ನಾಗಲಾಂಬಿಕೆ, ಗಂಗಾಂಬಿಕೆ, ನೀಲಾಂಬಿಕೆ: ಶರಣ ಚರಿತೆ

0
16

ಬಸವಣ್ಣನವರ ಜೊತೆಯಾಗಿ ಬೆಳೆದ ಅಕ್ಕ ನಾಗಲಾಂಬಿಕೆಗೆ ತಾಯಿಗಿಂತ ಮಹತ್ವದ ಸ್ಥಾನವಿದ್ದು, ಇವರಿಬ್ಬರು ಅನೋನ್ಯ ಬದುಕಿದವರು. ಬಸವಣ್ಣನವರು ಕೈಗೊಂಡ ಮಹತ್ವದ ಈ ಕಾರ್ಯದಲ್ಲಿ ಕೊನೆಯವರೆಗೂ ಸಂಪೂರ್ಣ ಬೆಂಬಲವಾಗಿ ನಿಂತವರು. ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪಾತ್ರ-ಪ್ರಭಾವ ಇರುತ್ತದೆ ಎಂದು ಹೇಳುತ್ತಾರೆ.

ಆದರೆ ಬಸವಣ್ಣನವರ ಯಶಸ್ವಿಯ ಹಿಂದೆ ಅಕ್ಕ ನಾಗಲಾಂಬಿಕೆ, ಮಡದಿಯರಾದ ಗಂಗಾಂಬಿಕೆ ಮತ್ತು ನೀಲಾಂಬಿಕೆ ಈ ಮೂವರ ಪಾತ್ರವಿರುವುದನ್ನು ಗಮನಿಸಬಹುದು. ವಿಜಯಪುರ ಜಿಲ್ಲೆಯ ಬಾಗೇವಾಡಿ ಬಸವಣ್ಣ ಮತ್ತು ನಾಗಲಾಂಬಿಕೆಯರ ಸ್ವಂತ ಊರು. ಇಂಗಳೇಶ್ವರ ಇವರ ತಾಯಿ ಮಾದಲಾಂಬಿಕೆಯ ತವರೂರು.

Contact Your\'s Advertisement; 9902492681

ನಾಗಲಾಂಬಿಕೆ: ಪ್ರಾಧಿಕಾರದವರು ಮಾದರಸ-ಮಾದಲಾಂಬಿಕೆಯರಿದ್ದ ಮೂಲ ಮನೆಯನ್ನು ಈಗ ಸ್ಮಾರಕವನ್ನಾಗಿ ನಿರ್ಮಾಣ ಮಾಡಿರುವುದರಿಂದ ಬಸವನ ಬಾಗೇವಾಡಿ ಹಾಗೂ ಇಂಗಳೇಶ್ವರದಲ್ಲಿ ಅಕ್ಕನಾಗಮ್ಮನ ಮೂರ್ತಿಯೂ ಕಣಬಹುದು. ಇಂಗಳೇಶ್ವರದ ಕಲ್ಲಿನಾಥ ದೇವಾಲಯದ ಎದುರಿಗಿರುವ ಬೆಟ್ಟದ ತುದಿಯಲ್ಲಿ ನಾಗಲಾಂಬಿಕೆ ಹೆಸರಿನ ಗವಿ ಕಾಣಬಹುದು.

ಉಪನಯನ ತಿರಸ್ಕರಿಸಿದ ಬಸವಣ್ಣನವರು ಶಿಕ್ಷಣಕ್ಕಾಗಿ ಕೂಡಲಸಂಗಮಕ್ಕೆ ಇಲ್ಲಿಗೆ ಬಂದಾಗ ಅವರ ಜೊತೆ ನಾಗಲಾಂಬಿಕೆಯೂ ಬಂದರು. ಸಂಗಮೇಶ್ವರ ದೇವಾಲಯದ ಜೋಡು ನಂದಿ ಇರುವ ಸ್ಥಳದಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದರು ಎನ್ನಲಾಗುತ್ತಿದೆ. ಬಸವಕಲ್ಯಾಣದಲ್ಲಿ ಅಕ್ಕನಾಗಮ್ಮನ ಹೆಸರಿನ ಉದ್ದನೆಯ ಗವಿಯಿದೆ.

