ಕಲಬುರಗಿ: ಸೆ.೩ ರಂದು ನಡೆಯಲಿರುವ ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆಗೆ ವಾರ್ಡ ನಂ.೪೪ರ ಬಿಜೆಪಿ ಅಭ್ಯರ್ಥಿಯಾದ ಪ್ರಶಾಂತ ಅಂಕಲಗಿ ಅವರ ಪರ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಕ ನಾರಾಯಣ, ವಿಧಾನ ಪರಿಷತ ಸದಸ್ಯ ಶಶೀಲ ನಮೋಶಿ ಅವರು ಸೋಮವಾರ ರೋಡ್ ಶೋ ನಡೆಸಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಂತೋಷ ಹಾದಿಮನಿ, ಶಿವಶರಣಪ್ಪ ಕಕಳಮೇಲಿ, ಶಿವಾನಂದ ಬಿರಾದಾರ, ಅಶೋಕ ಹೌದೆ, ದಯಾನಂದ ಪಾಟೀಲ, ರಾಜು ಚವ್ಹಾಣ, ದಿಲೀಪ ಹೊಡಲಕರ್ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.