ಬುದ್ದಿವಂತ ಶೆಟ್ಟರ್ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ: ಸಿದ್ದಪ್ಪ ಹೊಟ್ಟಿ

0
18

ಸುರಪುರ: ಕನ್ನಡದ ಕಟ್ಟಾಳು ರಂಗಂಪೇಟೆಯ ಬುದ್ಧಿವಂತ ಶೆಟ್ಟರ್ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸುವಂತೆ ಯಾದಗಿರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಮೂಲಕ ಇಲಾಖೆಯ ನಿರ್ದೇಶಕರು ಹಾಗೂ ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸಿದ್ದಪ್ಪ ಹೊಟ್ಟಿ ನೇತೃತ್ವದ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದಪ್ಪ ಹೊಟ್ಟಿ, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿನದಲ್ಲಿ ಪ್ರಸ್ತುತ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಹಲವಾರು ಟ್ರಸ್ಟ್ ಹಾಗೂ ಪ್ರತಿಷ್ಠಾನಗಳ ಮಾದರಿಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಹೊಸದಾಗಿ ಸರಕಾರದಿಂದ ಎಂ.ಆರ್. ಬುದ್ದಿವಂತ ಶೆಟ್ಟರ್ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಬೇಕೆಂದು ಮನವಿ ಮಾಡಿದರು.

Contact Your\'s Advertisement; 9902492681

ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಕಾರ್ಯದರ್ಶಿ ಶಾಂತಪ್ಪ ಬೂದಿಹಾಳ ಮಾತನಾಡಿ, ನಿಜಾಮನ ಉರ್ದು ಪ್ರಾಬಲ್ಯದ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರಂಗಂಪೇಟೆಯಲ್ಲಿ ಕನ್ನಡ ಸಾಹಿತ್ಯ ಸಂಘವನ್ನು ಕಟ್ಟಿ ಕೈ ಭರಹದ ಮೂಲಕ ಹಸ್ತ ಪ್ರತಿಗಳನ್ನು ಹಂಚಿ ಕನ್ನಡ ಪ್ರೇಮ ಬಿತ್ತಿ ಬೆಳೆದಿದ್ದಾರೆ. ೭ ದಶಕಗಳ ಕಾಲ ನಾಡಹಬ್ಬವನ್ನು ನಿರಂತರವಾಗಿ ಸಾಹಿತ್ಯ ಸಂಘದ ಮೂಲಕ ನಡೆಸಿದ್ದಾರೆ, ನಾಡಿನ ಹೆಸರಾಂತ ಸಾಹಿತ್ಯ ದಿಗ್ಗಜರನ್ನು ಸುರಪುರಕ್ಕೆ ಆವ್ಹಾನಿಸಿ ಆತಿಥ್ಯ ಮೆರೆದಿದ್ದಾರೆ ಅಲ್ಲದೆ ಅನೇಕ ಹೊಸ ಬರಹಗಾರರಿಗೆ ಪ್ರೇರಣ ಶಕ್ತಿಯಾಗಿ ಕಾರ್ಯನಿರ್ವಹಿಸಿರುವ ಕನ್ನಡದ ಕಟ್ಟಾಳು ಎಂ.ಆರ್.ಬುದ್ದಿವಂತ ಶೆಟ್ಟರ್ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಬೇಕು ಎಂದರು.

ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ ಹಲಸಂಗಿ ಪ್ರತಿಷ್ಠಾನ, ರನ್ನ ಪ್ರತಿಷ್ಠಾನ, ಬೇಂದ್ರೆ ಟ್ರಸ್ಟ್ ಮಾದರಿಯಲ್ಲಿ ಯಾದಗಿರಿ ಜಿಲ್ಲೆಯಿಂದ ದಿ. ಎಂ.ಆರ್. ಬುದ್ದಿವಂತ ಶೆಟ್ಟರ ಟ್ರಸ್ಟ್ ಸರಕಾರ ಸ್ಥಾಪಿಸಬೇಕು ಎಂದು ಒತ್ತಾಯ ಮಾಡಿದರು.ಈ ಸಂದರ್ಭದಲ್ಲಿ ಮನವಿಯನ್ನು ಸ್ವೀಕರಿಸಿದ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕರು ನಿಮ್ಮ ಮನವಿಯನ್ನು ಇಲಾಖೆಯ ನಿರ್ದೇಶಕರಿಗೆ ಕಳುಹಿಸುವುದಾಗಿ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here