ಕಲಬುರಗಿ: ಭಾರತೀಯ ಯುವ ಸೈನ್ಯಯ ಕಚೇರಿಯಲ್ಲಿ ಸೈನ್ಯಯ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ (ರಾಜು) ಡೋಣ್ಣಿಗೇರಿ ಇವರ ನೇತೃತ್ವದಲ್ಲಿ ಭಾರತೀಯ ಯುವ ಸೈನ್ಯ ಸಭೆ ನಡೆಸಿ ಸಭೆಯಲ್ಲಿ ನೂತನ ಕಲಬುರಗಿ ನಗರದ ಜಿಲ್ಲಾ ಅಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ವೀರಯ್ಯ ಚಿಂಚನಸೂರ, ಉಪಾಧ್ಯಕ್ಷರನ್ನಾಗಿ ಶೀಲಾ ನಾಟಿಕಾರ, ನಗರದ ಉತ್ತರ ಮಂಡಲದ ಅಧ್ಯಕ್ಷರನ್ನಾಗಿ ಸಂತೋಷ ಹೀರೆಮಠ ಅವರನ್ನು ಆಯ್ಕೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ರವಿ ದೇವಗಾಂವ, ಶ್ರೀಕಾಂತ ರೇಡ್ಡಿ, ರಾಜು ಚವ್ಹಾಣ, ರೋಮಿಯಾ, ರಾಜಶೇಖರ ಹೇರೂರ, ವಿಜಯಲಕ್ಷ್ಮೀ, ಲಕ್ಷ್ಮಣ, ಮಾಲಾ, ರೋಪಾಲಿ, ಅರ್ಚನಾ, ಶಿವರಾಜ ಗವಡ, ಸಿದ್ದು ಪೂಜಾರಿ ಇದ್ದರು.