ಕಲಬುರಗಿ: ವಿಶ್ವಜ್ಞ ಸಂಗೀತ ಕಲಾ ಸಂಸ್ಥೆ ಉದ್ಘಾಟನೆ. ಮಹಾದೇವಯ್ಯ ಹಿರೇಮಠ ರು ಉದ್ಘಾಟನೆ ಮಾಡಿದರು .
ಕಲಬುರಗಿ ತಾಲ್ಲೂಕಿನ ಹತಗುಂದಿ ಗ್ರಾಮದ ಭಾಗ್ಯವಂತಿ ದೇವಸ್ಥಾನದ .ಸಭಾಂಗಣದಲ್ಲಿ ಜರುಗಿದ .ಸಾಂಸ್ಕೃತಿಕ ಕಲರವ ಹಾಗೂ ವಿಶ್ವ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿ ಸಾಹಿತ್ಯ ಮತ್ತು ಸಂಗೀತ ಒಂದೇ ನಾಣ್ಯದ 2 ಮುಖಗಳು ಸಾಹಿತ್ಯ ಜ್ಞಾನ ನೀಡಿದರೆ ಸಂಗೀತ ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ಸಾಹಿತಿ ಬಿ ಎಚ್ ನಿರಗುಡಿ ಹೇಳಿದರು .
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸಂಗೀತ ಪ್ರಾಧ್ಯಾಪಕರಾದ ರೇವಯ್ಯ ವಸ್ತ್ರದ್ ರವರು ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಾಂತ್ ಗೋಲ್ಡ್ ಸ್ಮಿತ್ ಇವರು ಸಕಲ ಕಲಾವಲ್ಲಭ .ಸಂಗೀತದ ವಿವಿಧ ಪ್ರಕಾರದ ತಬಲಾ, ಹಾರ್ಮೋನಿಯಂ, ಕೊಳಲು ವಾದನ, ಚಿತ್ರಕಲೆಗಳಲ್ಲಿ ತುಂಬ ಹೆಸರು ಮಾಡಿದವರು ಇವರು ಇಂದು ವಿಶ್ವಜ್ಞ ಸಂಸ್ಥೆ ಹುಟ್ಟು ಹಾಕಿದ್ದು ಸಂತೋಷ ದಾಯಕವಾದುದು ಇದರಡಿಯಲ್ಲಿ ಅನೇಕ ಕಾರ್ಯಕ್ರಮಗಳು ನಿರಂತರ ವಾಗಿ ಜರುಗಲಿ ಎಂದು ಕಲ್ಯಾಣ ಕಹಳೆ ಸಂಪಾದಕ ಶರಣಗೌಡ ಪಾಟೀಲ್ ಪಾಳಾ ತಿಳಿಸಿದರು .
ಕಾರ್ಯಕ್ರಮದಲ್ಲಿ ಶರಣೆ ಶಿಲೀಲಾತಾಯಿ ದಿವ್ಯ ಸಾನಿದ್ಯ ವಹಿಸಿದರು . ತ್ರಿಪುರಾಂತ ಓಂಕಾರಸ್ವಾಮಿ , ಭೀಮಾಶಂಕರ ಪಾಟೀಲ್ , ವೇದಕುಮಾರ ಪ್ರಜಾಪತಿ ,ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.
ಪ್ರಶಸ್ತಿ ಪುರಸ್ಕೃತರು, ದೂಳಯ್ಯ ಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ ಬಿರಾದಾರ್, ಚಂದ್ರಶೇಖರ್ ಶಿಲ್ಪಿ , ಗುರುನಾಥ್ ಗೊಬ್ಬೂರ , ಲಕ್ಷ್ಮೀಕಾಂತ್ ಟೆಂಗಳಿ , ಅಮೃತಾ ರಾವ್ ಸಿಂಧೆ , ಸಂಜೀವ್ ಕುಮಾರ್ ಡೊಂಗರಗಾಂವ್ , ಬಸವರಾಜ್ ಮೇಳ್ಕುಂದಿ ,ಬಸವರಾಜ್ ಪಾಟೀಲ್ , ಗೌಡೇಶ ಬಿರಾದಾರ್ , ಬಸವರಾಜ ಮದರಿ ಹೀರಾಪುರ , ಆಸ್ಮಾ ಇನಾಂದಾರ್ ಪ್ರಶಸ್ತಿ ಸ್ವೀಕರಿಸಿದರು .
ಕಾರ್ಯಕ್ರಮದ ಪ್ರಾಸ್ತಾವಿಕ ಮಾತು ರಾಘವೇಂದ್ರ ಚಿಂಚನಸೂರ, ಪ್ರಶಾಂತ್ ಗೋಲ್ಡ್ ಸ್ಮಿತ್ ಸ್ವಾಗತಿಸಿದರು , ರವಿ ಆಳಂದ್ ಪ್ರಶಸ್ತಿ ಪುರಸ್ಕೃತರ ಪರಿಚಯಿಸಿದರು , ಪ್ರಾಥನಾ ಗೀತೆ ವೀರಭದ್ರಯ್ಯ ಶಾಸ್ತ್ರಿಗಳು , ಸಂಗಮೇಶ್ ಶಾಸ್ತ್ರಿಗಳು ನಿರೂಪಿಸಿದರು .ಅನೇಕ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.