದಲ್ಲಿ ವೀರಯೋಧನಿಗೆ ಭಾವಪೂರ್ಣ ಶೃದ್ಧಾಂಜಲಿ ಅರ್ಪಿಸಿ ನೌನಾಚಣೆ ಕೈಗೊಂಡರು.
ವೇದಿಕೆಯ ಜಿಲ್ಲಾ ಅಧ್ಯಕ್ಷ ಬಸವರಾಜ ಎಸ್. ಕೊರಳ್ಳಿ ಅವರು ಯೋಧನ ಭಾವಚಿತ್ರಕ್ಕೆ ಮಾಲಾರ್ಪಣೆ ಕೈಗೊಂಡು ಮಾತನಾಡಿದ ಅವರು, ರಾಷ್ಟ್ರಕ್ಕಾಗಿ ವೀರಮರಣವನ್ನಪ್ಪಿದ ವೀರಯೋಧ ರಾಜಕುಮಾರ ಮಾವಿನಕರ್ ತನ್ನ ಪ್ರಾಣದ ಹಂಗು ತೋರೆದು ದೇಶದ ಗಡಿ ರಕ್ಷಣೆಯಲ್ಲಿ ಹುತಾತ್ಮರಾಗಿದ್ದಾರೆ. ಅವರ ತ್ಯಾಗ ಬಲಿದಾನವನ್ನು ಸಮಾಜ ಎಂದು ಬರೆಯುವುದಿಲ್ಲ. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಯೋಧ ರಾಜಕುಮಾರ ಅವರ ಕುಟುಂಬಕ್ಕೆ ಭಗವಂತ ಸೈರಿಸುವ ಶಕ್ತಿಯನ್ನು ನೀಡಲಿ ಎಂದು ಹೇಳಿದರು.
ನಾಗರಾಜ ಘೋಡಕೆ, ಶರಣು ಕುಲಕರ್ಣಿ, ಸುನಿಲ ಐರೋಡಗಿ, ಸಿದ್ಧರೂಢ ಸರಸಂಬಿ, ನಾಗರಾಜ ಆರ್ಯೆ, ಬಸವರಾಜ ಘಂಟೆ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕರವೇ ಶೃದ್ಧಾಂಜಲಿ: ಪಟ್ಟಣದ ಬಸ್ ನಿಲ್ದಾಣ ಮುಂದೆ ಕರ್ನಾಟಕ ರಕ್ಷಣಾ ವೇದಿಯ ಅಧ್ಯಕ್ಷ ಲಕ್ಷ್ಮೀಕಾಂತ ಉದನೂರ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಅಗಲಿದ ವೀರಯೋಧ ರಾಜಕುಮಾರನಿಗೆ ಭಾವಪೂರ್ಣ ಶೃದ್ಧಾಂಜಲಿ ಅರ್ಪಿಸಿದರು. ಮುಖಂಡ ಇಕ್ಬಾಲ ಬಿಲಗುಂದಿ, ಆನಂದರಾಯ ಯಲಶೆಟ್ಟಿ, ದವಲಪ್ಪ ವಣದೆ, ಗುರುನಾಥ ವಣದೆ, ಪ್ರಭು ಪಾಟೀಲ, ಕಂಠು ರಾಠೋಡ ಮತ್ತಿತರು ಪಾಲ್ಗೊಂಡಿದ್ದರು.