ಸುರಪುರ: ಅಜೀಮ್ ಪ್ರೇಮಜೀ ಫೌಂಡೇಷನ ವತಿಯಿಂದ ಆರಂಭಿಸಲಾದ ಕೋವಿಡ್ ಲಸಿಕಾ ಜಾಗೃತಿ ವಾಹನಕ್ಕೆ ತಾಲೂಕ ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕಾ ಕಾರ್ಯ ಬಹುಬೇಗನೆ ಆಗಲು ಅಜೀಮ್ ಪ್ರೇಮಜೀ ಫೌಂಡೇಷನ ತಂಡ ಜಾಗೃತಿ ವಾಹನದ ಮೂಲಕ ಶ್ರಮಪಡುತ್ತಿರುವು ಸಂತೋಷದ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಸೋಮರೆಡ್ಡಿ ಮಂಗಿಹಾಳ ಮಾತನಾಡಿ, ಅಜೀಮ ಪ್ರೇಮಜೀ ಪೌಂಡೆಷನ ಶಿಕ್ಷಣ ಕ್ಷೇತ್ರದ ಜೊತೆಗೆ ಕೋವಿಡ್‌ನಿಂದಾಗಿ ತುಂಬಾ ಕಷ್ಟದಲ್ಲಿರುವ ಜನರಿಗೆ ಅಹಾರ ಧಾನ್ಯಗಳ ಜೊತೆಗೆ ಕೋವಿಡ್ ಲಸಿಕಾ ಕಾರ್ಯ ಕೈಜೋಡಿಸುರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಿ.ಆರ್.ಪಿ ಖಾದರ ಪಟೇಲ್, ಅಜೀಮ ಪ್ರೇಮಜೀ ಫೌಂಡೆಷನ್ ಸಂಪನ್ಮೂಲ ವ್ಯಕ್ತಿಗಳಾದ, ಅನೀಲ್ ಔಶಾ, ರಮೇಶ ಪಾಟೀಲ್, ಅಜೀಮ್ ಫರೀದಿ, ಲೋಹಿತಾಶ್ವ, ವಿಕ್ಕಿ ಡಿಸೋಜಾ, ಹುಲಗಪ್ಪ ಮಲ್ಲಿಕಾರ್ಜುನ, ಜಗದೇವಿ, ತೇಜಸ್ವಿನ ಪಲ್ಲವಿ ಪರಮಣ್ಣ ಅಮೃತ ಚನ್ನಪ್ಪ ಮುತ್ತುರಾಜು, ಶಿವುಕುಮಾರ,ರಾಜಶೇಖರ, ರಾಜೇಶ, ಅನ್ವರ ಜಮಾದಾರ ಇದ್ದರು. ವಿನೋದಕುಮಾರ ಸ್ವಾಗತಿಸಿ ವಂದಿಸಿದರು.