ಶಿಕ್ಷಕಿ ವರ್ಗಾವಣೆಗೆ ಒತ್ತಾಯಿಸಿ ಜಯ ಕರ್ನಾಟಕ ಮನವಿ

0
77
ತಾಲ್ಲೂಕಿನ ಭೈರಿಮರಡಿ ಶಾಲೆಯ ಶಿಕ್ಷಕಿಯನ್ನು ಬೇರೆಡೆಗೆ ವರ್ಗಾಯಿಸುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸುರಪುರ: ತಾಲ್ಲೂಕಿನ ಭೈರಿಮರಡಿ ಗ್ರಾಮ ಸರಕಾರಿ ಶಾಲೆಯ ಶಿಕ್ಷಕಿಯನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ತಾಲ್ಲೂಕಾಧ್ಯಕ್ಷ ರವಿ ನಾಯಕ ಮಾತನಾಡಿ,ಬೈರಿಮರಡಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯದಲ್ಲಿರುವ ದೀಪಾಶ್ರಿಯವರು ಶಾಲೆಗೆ ಸರಿಯಾಗಿ ಬರುವುದಿಲ್ಲ,ಕೆಲವೊಮ್ಮೆ ಶಾಲೆಗೆ ಬಂದರೂ ಮಕ್ಕಳಿಗೆ ಸರಿಯಾಗಿ ಪಾಠ ಮಾಡದೆ ಸಮಯ ವ್ಯರ್ಥ ಕಳೆಯುವ ಮೂಲಕ ಕರ್ತವ್ಯ ಲೋಪ ಎಸಗುತ್ತಾರೆ.ಇದನ್ನ ಕುರಿತು ಜನತೆ ಶಿಕ್ಷಕಿಗೆ ಕೇಳಿದರೆ ಮಕ್ಕಳ ಪಾಲಕರಿಗೂ ಅಗೌರವವಾಗಿ ಮಾತನಾಡಿ ಕಳುಹಿಸುತ್ತಾರೆ.

Contact Your\'s Advertisement; 9902492681

ಈ ಹಿಂದೆಯು ಕೂಡ ಈ ಶಿಕ್ಷಕಿಯ ಮೇಲೆ ವಿವಿಧ ಆರೋಪಗಳ ದೂರುಗಳಿದ್ದು ಹಿಂದೆ ಇದ್ದ ಬಿಇಒ ಅವರು ಕ್ರಮ ಕೈಗೊಂಡಿಲ್ಲ,ಆದ್ದರಿಂದ ದೀಪಾಶ್ರಿಯವರು ತಮ್ಮ ಕರ್ತವ್ಯದೆಡೆಗಿನ ನಿರ್ಲಕ್ಷ್ಯ ಮುಂದುವರೆಸಿದ್ದಾರೆ.ಆದ್ದರಿಂದ ಈ ಶಿಕ್ಷಕಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿ,ಬೇರೆ ಶಿಕ್ಷಕರನ್ನು ನಿಯೋಜಿಸಬೇಕು.ಒಂದು ವೇಳೆ ನಮ್ಮ ಮನವಿಗೆ ಸ್ಪಂಧಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿ,ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬರೆದ ಮನವಿಯನ್ನು ಕಚೇರಿ ಸಿಬ್ಬಂದಿ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರ ವೆಂಕಟೇಶ ನಾಯಕ,ಶ್ರೀನಿವಾಸ ನಾಯಕ,ಮಲ್ಲು ಕಬಾಡಗೇರಾ,ಶರಣಪ್ಪ ,ಹಣಮಂತ್ರಾಯ ಮೇಟಿಗೌಡ,ಸೋಮು ಸುರಪುರ,ಮಲ್ಲು ಯಾದವ,ರವಿ ಹೊಸ ಸಿದ್ದಾಪುರ,ಅಶೋಕ ಬೈರಿಮರಡಿ,ಬಲಭೀಮ ಬೊಮ್ಮನಹಳ್ಳಿ ಹಾಗು ಪೋಷಕರಾದ ಸಿದ್ರಾಮಪ್ಪ,ದ್ಯಾವಪ್ಪ,ಮಲ್ಲಪ್ಪ ಧನರಾಜ,ಮಲ್ಲು ಬನ್ನೆಟ್ಟಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here