ರೈತರ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಬಂದ್: ಕೇಂದ್ರ ರಾಜ್ಯ ಸರಕಾರಗಳ ವಿರುಧ್ಧ ಆಕ್ರೋಶ

0
20

ಸುರಪುರ: ದೇಶದಲ್ಲಿನ ರೈತರ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಬಂದ್‌ಗೆ ಸುರಪುರದಲ್ಲಿ ವಿವಿಧ ಸಂಘಟನೆಗಳಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಯಿತು.ಸೋಮವಾರ ಬೆಳಿಗ್ಗೆಯಿಂದಲೂ ಬಂದ್‌ಗೆ ಕರೆ ನೀಡಲಾಗಿತ್ತಾದರು ಬೆಳಿಗ್ಗೆ ೧೧ ಗಂಟೆಯವರೆಗೂ ಅಂಗಡಿ ಮುಂಗಟ್ಟುಗಳು ತೆರೆದಿದ್ದವು,ನಂತರ ಪ್ರತಿಭಟನಾಕಾರರು ಜಮಾವಣೆಯಿಂದಾಗಿ ವ್ಯಾಪಾರಸ್ಥರು ಮದ್ಹ್ಯಾನ ೩ ಗಂಟೆಯವರೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲಿಸಿದರು.ವಾಹನಗಳ ಓಡಾಟ ಎಂದಿನಂತಿತ್ತು.

ರೈತ ಸಂಘಟನೆಗಳು,ಪ್ರಗತಿಪರ ಸಂಘಟನೆಗಳು,ದಲಿತ ಸಂಘಟನೆಗಳ ನೂರಾರು ಸಂಖ್ಯೆಯ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಮೊದಲಿಗೆ ಮಹಾತ್ಮಗಾಂಧಿ ವೃತ್ತದಿಂದ ನಗರದ ಪ್ರಮುಖ ಬೀದಿಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುಧ್ಧ ಘೋಷಣೆಗಳನ್ನು ಕೂಗಿದರು.

Contact Your\'s Advertisement; 9902492681

ನಂತರ ನಡೆದ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,ಕೇಂದ್ರ ಸರಕಾರ ರೈತರಿಗೆ ತೀವ್ರ ಅನ್ಯಾಯ ಮಾಡುತ್ತಿದೆ.ಕಳೆದ ೧೦ ತಿಂಗಳಿಂದ ದೆಹಲಿ ಗಡಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದು ಸುಮಾರು ಏಳು ನೂರು ಜನ ರೈತರು ಸಾವನ್ನಪ್ಪಿದ್ದಾರೆ,ಆದರೆ ಆ ರೈತರ ಬೇಡಿಕೆಗಳನ್ನು ನಿರ್ಲಕ್ಷಿಸುವ ಮೂಲಕ ಸರಕಾರ ನೀಚತನ ಮೆರೆಯುತ್ತದೆ ಎಂದು ಆಕ್ರೋಶ ಹೊರಹಾಕಿದರು.ಅಲ್ಲದೆ ಕನಿಷ್ಠ ಬೆಂಬಲ ಬೆಲೆ ಖರೀದಿಗೆ ಕಾನೂನಿನ ಬಲ ನೀಡಬೇಕು.ಎಪಿಎಮ್‌ಸಿ ಕಾಯ್ದೆ,ವಿದ್ಯುತ್ ಕಾಯ್ದೆ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂರ್ಭದಲ್ಲಿ ಹೋರಾಟಗಾರರಾದ ಮಲ್ಲಯ್ಯ ಕಮತಗಿ,ಅಯ್ಯಣ್ಣ ಹಾಲಬಾವಿ,ವೆಂಕೋಬ ದೊರೆ,ಅಹ್ಮದ್ ಪಠಾಣ,ಮಲ್ಲಿಕಾರ್ಜುನ ಕ್ರಾಂತಿ,ರಾಹುಲ ಹುಲಿಮನಿ,ವೆಂಕಟೇಶ ಬೇಟೆಗಾರ,ದೇವಿಂದ್ರಪ್ಪ ಪತ್ತಾರ,ಸಾಹೇಬಗೌಡ ಮದಲಿಂಗನಾಳ,ಹನುಮಗೌಡ ನಾರಾಯಣಪುರ ಸೇರಿದಂತೆ ಅನೇಕರು ಮಾತನಾಡಿದರು. ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.ಪಿಐ ಸುನೀಲ್‌ಕುಮಾರ ಮೂಲಿಮನಿ ನೇತೃತ್ವದಲ್ಲಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.

ಪ್ರತಿಭಟನೆಯಲ್ಲಿ ವೆಂಕಟೇಶ ಹೊಸ್ಮನಿ, ಶಿವನಗೌಡ ರುಕ್ಮಾಪುರ,ರಾಜಾ ಪಿಡ್ಡನಾಯಕ,ಭೀಮಣ್ಣ ತಿಪ್ಪನಟಗಿ,ದೇವಿಂದ್ರಪ್ಪ ತಿಪ್ಪನಟಗಿ,ರಾಘು ಕುಪಗಲ್,ದಾವೂದ್ ಇಬ್ರಾಹಿಂ ಪಠಾಣ,ಭೀಮರಾಯ ಒಕ್ಕಗಲಿಗ,ಶಿವಲಿಂಗ ಹಸನಾಪುರ,ಎಮ್.ಪಟೇಲ್,ಭೀಮರಾಯ ಸಿಂದಗೇರಿ,ಹಣಮಂತ್ರಾಯ ದೊರೆ,ಮಾನಪ್ಪ ಕಟ್ಟಿಮನಿ,ರಮೇಶ ದೊರೆ ಆಲ್ದಾಳ,ದೇವಪ್ಪ ನಗರಗುಂಡ,ಮಲ್ಲಯ್ಯ ವಗ್ಗಾ,ಖಾಜಾ ಅಜ್ಮೀರ್,ಸೀತಾರಾಮ ರಾಠೋಡ,ವೆಂಕಟೇಶ ಭಕ್ರಿ,ಚಾಂದಪಾಶ ಮಾಲಗತ್ತಿ,ಕನಕಾಚಲ ನಾಯಕ,ಬಸವರಾಜ ಪೂಜಾರಿ,ಅಬ್ದುಲ್ ರೌಫ್,ಆನಂದ ಕಟ್ಟಿಮನಿ,ದೇವಿಂದ್ರ ದೊಡ್ಮನಿ,ದಶರಥ ದೊರೆ ಸೇರಿದಂತೆ ನೂರಾರು ಜನರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here