ಕಲಬುರಗಿ: ನಗರದ ಖ್ವಾಜಾ ಬಂದೇನವಾಜ್ ದರ್ಗಾ ಪಾಯನ್ ಬಡಾವಣೆಯಲ್ಲಿ ಶಾರೂಕ್ ಎಂಬ್ ಯುವನ ಕೊಲೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ರೋಜಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹಬ್ಬು,(25) ಶಹಾಬಾಜ (26), ಹಾಗೂ ಸಿಕ್ಕಂದರ (28) ಕೊಲೆ ಪ್ರಕರಣಕ್ಕೆ ಬಂಧಿಸಿಲಾದ ಅರೋಪಿಗಳು ಎಂದು ಪೊಲೀಸರು ತಮ್ಮ ಪ್ರಕಟಣೆಯಲ್ಲಿ ತಿಳಸಿದೆ.
ಮೂವರು ಆರೋಪಿಗಳು ಭಾನುವಾರ ಸಂಜೆ 6 ಗಂಟೆಗೆ ಶಾರೂಕ್ ನನ್ನು ದರ್ಗಾ ಬಡಾವಣೆಯ ಪಾಯನ್ ಕೆರೆ ಹತ್ತಿರ ಕರೆದುಕೊಂಡು ಹೋಗಿ ಕೊಲೆ ಮಾಡಿ ಬಿಸಾಡಿದರು. ಕೊಲೆಗೆ ಮುಖ್ಯಕಾರಣ ಹಣದ ವಿಷಯದಲ್ಲಿ ವೈಷಮ್ಯ ಇತ್ತು ಎಂದು ತಿಳಿದುಬಂದಿದೆ.
ದರ್ಗಾದ ಕೇರೆ ಕಡೆಗೆ ಕರೆದುಕೊಂಡು ಹೋಗಿ ಒಬ್ಬರಿಗೊಬ್ಬರು ಮಾತಿಗೆ ಕುಂತಾಗ ಮಾತಿನಲ್ಲಿ ಏರುಪೇರು ಆಗಿಮೂವರು ಆರೋಪಿಗಳು ಶಾರೂಕ್ ಗೆ ಮಾರಕಾಸ್ತ್ರಗಳಿಂದ ಮೃತಸಿಗೆ ತಲೆಗೆ, ಕುತ್ತಿಗೆಗೆ, ತಿವಿದು ತೀವೃತರವಾದ ರಕ್ತಗಾಯ ಮಾಡಿ ಕೊಲೆ ಮಾಡಿರುತ್ತಾರೆ ಎಂದು. ರೋಜಾ ಪೊಲೀಸ್ ಠಾಣೆಯ ಪೊಲೀಸ್ ಇನ್ನಪೇಕ್ಕರ್ ರಮೇಶ್ ಸಿ ಮೇಟಿ ತಿಳಿಸಿದ್ದಾರೆ.
ಡಿಸಿಪಿ, ಕಿಶೋರಬಾಬು ಅವರ ನೇತೃತ್ವದಲ್ಲಿ ವಿಶೇಷ ತಂಡದ ಸಿಬ್ಬಂದಿ ವೈಜನಾಥ, ಮೊಶಿನ, ಈರಣ್ಣ, ನಿಜಲಿಂಗಪ್ಪ ಶರಣಬಸಪ್ಪ, ವಿಶೇಷ ತಂಡ ಮದ್ಯಾಹ್ನ ಆರೋಪಿತರನ್ನು ಕಾರ್ಯಚರಣೆ ನಡೆಸಿ ಕೃತ್ಯಕ್ಕೆ ಬಳಸಿದ ಮರಾಕಾಸ್ತ್ರ ಮೃತನ ಮೋಟಾರ ಸೈಕಲ್ ವಶಪಡಿಸಿಕೊಂಡಿದ್ದಾರೆ.