ಬಿಜೆಪಿ ಪ್ರಣಾಳಿಕೆ ಸುಳ್ಳಿನ‌ ಕಂತೆ: ಶಾಸಕ ಪ್ರಿಯಾಂಕ್ ಖರ್ಗೆ

0
40

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ‌ ಬಿಜೆಪಿ ಪಕ್ಷ ವಾಸ್ತವ ಸಂಗತಿಯನ್ನು‌ ಮರೆಮಾಚಿ ಸುಳ್ಳುಗಳನ್ನೇ ತನ್ನ ಪ್ರಣಾಳಿಕೆಯಲ್ಲಿ‌ ಸೇರಿಸಿದೆ‌ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ‌ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಕಲಬುರಗಿ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.ಕಲಬುರಗಿ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಆದರೆ, ವಾಸ್ತವ ಎಂದರೆ ಕಲಬುರಗಿ‌ ಸೇರಿದಂತೆ ಮೈಸೂರು, ವಿಜಯಪುರ ಹಾಗೂ ಬಳ್ಳಾರಿ ನಗರಗಳನ್ನು small cities mission ( SCM) ಸ್ಕೀಮ್ ಅಡಿಯಲ್ಲಿ ಸ್ಮಾರ್ಟ್ ಸಿಟಿ ಯನ್ನಾಗಿ ಮಾಡುವಂತೆ ದಿ. 22.05.2020 ರಾಜ್ಯ ಸರ್ಕಾರ ಬರೆದ‌ ಪತ್ರಕ್ಕೆ ದಿ.18.06.2020 ರಂದು ಉತ್ತರಿಸಿರುವ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ‌ ಪ್ರಸ್ತಾಪಿಸಿರುವ ಏಳು ನಗರಗಳನ್ನು ಈಗಾಗಲೇ ಸದರಿ‌ ಸ್ಕೀಮ್ ನಡಿಯಲ್ಲಿ ಸ್ಮಾರ್ಟ್ ಸಿಟಿಗಳನ್ನಾಗಿ ಮಾಡಲು ಆಯ್ಕೆ ಮಾಡಲಾಗಿದ್ದು ಹಾಗಾಗಿ ಕಲಬುರಗಿ ಸೇರಿದಂತೆ ಪ್ರಸ್ತಾವನೆಯಲ್ಲಿ ಹೇಳಿರುವ ಯಾವ ನಗರಗಳನ್ನು SCM ಸ್ಕೀಮ್ ನಲ್ಲಿ ಸೇರಿಸಲು ಸಾಧ್ಯವಿಲ್ಲ‌ ಎಂದು ಸ್ಪಷ್ಟಪಡಿಸಿದೆ. ವಾಸ್ತವ ಸಂಗತಿ ಹೀಗಿರುವಾಗ ಇದನ್ನೆಲ್ಲ‌ ಮರೆಮಾಚಿದ ಬಿಜೆಪಿ ತನ್ನ‌ ಪ್ರಣಾಳಿಕೆಯಲ್ಲಿ ಕಲಬುರಗಿಯನ್ಜು ಸ್ಮಾರ್ಟ್ ಸಿಟಿ ಮಾಡುವುದಾಗಿ ಉಲ್ಲೇಖಿಸಿ ಸುಳ್ಳು ಹೇಳುವ ಮೂಲಕ ಜನರ ದಾರಿ‌ತಪ್ಪಿಸಿದೆ ಎಂದು ವಿವರಿಸಿದರು.

