ಭಾರತ ಬಂದ್ ಹೋರಾಟಕ್ಕೆ ಬೆಂಬಲಿಸಲು ಮನವಿ

0
12

ಶಹಾಬಾದ: ಕರಾಳ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಹಮ್ಮಿಕೊಂಡಿರುವ ಸೆಪ್ಟೆಂಬರ್ ೨೭ ಭಾರತ ಬಂದ್ ಹೋರಾಟದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೈತರ ಜೊತೆ ನಿಲ್ಲಬೇಕೆಂದು ಎಐಡಿವೈಓ ಜಿಲಾ ಕಾರ್ಯದರ್ಶಿ ಜಗನ್ನಾಥ ಎಸ್.ಎಚ್ ಹೇಳಿದರು.

ಅವರು ಬುಧವಾರ ನಗರದ ವಿವಿಧ ಪ್ರದೇಶಗಳಲ್ಲಿ ಎಐಡಿವೈಓ ಸ್ಥಳೀಯ ಸಮಿತಿಯು ಬಂಡವಾಳ ಪರ ರೈತವಿರೋಧಿ ಕರಾಳ ಮೂರು ಕೃಷಿ ಕಾಯ್ದೆಗಳನ್ನು ಹಾಗೂ ವಿದ್ಯುತ್ ತಿದ್ದುಪಡಿ ಮಸೂದೆ ೨೦೨೧ ನ್ನು ವಿರೋಧಿಸಿ ಮತ್ತು ಎಲ್ಲರಿಗೂ ಉದ್ಯೋಗ ಖಾತ್ರಿಪಡಿಸಲು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ಹೊರಾಟವನ್ನು ಬೆಂಬಲಿಸಿ ನಗರದಲ್ಲಿ ಹಮ್ಮಿಕೊಂಡಿದ್ದ ಬೀದಿ ಸಭೆ ಕಾರ್ಯಕ್ರಮ ಉದ್ದೇಶೀಸಿ ಮಾತನಾಡಿದರು.

Contact Your\'s Advertisement; 9902492681

ರೈತರು ತೀವ್ರ ಚಳಿಯಲ್ಲಿ ಪ್ರಾರಂಬಿಸಿದ ಹೋರಾಟ ೯ ತಿಂಗಳು ಗತಿಸಿದರು ಸರ್ಕಾರ ಸ್ಪಂದಿಸುತ್ತಿಲ್ಲಾ ಬದಲಾಗಿ ಸರ್ಕಾರವೂ ಸಂಪೂರ್ಣ ನಿರ್ಲಕ್ಷಸಿ ಸಾರ್ವಜನಿಕ ಉದ್ಯಮಗಳಾದ , ರೈಲ್ವೇ, ವಿದ್ಯುv, ವಿಮಾನ ವಿಮೆ , ಬ್ಯಾಂಕ ಖಾಸಗೀಕರಣಗೊಳಿಸುತ್ತಿರುವದು, ಇವುಗಳ ವಿರುದ್ಧ ಯುವಜನರು ರಾಜೀ ರಹಿತ ಹೋರಾಟ ಮಾಡಲು ಮುಂದೆ ಬರಬೇಕೆಂದು ಹೇಳಿದರು.

ರೈತ ಸಂಘಟನೆ ಜಿಲ್ಲಾ ಅಧ್ಯಕ್ಷ ಗಣಪತ್‌ರಾವ್.ಕೆ.ಮಾನೆ ಮಾತನಾಡಿ,ಈ ಹೋರಾಟದಲ್ಲಿ ವಿದ್ಯಾರ್ಥಿ ಯುವಜನರು ಹಾಗೂ ಲಾರಿ ವಿವಿಧ ಸಂಘಟನೆಯ ಮುಖಂಡರು ರೈತರ ಹೋರಾಟ ಬೆಂಬಲ ನೀಡಿ ಭಾರತ್ ಬಂದ್ ಯಶಸ್ವಿಗೊಳಿಸಬೇಕೆಂದರು. ಸ್ಥಳಿಯ ಕಾರ್ಯದರ್ಶಿ ಪ್ರವೀಣ ಬಣಮಿಕರ್ ಮಾತನಾಡಿ, ಸೆಪ್ಟೆಂಬರ್ ೨೭ ರಂದು ಭಾರತ್ ಬಂದ್ ಹೋರಾಟದ ಪೂರ್ವಕವಾಗಿ ಎಲ್ಲಾ ಬಡಾವಣೆಗಳಲ್ಲಿ ಪ್ರಚಾರ ನಡೆಸಲಾಗುತ್ತಿದ್ದು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.

ಸ್ಥಳೀಯ ಸಮಿತಿ ತಿಮ್ಮಯ್ಯ ಮಾನೆ, ನೀಲಕಂಠ.ಎಮ್.ಹುಲಿ, ರಘು ಪವಾರ , ಹಣಮಂತ ಟೈಗರ್ ಶ್ರೀನಿವಾಸ ದಂಡುಗುಲ್ಕರ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here