ಅಲ್ಲೊಂದು ಅಕ್ಕನಾಗಮ್ಮನ ಶಿಲಾಮೂರ್ತಿಯಿದೆ. ಕಲ್ಯಾಣ ಕ್ರಾಂತಿಯ ನಂತರ ಉಳುವೆ ಕಡೆ ಹೊರಟಿರುವುದರಿಂದ ಧಾರವಾಡದ ಯು.ಬಿ. ಹಿಲ್ಸ್, ಬೈಲಹೊಂಗಲ ತಾಲ್ಲೂಕಿನ ಮರಡಿ ನಾಗಲಾಪುರ, ಉಳವಿ, ತರಿಕೆರೆ, ಎಣ್ಣೆಹೊಳೆ ಮುಂತಾದ ಕಡೆ ಅಕ್ಕನಾಗಮ್ಮನ ಹೆಸರಿನ ಸ್ಮಾರಕಗಳಿದ್ದು, ಎಣ್ಣೆಹೊಳೆಯಲ್ಲಿ ಅವರು ಲಿಂಗೈಕ್ಯರಾದರು ಎಂದು ಹೇಳುತ್ತಾರೆ.

ಗಂಗಾಂಬಿಕೆ:ಬಸವಕಲ್ಯಾಣದ ಪರುಷ ಕಟ್ಟೆ ಪಟ್ಟಣದ ಭಾಗದಲ್ಲಿ ಇವರ ತಂದೆ ಬಲದೇವರಸನ ಮನೆಯಿತ್ತು. ಕ್ರಾಂತಿಯ ನಂತರ ಕಲ್ಯಾಣದಿಂದ ನಾಗಲಾಂಬಿಕೆಯ ಜೊತೆ ಹೊರಟಾಗ ಕಲಬುರಗಿ ಜಿಲ್ಲೆಯ ಜೇರಟಗಿ ತಾಲ್ಲೂಕಿನ ಜೇರಟಗಿಯಲ್ಲಿ ಕೆಲವು ದಿನ ತಂಗಿದ್ದರು ಎಂದು ಹೇಳಲಾಗುತ್ತಿದ್ದು, ಇಲ್ಲಿ ನೀಲಗಂಗಾ ಹೆಸರಿನ ದೇವಸ್ಥಾನವಿದೆ. ಎಂ.ಕೆ. ಹುಬ್ಬಳಿಯಲ್ಲಿ ಇವರ ಸಮಾಧಿಯಿದೆ. ಹುಣಸಿಕಟ್ಟಿಯಲ್ಲಿ ರುದ್ರಮುನಿಯವರ ಸ್ಮಾರಕವಿದೆ. ತಿಗಡಿಯಲ್ಲಿ ಕಲ್ಯಾಣಮ್ಮನವರ ಸಮಾಧಿ ಇದೆ.

ನೀಲಾಂಬಿಕೆ: ಕಲ್ಯಾಣ ಕ್ರಾಂತಿಯ ನಂತರ ಕೂಡಲಸಂಗಮದೆಡೆಗೆ ಬಂದಾಗ ನಾಗಲಾಂಬಿಕೆ, ಗಂಗಾಂಬಿಕೆಯ ಜೊತೆಗಿದ್ದ ನೀಲಾಂಬಿಕೆಯ ಸ್ಮಾರಕಗಳೂ ಪ್ರತ್ಯೇಕವಗಿ ದೊರೆಯುವುದಿಲ್ಲ. ಆದರೆ ಎಂ.ಕೆ. ಹುಬ್ಬಳಿ ಸಮೀಪದ ಮುರುಕಿಬಾವಿ ಹತ್ತಿರ ಕಲ್ಯಣದ ನೀಲಮ್ಮವರ ಶಿಲಾಮೂರ್ತಿ ಇದೆ. ಇಲ್ಲಿಂದ ಬಾಗಲಕೋಟೆ ಮಾರ್ಗವಾಗಿ ಅವರು ಕೂಡಲಸಂಗಮ ತಲುಪಿದ್ದಾರೆ. ಪಕ್ಕದ ತಂಗಡಿಗಿಯಲ್ಲಿ ಇವರ ಸ್ಮಾರಕವಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here