ಸರ್ಕಾರಿ ಶಾಲೆಗಳನ್ನು ಉಳಿಸಿ: ವಿ-ಗಾರ್ಡ ಇಂಡಸ್ಟ್ರೀಸ್ ಮ್ಯಾನೇಜರ್ ಪ್ರಕಾಶ್ ರಾಠೋಡ

0
23

ಚಿತ್ತಾಪುರ:ಸರ್ಕಾರಿ ಶಾಲೆಗಳನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹುಬ್ಬಳ್ಳಿ ವಿ-ಗಾರ್ಡ ಇಂಡಸ್ಟ್ರೀಸನ ಮ್ಯಾನೇಜರ್ ಪ್ರಕಾಶ್ ರಾಠೋಡ ಅವರು ಹೇಳಿದರು.

ಬುಧವಾರ ಅವರು ಪಟ್ಟಣದ ಸರಕಾರಿ ಶಾಲೆಗೆ ಹಾಗೂ ಬಡ ಮಕ್ಕಳಿಗೆ ಶಾಲೆಯ ಬ್ಯಾಗ್,ನೋಟ್ ಬುಕ್,ಕಂಪಾಸ್ ಹಾಗೂ ಪೇನ್ನುಗಳನ್ನು ವಿತರಣೆ ಮಾಡಿ ಮಾತನಾಡಿದರು.

Contact Your\'s Advertisement; 9902492681

ಸರಕಾರಿ ಶಾಲೆಗಳಲ್ಲಿ ಓದಿದ ಎಷ್ಟೋ ಜನರು ಉನ್ನತ ಮಟ್ಟದ ಅಧಿಕಾರಿಗಳಲಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆಗಳನ್ನು ಮಾಡಿದ್ದಾರೆ. ಪಾಲಕರು ಸರಕಾರಿ ಶಾಲೆಗಳು ಅಂತಾ ತಿರಸ್ಕಾರ ಭಾವನೆಗಳನ್ನು ಮಾಡಬಾರದು.ಶಿಕ್ಷಣ ಎಲ್ಲರ ಹಕ್ಕು ಆಗಿದೆ ಕಡ್ಡಾಯವಾಗಿ ಮಕ್ಕಳಿಗೆ ಶಿಕ್ಷಣ ನೀಡಬೇಕು ಅಂತೆಯೇ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಗಂಡು ಹೆಣ್ಣು ಎಂಬ ಭೇದ ಭಾವ ಮಾಡಬಾರದು.ಸರ್ಕಾರಿ ಶಾಲೆಗಳ ಉಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಳೆದ ವರ್ಷ ನೆರೆ ಹಾವಳಿಗೆ ತುತ್ತಾದ ಪ್ರದೇಶಗಳಿಗೆ ಭೇಟಿ ನೀಡಿ ಸುಮಾರು 100 ಕುಟುಂಬಗಳಿಗೆ ದಿನ ನಿತ್ಯ ಅವಶ್ಯಕವಾದ ಸಾಮಗ್ರಿಗಳನ್ನು ನಮ್ಮ ಕಂಪನಿಯ ವತಿಯಿಂದ ನೀಡಲಾಗಿದೆ ಅಂತೆಗೆ ಈ ವರ್ಷ ಬಡ ವಿದ್ಯಾರ್ಥಿಗಳಿಗೆ ಶಾಲೆ ಬ್ಯಾಗ್ ಜೊತೆಗೆ ಪೆನ್,ಕಂಪಾಸ್,ನೋಟ್ ಬುಕ್ ವಿತರಣೆ ಮಾಡಲಾಗುತ್ತಿದೆ ಎಂದರು.

ಸ.ಹಿ.ಪ್ರಾಥಮಿಕ ಶಾಲೆ ಕೆಳೆಗೇರಿ ಹಾಗೂ ಸ.ಕಿ.ಪ್ರಾಥಮಿಕ ಶಾಲೆ ಮಳಖೇಡ ರೋಡ್,ಪ್ರಾರ್ಥನಾ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 100 ಮಕ್ಕಳಿಗೆ ತಮ್ಮ ಸಂಸ್ಥೆಯಿಂದ ಶಾಲೆ ಭಾಗ್ಯ, ನೋಟ್ ಬುಕ್,ಪೇನ್ನುಗಳ್ಳನು ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ವೀರಣ್ಣಾ ಸುಲ್ತಾನಪುರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಶ್ರೀನಿವಾಸ ರೆಡ್ಡಿ ಪಾಲಪ್, ಶ್ಯಾಮ್ ಮೇಧಾ,ನಿವೃತ್ತ ಶಿಕ್ಷಕ ಮಲ್ಲಣ ಮಾಸ್ಟರ್ ಮೂಡಬುಳ, ನಾಗರೆಡ್ಡಿ ಗೋಪಸೆನ್,ನಾಗರಾಜ್ ರೇಷ್ಮೀ,ಜಗದೇವ ದಿಗ್ಗಾಂವಕರ್,ಮುಖ್ಯಗುರುಗಳಾದ ದೇವಿಂದ್ರಪ್ಪ,ಜಯಶ್ರೀ ಸೇರಿದಂತೆ ಶಾಲಾ ಶಿಕ್ಷಕರು ಎಸ್ ಡಿಎಂಸಿ ಅಧ್ಯಕ್ಷರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here