ಕೋವಿಡ್-೩ನೇ ಅಲೆ ನಿಯಂತ್ರಣಕ್ಕೆ ಜನರ ಸಹಕಾರ ಅಗತ್ಯ: ಜಿಲ್ಲಾಧಿಕಾರಿ

0
20

ಆಳಂದ: ಕೇಲವ ಜಿಲ್ಲಾಡಳಿತದಿಂದ ಮಾತ್ರ ಕೋವಿಡ್ ೩ನೇ ಅಲೆಯನ್ನು ನಿಯಂತ್ರಣ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರ ಹಾಗೂ ಮುಂಜಾಗೃತೆ ಕ್ರಮವೂ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿ.ವಿ. ಜ್ಯೋತ್ಸ್ನಾ ಅವರು ಹೇಳಿದರು.
ತಾಲೂಕಿನ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ಹಿರೋಳಿ ಚೆಕ್‌ಪೋಸ್ಟ್‌ಗೆ ಗುರುವಾರ ಭೇಟಿ ನೀಡಿದ ಬಳಿಕ ಪರಿಸ್ಥಿತಿಯನ್ನು ಪರಿಶೀಲಿಸಿ ಮಾತನಾಡಿದರು.

ಕೋವಿಡ್ ವೈರಸ್ ಮಹಾರಾಷ್ಟ್ರ ಹಾಗೂ ಕೇರಾಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಂಡುಬರುತ್ತಿದೆ. ಇಲ್ಲೂ ಸಹ ಎರಡ್ಮೂರು ವಾರಗಳಲ್ಲಿ ಮರುಕಳಿಸುವ ಸಾಧ್ಯತೆ ಇರುವುದರಿಂದ ಮುಂಜಾಗೃತ ಕ್ರಮವಾಗಿ ಹೊರಗಿನಿಂದ ಜಿಲ್ಲೆಗೆ ಬರುವವರನ್ನು ತಪಾಸಣೆ ವರದಿ ಇಲ್ಲದ್ದಿದ್ದರೆ ವಾಪಸು ಕಳುಸಲಾಗುತ್ತಿದೆ. ಆದರೆ ಅನ್ಯಮಾರ್ಗದಿಂದ ಬರುವವರನ್ನು ಎಷ್ಟೊಂದು ತಡೆಯಲು ಸಾಧ್ಯವಿದೆ. ಅನ್ಯ ಮಾರ್ಗವನ್ನು ಮುಳ್ಳು ಕಂಟಿಗಳನ್ನು ಹಾಕಿ ಪ್ರವೇಶ ತಡೆಯುವಂತೆ ಅಧಿಕಾರಿಗಳು ತಾಕೀತು ಮಾಡಿದ್ದು, ಈ ಕುರಿತು ಇಂದಿನಿಂದಲೇ ಆರ್‌ಟಿಪಿಸಿಆರ್ ನೆಗೆಟಿವು ವರದಿ ಇಲ್ಲದ ಹೊರಗಿನವರ ಪ್ರವೇಶಕ್ಕೆ ಬ್ರೇಕ್ ಹಾಕಲಾಗುವುದು ಎಂದು ಅವರು ಹೇಳಿದರು.

Contact Your\'s Advertisement; 9902492681

ವೈರಸ್ ನಿಯಂತ್ರಣಕ್ಕೆ ಎಲ್ಲರಲ್ಲೂ ಶಿಸ್ತು ಪರಿಪಾಲನೆ ಅಗತ್ಯವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿದ್ಲೆ. ಈ ಹಿಂದೆ ಆದ ಪ್ರಮಾದವನ್ನು ಮರುಕಳಿಸಬಾರದು. ಆಕ್ಸಿನ್ ಇಲ್ಲದೆ ರೋಗಿಗಳು ತೊಂದರೆ ಅನುಭವಿಸಿದ್ದು ಗಮನಿಸಿದ್ದೇವೆ. ೩ನೇ ಅಲೆಯನ್ನು ತಡೆಯಲು ಜಿಲ್ಲಾಡಳಿತದಿಂದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಈ ೩ನೇ ಅಲೆಯನ್ನು ನಿಯಂತ್ರಿಸಲು ಜನರು ಕೈಜೋಡಿಸುವುದು ಮುಖ್ಯವಾಗಿದೆ ಎಂದು ಅವರು ಪುನರುಶ್ಚರಿಸಿದರು.

೨ ಬಾರಿ ಕೋವಿಡ್ ಲಸಿಕೆ ಪಡೆದವರಿಗೆ ಹೊರದೇಶಕ್ಕೆ ಹೋಗಿ ಬರುತ್ತಾರೆ. ಆದರೆ ಗಡಿ ಭಾಗದಲ್ಲಿ ೨ ಬಾರಿ ಲಸಿಕೆ ಪಡೆದರು ಪ್ರವೇಶ ನೀಡುತ್ತಿಲ್ಲ ಇದರಿಂದ ಜನರಿಗೆ ತೊಂದರೆ ಆಗುತ್ತಿದೆ ಎಂಬುದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಅವರು, ನೋಡಿ ಕಟ್ಟನಿಟ್ಟಾಗಿ ನಿಯಂತ್ರಣಕ್ಕೆ ಮುಂದಾಗಿದ್ದು, ಆರ್‌ಟಿಪಿಸಿಆರ್ ನೆಗೆಟಿವು ವರದಿ ಇದ್ದರೆ ಮಾತ್ರ ಪ್ರವೇಶ ನೀಡುವುದಕ್ಕಾಗಿ ಚೆಕ್ ಪೋಸ್ಟ್ ಕಾರ್ಯನಿರ್ವಹಿಸುತ್ತಿದ್ದು, ಈ ನಡುವೆ ಅನ್ಯ ಮಾರ್ಗಗಳಿಂದ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಇದರಿಂದ ಸೋಂಕು ಉಲ್ಬಣಗೊಳ್ಳುವ ಸಾಧ್ಯತೆ ಎದುರಾಗುವ ಮೊದಲೇ ಜನರು ಸಹ ಎಚ್ಚರದಿಂದ ಕಾರ್ಯನಿರ್ವಹಿಸಿ ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದು ಹೇಳಿದರು.

ಸರ್ಕಾರದಿಂದ ಸಾಕಷ್ಟು ಬಂದೋಬಸ್ತಿ ಕೈಗೊಳ್ಳುತ್ತಿದ್ದು, ಆರ್‌ಟಿಪಿಎಸ್‌ಆರ್ ತಪಾಸಣೆ ಕೈಗೊಳ್ಳುತ್ತಿದ್ದು, ಜನರ ಬಳಿ ಜಾಗೃತಿ ತಂದುಕೊಂಡರೆ ಎಲ್ಲವೂ ಸರಿದ್ಯೂಗುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರೆಯಮ್ಮ ಜಾರ್ಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಡಾ. ದಿಲಿಷ್ ಸಸಿ, ಸಹಾಯಕ ಆಯುಕ್ತೆ ಮೋನಾರೋತ, ತಹಸೀಲ್ದಾರ ಯಲ್ಲಪ್ಪ ಸುಬೇದಾರ, ತಾಪಂ ಇಓ ನಾಗಮೂರ್ತಿ ಶೀಲವಂತ, ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ, ಮಾದನಹಿಪ್ಪರಗಾ ಪಿಎಸ್‌ಐ ಮಲ್ಲಿಕಾರ್ಜುನ, ಕಂದಾಯ ನಿರೀಕ್ಷಕ ರಾಜು ಸರಸಂಬಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here