ಸುರಪುರ: ವೀರಪ್ಪ ನಿಷ್ಠಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಗಾರ

0
11

ಸುರಪುರ: ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯಲ್ಲಿ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರ ಕುರಿತು ಒಂದು ದಿನದ ಕಾರ್ಯಗಾರವನ್ನು ನಡೆಸಲಾಯಿತು.

ಕಾರ್ಯಗಾರವನ್ನು ಉದ್ಘಾಟಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಚಂದ್ರಕಾಂತ ಹಿಳ್ಳಿ ಮಾತನಾಡಿ,ದೇಶದಲ್ಲಿ ಆಗಾಗ ವಿವಿಧ ಶಿಕ್ಷಣ ನೀತಿಗಳನ್ನು ಜಾರಿಗೊಳಿಸಲಾಗಿದೆ,ಅದರಂತೆ ಈಗ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಜಾರಿಗೊಳಿಸಲಾಗುತ್ತಿದ್ದು, ಅದು ನಮ್ಮ ಕರ್ನಾಟಕದಲ್ಲಿಯೆ ಮೊದಲ ಪ್ರಯೋಗ ನಡೆಸಲಾಗುತ್ತಿದೆ ಎಂದರು.ಈ ನೀತಿಯಿಂದ ವಿದ್ಯಾರ್ಥಿಗಳು ಆರ್ಟ್ಸ್ ಕಾಮರ್ಸ್ ಮತ್ತು ಸೈನ್ಸ್ ಇದರಲ್ಲಿ ಯಾವುದೇ ವಿಷಯ ಕಲಿತ ವಿದ್ಯಾರ್ಥಿ ಮುಂದೆ ಬೇರೊಂದು ವಿಷಯವನ್ನು ಕಲಿಯಲು ಅವಕಾಶ ನೀಡಲಿದೆ ಎಂದರು.ಶೈಕ್ಷಣಿಕ ಕಲಿಕಾ ಪದ್ಧತಿ ಬದಲಾವಣೆ ಎನ್ನುವುದು ಅನಿವಾರ್ಯ,ಆದ್ದರಿಂದ ಎಲ್ಲರು ಈಗ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅರಿತುಕೊಳ್ಳಬೇಕೆಂದು ಸಲಹೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ: ರವೀಂದ್ರ ಕುಮಾರ ನಾಗರಾಳೆ ಮಾತನಾಡಿ,ಯಾವುದೇ ಶಿಕ್ಷಣ ನೀತಿ ಜಾರಿಗೊಂಡಾಗ ಅದನ್ನು ಮೊದಲು ಎಲ್ಲಾ ಕಾಲೇಜುಗಳ ಉಪನ್ಯಾಸಕರು ಮತ್ತು ಶಿಕ್ಷಕರು ಅರಿತುಕೊಳ್ಳುವುದು ತುಂಬಾ ಮುಖ್ಯವಾಗಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಇಂದು ನಮ್ಮ ಸಂಸ್ಥೆಯಿಂದ ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಕಲಬುರ್ಗಿಯ ಕೆಬಿಎನ್ ಕಾಲೇಜ್ ಉಪನ್ಯಾಸಕ ಡಾ: ವಿಶಾಲದತ್ತ ಕೋಹಿರ್ ಹಾಗು ಕಲಬುರ್ಗಿ ಶರಣಬಸವೇಶ್ವರ ಪಿಯು ಕಾಮರ್ಸ್ ಕಾಲೇಜ್ ಪ್ರಾಂಶುಪಾಲ ಪ್ರೋ ದಯಾನಂದ ಹೊಡಾಲ್ ಅವರು ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರ ಕುರಿತು ಸಮಗ್ರ ವಿವರಣೆ ನೀಡಿದರು.

ಕಾರ್ಯಕ್ರಮದ ವೇದಿಕೆ ಮೇಲೆ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಗೌರವಾಧ್ಯಕ್ಷ ರಘುನಾಥರಡ್ಡಿ ಇದ್ದರು.ಕಾಲೇಜಿನ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಎಸ್.ನಿಷ್ಠಿ,ನಾನೆಗೌಡ ದೇಸಾಯಿ, ಡಾ:ಅನೀಲ್ ಮಾಲಿಪಾಟೀಲ್,ರೇವಪ್ಪ ಪಾಟೀಲ್,ಮೋಹನರಡ್ಡಿ,ನಾಗಭೂಷಣ ಯಾಳಗಿ,ಅಶೋಕ ಪಾಟೀಲ್,ಶರಣಗೌಡ,ರಶ್ಮಿ ಹಿರೇಮಠ ಹಾಗು ತಾಲೂಕಿನ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here