ದಲಿತ, ಹಿಂದುಳಿದವರಿಗೆ ಕಾಂಗ್ರೆಸ್ ಉದ್ದಾರ ಮಾಡಿಲ್ಲ: ಈಶ್ವರಪ್ಪ

0
17

ಕಲಬುರಗಿ : 75 ವರ್ಷ ಕಳೆದರೂ ದೇಶದಲ್ಲಿ ಕಾಂಗ್ರೆಸ್ ಪಕ್ಷ ದಲಿತರಿಗೆ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದವರ ಉದ್ದಾರ ಮಾಡಿಲ್ಲ, ಕೇವಲ ವೋಟು ಬ್ಯಾಂಕ್ ಮಾಡಿಕೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ. ಎಸ್ ಈಶ್ವರಪ್ಪ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ನಗರದ ಎಚ್ ಕೆ ಸಿಸಿ ಐ ಸಭಾಂಗಣದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪದಾಧಿಕಾರಿಗಳ ಹಾಗೂ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ದಲಿತರು, ಹಿಂದುಳಿದ ವರ್ಗಗಳು ಹಿಂದುಳಿದಿದ್ದಾರೆ, ಆದರೆ ಅವರು ದಡ್ಡರಲ್ಲ, ಹೀಗಾಗಿಯೇ ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಹಿಂದೆ 7 ಕಾರ್ಪೊರೇಟರ ಗಳಿದ್ದದನ್ನು ಈಗ 24 ಕಾರ್ಪೊರೇಟ್ ರನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಪಂಜಾಬ್, ರಾಜಸ್ಥಾನಗಳಲ್ಲಿ ಚೂರು ಚೂರು ಆಗಿದೆ, ಇದೀಗ ಕಾಂಗ್ರೆಸ್ಸಿನ ಜಿ- 23 ನಾಯಕರು ಸಭೆ ನಡೆಸಬೇಕೆಂದು ಸೋನಿಯಾ ಗಾಂಧಿಗೆ ನೋಟೀಸು ನೀಡಿದ್ದಾರೆ, ಇದರಲ್ಲೇ ತಿಳಿಯುತ್ತದೆ ಕಾಂಗ್ರೆಸ್ ಸಾಯುತ್ತಿದೆ ಎಂದರು.

75 ವರ್ಷ ವಾದರೂ ಕಾಂಗ್ರೆಸ್ ಅಧಿಕಾರ ಮಾಡಿ ಕೇವಲ 3 ಕೋಟಿ ಗ್ರಾಮೀಣ ಜನರಿಗೆ ಕುಡಿಯುವ ನೀರು ಕೊಟ್ಟಿದೆ, ಆದರೆ, ಜಲ ಮಿಷನ್ ಅಡಿಯಲ್ಲಿ ನರೇಂದ್ರ ಮೋದಿ ಸರ್ಕಾರ ಕೇವಲ ಎರಡೇ ವರ್ಷದಲ್ಲಿ 5 ಕೋಟಿ ಗ್ರಾಮೀಣ ಜನರಿಗೆ ನೀರು ಪೂರೈಸಿದೆ, ಮುಂದೆ 2024ವರೆಗೆ ದೇಶದ ಪ್ರತಿ ಹಳ್ಳಿಗಳಲ್ಲಿ ಪ್ರತಿ ಮನೆಗೂ ನೀರು ಕೊಡುತ್ತೇವೆ ಎಂದು ಸಚಿವ ಈಶ್ವರಪ್ಪ ಅವರು ತಿಳಿಸಿದರು.

ಹಿಂದುಳಿದ ವರ್ಗದಿಂದ ಆಯ್ಕೆಯಾದ ಕಲಬುರಗಿ ಮಹಾನಗರ ಪಾಲಿಕೆಯ ನೂತನ ಸದಸ್ಯರಿಗೆ ಕೆ.ಎಸ್ ಈಶ್ವರಪ್ಪ ಅವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ನರೇಂದ್ರ ಬಾಬು,
ಶಾಸಕರಾದ ಬಸವರಾಜ ಮತ್ತಿಮಡು, ಸುಭಾಷ್ ಗುತ್ತೇದಾರ್, ಅವಿನಾಶ್ ಜಾಧವ್, ಬಿ.ಜಿ ಪಾಟೀಲ್, ಸುನೀಲ್ ವಲ್ಲ್ಯಾಪುರೆ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಸಿದ್ದಾಜಿ ಪಾಟೀಲ್, ಶರಣಪ್ಪ ತಳವಾರ, ಅಮರನಾಥ್ ಪಾಟೀಲ್, ಶೋಭಾ ಬಾಣಿ, ಶಶಿಕಲಾ ಟೆಂಗಳಿ, ಅರವಿಂದ ಪೊದ್ದಾರ್, ಅವ್ವಣ್ಣ ಮ್ಯಾಕೇರಿ, ಲಿಂಗರಾಜ ಬಿರಾದಾರ್, ಅಮೃತ್, ದೊಡ್ಡಪ್ಪ ಗೌಡ ಪಾಟೀಲ್, ಚೆನ್ನಮ್ಮ ಪಾಟೀಲ್ ಸೇರಿದಂತೆ ಹಲವಾರು ಹಿಂದುಳಿದ ವರ್ಗಗಳ ಮೋರ್ಚಾ ಪದಾಧಿಕಾರಿಗಳು ಇದ್ದರು.

ಬಿಜೆಪಿ ಬ್ರಾಹ್ಮಣರದಿಲ್ಲ:ಬಿಜೆಪಿ ಪಕ್ಷ ಬ್ರಾಹ್ಮಣರ ಪಕ್ಷವಲ್ಲ, ಇದು ದಲಿತ, ಹಿಂದುಳಿದವರ ಪಕ್ಷ ವಾಗಿದೆ, ಎಂದ ಕೆ.ಎಸ್ ಈಶ್ವರಪ್ಪ ಅವರು, ಮೊದಲು ಬಿಜೆಪಿಗೆ ಯಾರೂ ಬರ್ತಿರ್ಲಿಲ್ಲ, ಇದೀಗ ಕಾಂಗ್ರೆಸ್ ಪಕ್ಷಕ್ಕೆ ಯಾರು ಹೋಗ್ತಿಲ್ಲ, ಎಂದರೆ ಅವನತಿಯಾಗುತ್ತಿದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here