ಕಲಬುರಗಿ: ಸಿ.ಎಸ್.ಸಿ ಸೇವಾ ಸೇವಾ ಸಿಂಧು ಕೇಂದ್ರಗಳ ಅರ್ಜಿಗಳನ್ನು ಅಧೀಕಾರಿಗಳನ್ನು ಪರೀಶಿಲಿಸಿ ನಾಗರಿಕರಿಗೆ ಅನುಕುಲ ಮಾಡಿಕೋಡ ಬೇಕೆಂದು ಕಲಬುರಗಿ ಜಿಲ್ಲೆ ಕಾಮನ್ ಸರ್ವಿಸ್ ಸೇಂಟರ ಸೇವಾ ಸಿಂಧು ಕೇಂದ್ರ ಅಧ್ಯಕ್ಷ ಸಿದ್ದರಾಮಯ್ಯ ಕೆ.ಮಠ ಅವರು ಕಂದಾಯ ಸಚಿವ ಆರ್.ವಿ ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು.
ಸೇವಾ ಸಿಂಧು ಕೇಂದ್ರದಲ್ಲಿ ಆರೋಗ್ಯ ಕರ್ನಾಟಕ ಹೇಲ್ತ ಕಾರ್ಡ ಅನ್ನು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಾನ್ಯ ಮಾಡಲಾಗುತ್ತಿಲ್ಲ, ಮಾನ್ಯ ಮಾಡುವಂತೆ ಕ್ರಮ ಕೈಗೋಳ್ಳಬೇಕು. ಕಂದಾಯ ಇಲಾಖೆಯ ಎಲ್ಲಾ ಸೇವೆಗಳಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು ಮೂಲ ದಾಖಲಾತಿಗಳು ಲಗತ್ತಿಸಿಲ್ಲ ಎಂದು ಸೇವಾ ಸಿಂಧು ಕೇಂದ್ರಗಳ ಅರ್ಜಿಗಳನ್ನು ಕಾರಣ ನೀಡಿ ತಿರಸ್ಕರಿಸುವ ಮೂಲಕ ಸಿಎಸ್ ಸಿ ಸೇವಾ ಕೇಂದ್ರಗಳ ಜೊತೆ ಮಲತಾಯಿ ಧೋರಣೆ ಅನುಸರಿಸುತಿದ್ದಾರೆಂದು ತಮ್ಮ ಮನವಿ ಪತ್ರದಲ್ಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಲಬುರಗಿ ನಗರದ ವಿವಿಧ ಸಿಎಸ್ ಸಿ ಸೇವಾ ಸಿಂಧು ಕೇಂದ್ರಗಳ ಮುಖಂಡರು ಇದ್ದರು.