ಕಲಬುರಗಿ: ಮಳೆಯಲ್ಲಿ ಬಸ್‌ ತಡೆದು ಪ್ರತಿಭಟಿಸಿದ ವಿದ್ಯಾರ್ಥಿನಿಯರು

0
45

ಕಲಬುರಗಿ: ಬಸ್ ಸೌಲಭ್ಯ ಕಲ್ಪಿಸುವಂತೆ ಭಾರೀ ಮಳೆಯನ್ನೂ ಲೆಕ್ಕಿಸದೇ ಬಸ್​ಗೆ ಅಡ್ಡಲಾಗಿ ನಿಂತು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿರುವ ಘಟನೆ ನಿನ್ನೆ ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿ ನಡೆದಿದೆ.

ಸರಿಯಾದ ಸಮಯಕ್ಕೆ ಬಸ್ ಇಲ್ಲದ ಪರಿಣಾಮ ನಾವು ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ ನಮಗೆ ಬಸ್ ನೀಡಿ ಎಂದು ವಿದ್ಯಾರ್ಥಿನಿಯರು ಪ್ರತಿಭಟಿಸುವ ಮೂಲಕ ಒತ್ತಾಯಿಸಿದರು.

Contact Your\'s Advertisement; 9902492681

ಸೇಡಂ ತಾಲೂಕಿನ ಬೊಂದೆಂಪಲ್ಲಿ ಗ್ರಾಮದಿಂದ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸದ ಪರಿಣಾಮ ವಿದ್ಯಾರ್ಥಿನಿಯರು ಮುಧೋಳ ಬಸ್ ನಿಲ್ದಾಣದಲ್ಲಿ ಗುರುಮಠಕಲ್ ಬಸ್ ತಡೆದು, ಮಳೆಯಲ್ಲೇ ಪ್ರತಿಭಟಿಸಿದರು.

ಬೊಂದೆಂಪಲ್ಲಿ, ಮಲ್ಲಾಬಾದ, ಖಂಡೇರಾಯನಪಲ್ಲಿ, ಬೊಂದೆಂಪಲ್ಲಿ ತಾಂಡಾ ಸೇರಿದಂತೆ ಅನೇಕ ಗ್ರಾಮಗಳ ವಿದ್ಯಾರ್ಥಿಗಳು ಮುಧೋಳ ಗ್ರಾಮಕ್ಕೆ ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಆದರೆ ಅನೇಕ ಗ್ರಾಮಗಳಿಂದ ಸರಿಯಾದ ಸಮಯಕ್ಕೆ ಬಸ್ ಸೌಕರ್ಯ ಇಲ್ಲ. ಸುಮಾರು ಐದಾರು ಕಿ. ಮೀ ನಡೆದುಕೊಂಡೇ ಹೋಗಿ ಬಸ್ ಹಿಡಿಯುವ ದುಸ್ಥಿತಿ ಇದೆ. ಇದಕ್ಕಾಗಿ ಹಲವಾರು ಬಾರಿ ಕೋರಿದರೂ ಬಸ್ ಸೌಲಭ್ಯ ಕಲ್ಪಿಸಿಲ್ಲ ಎಂಬುದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here