ಸರಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರಗಳ ವಿತರಣೆ

0
58
ಸುರಪುರದ ಖುರೆಸಿ ಮೊಹಲ್ಲಾದ ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗು ಕ್ರೀಡಾ ಸಮವಸ್ತ್ರಗಳನ್ನು ವಿತರಿಸಲಾಯಿತು.ಸರಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರಗಳ ವಿತರಣೆ.

ಸುರಪುರ: ನಗರದ ಖುರೇಶಿ ಮೊಹಲ್ಲಾದ ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಮವಸ್ತ್ರ ಮತ್ತು ಕ್ರೀಡಾ ಸಮವಸ್ತ್ರಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಜೀಂ ಪ್ರೇಮಜಿ ಫೌಂಡೇಶನ್ನಿನ ಸಂಪನ್ಮೂಲ ವ್ಯಕ್ತಿ ಅನ್ವರ ಜಮಾದಾರ ಮಾತನಾಡಿ,ಸರಕಾರ ಮಕ್ಕಳ ಕಲಿಕೆಗಾಗಿ ಅನೇಕ ಯೋಜನೆಗಳನ್ನು ತಂದಿದೆ.ಸಮವಸ್ತ್ರ,ಉಚಿತ ಪುಸ್ತಕಗಳು, ಮದ್ಹ್ಯಾನದ ಬಿಸಿಯೂಟ,ಹಾಲು ಹೀಗೆ ಅನೇಕ ಯೋಜನೆಗಳಿವೆ ಇವುಗಳ ಸದುಪಯೋಗ ಪಡೆದು ಉತ್ತಮ ಶಿಕ್ಷಣ ಪಡೆಯಬೇಕಿದೆ. ಅಲ್ಲದೆ ಸ್ಥಳಿಯ ಜನಪ್ರತಿನಿಧಿಗಳು ಮತ್ತು ನಾಗರಿಕರು ಶಾಲೆಗಳ ಅಭೀವೃಧ್ಧಿಗೆ ಕಾಳಜಿ ತೋರಿದಲ್ಲಿ ಹೆಚ್ಚಿನ ಕಲಿಕೆಗೆ ಸಾಧ್ಯವಾಗಲಿದೆ,ಇದರಿಂದ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಅನುಕೂಲವಾಗಲಿದೆ ಎಂದರು.

Contact Your\'s Advertisement; 9902492681

ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರಗಳ ಕೊಡುಗೆ ನೀಡಿದ ಹೋರಾಟಗಾರ ನಾಗರಾಜ ಕಲಬುರ್ಗಿ ಮಾತನಾಡಿ,ತಂದೆ ತಾಯಿಯರು ತಮ್ಮ ಮಕ್ಕಳು ಅಕ್ಷರ ಕಲಿತು ಮುಂದೆ ದೊಡ್ಡ ವ್ಯಕ್ತಿಗಳಾಗಲೆಂಬ ಆಸೆಯಿಂದ ಶಾಲೆಗೆ ಕಳುಹಿಸುತ್ತಾರೆ.ಅವರ ಆಸೆಯನ್ನು ಈಡೇರಿಸುವ ಛಲ ಎಲ್ಲರಲ್ಲಿ ಬರಲಿ,ಅಲ್ಲದೆ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಇರುವಂತೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರುಗಳಾದ ಸ್ಯಾಮುವೆಲ್ ವಹಿಸಿಕೊಂಡಿದ್ದರು.ಅತಿಥಿಗಳಾಗಿ ಶಕೀಲ್ ಅಹ್ಮದ,ಹನೀಫ್,ಅಂಬ್ಲಪ್ಪ,ರಾಧಾ,ತಿಪ್ಪಣ್ಣ ವೇದಿಕೆ ಮೇಲಿದ್ದರು.ಶಿಕ್ಷಕರಾದ ಶಬಿಹಾಬಾನು,ಮಮತಾ ಸೇರಿದಂತೆ ಅನೇಕ ಭಾಗವಹಿಸಿದ್ದರು.ರವಿ ಗಲಗಿನ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here