Contact Your\'s Advertisement; 9902492681

ಈಗಾಗಲೇ ಕೈತಪ್ಪಿರುವ ಯೋಜನೆಗಳಾದ ಜವಳಿ ಪಾರ್ಕ್, ನಿಮ್ಝ್ , ರೇಲ್ವೆ ವಲಯ, ಏಮ್ಸ್, ಆಹಾರ‌ ಪ್ರಯೋಗಾಲಯ ಗಳನ್ನು ವಾಪಸ್ ತರುವುದಿರಲಿ ಕೈ ಬಿಟ್ಟ ಯೋಜನೆಗಳ ಬಗ್ಗೆ ಬಿಜೆಪಿಗರು ತುಟಿ‌ ಬಿಚ್ಚದೆ ಮೌನವಹಿಸಿದ್ದಾರೆ. ತೀರಾ ಇತ್ತೀಚಿಗೆ ದೂರದರ್ಶನವನ್ನು ಮುಚ್ಚುವ ಹಂತದಲ್ಲಿದ್ದು ಅದನ್ನಾದರೂ ಬಿಜೆಪಿ ಸರ್ಕಾರ ಉಳಿಸಿಕೊಳ್ಳಲಿ ಎಂದರು..

ಕಾಂಗ್ರೆಸ್ ಓಲೈಕೆ‌ ರಾಜಕಾರಣದಿಂದ‌ ಹಲವಾರು ಪಾಕಿಸ್ಥಾನಗಳನ್ನ ಸೃಷ್ಟಿಯಾಗುತ್ತದೆ ಎಂದು ಸಿ.ಟಿ.ರವಿ ಹೇಳಿದ್ದಾರಲ್ಲ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಖರ್ಗೆ ಅವರು ಅದ್ಹೇಹೆ ಸೃಷ್ಟಿಯಾಗುತ್ತಂತೆ. ದೇಶ ಜಾತ್ಯಾತೀತ ತತ್ವದ ಮೇಲಿದೆ. ಬಿಜೆಪಿ ಪಕ್ಷ ಏಳು ವರ್ಷದಿಂದ ಅಧಿಕಾರದಲ್ಲಿ ಇದೆ ಏನು ಸಾಧನೆ ಮಾಡಿದೆ ? ಸಿ.ಟಿ.ರವಿ ತಮ್ಮ ಸರ್ಕಾರದ ಸಾಧನೆ‌ ಬಗ್ಗೆ ಹೇಳಲಿ ಇಂತಹ ಫಾಲ್ತು ಮಾತುಗಳನ್ನಲ್ಲ ಎಂದು ತಿರುಗೇಟು ನೀಡಿದರು.

ದಿವಂಗತ ಖಮರುಲ್‌ ಇಸ್ಲಾಂ ಅವರ ಅನುಪಸ್ಥಿತಿಯನ್ನು‌ ಚುನಾವಣೆ ನಡೆಯುತ್ತಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸಿದ ಖರ್ಗೆ ಅವರು ಖಮರುಲ್ ಇಸ್ಲಾಂ‌ ಸಾಹೇಬರು ನಮ್ಮ‌ಪಕ್ಷದ‌ ಹಿರಿಯ ನಾಯಕರು ಅವರ ಅನುಪಸ್ಥಿತಿ ತೀವ್ರವಾಗಿ ಕಾಡುತ್ತಿದೆ. ಆದರೆ, ಅವರ ಮೇಡಂ ಖನೀಜ್ ಫಾತೀಮಾ ಅವರು ಪಕ್ಷವನ್ನು ಮುನ್ನಡೆಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ‌ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ರಾಜ್ಯ ಸಭಾ ಸದಸ್ಯರಾದ‌ ಜಿ.ಸಿ. ಚಂದ್ರಶೇಖರ್, ಶಾಸಕರಾದ ಖನೀಜ್ ಫಾತೀಮಾ, ಅಲ್ಲಮಪ್ರಭು ಪಾಟೀಲ್, ಸುಭಾಷ್, ಅಲ್ಲಮಪ್ರಭು ಪಾಟೀಲ್, ರಾಠೋಡ್,‌ಶಿವಾನಂದ್ ಪಾಟೀಲ್, ಶರಣು ಮೋದಿ, ಸೇರಿದಂತೆ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here