ಆಳಂದ: ಸಮಾಜದಲ್ಲಿ ಜಾತಿಯತೆಯ ಅಸಮಾನತೆಯ ಬೇರುಗಳು ಕಿತ್ತೆಸೆದು ಭಾತೃತ್ವದ ನೆಲೆಯ ಸಮಾನತೆಯನ್ನು ಬೆಳೆಸಬೇಕು ಎಂದು ತಾಪಂ ಇಓ ನಾಗಮೂರ್ತಿ ಶಿಲವಂತ ಹೇಳಿದರು.
ತಾಲೂಕಿನ ನೆಲ್ಲೂರ ಗ್ರಾಮದಲ್ಲಿ ಸಂಸ್ಕಾರ ಪ್ರತಿಷ್ಠಾನ ಹಾಗೂ ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಅಸ್ಪೃಶ್ಯತೆ ನಿರ್ಮೂಲನಾ ಕುರಿತಾದ ವಿಚಾರ ಸಂಕಿರಣ ಹಾಗೂ ಬೀದಿ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಜಾತಿ ವ್ಯವಸ್ಥೆಯಿಂದ ಕಲುಷಿತಗೊಂಡ ಸಮಾಜವನ್ನು ಸುಧಾರಿಸಬೇಕಾದರೆ ನೀರಿನಂತೆ ಶುದ್ಧಿಕರಿಸಬೇಕಾಗಿದೆ. ಎಲ್ಲಾ ಜಾತಿ ಧರ್ಮದವರನ್ನು ಸಮಾನವಾಗಿ ಬದುಕು ಸಾಗಿಸಲು ಸಂವಿಧಾನ ನಮಗೆಲ್ಲ ಹಕ್ಕು ಸವಲತ್ತುಗಳು ಒದಗಿಸಿದೆ. ಶೋಷಿತ ಸಮುದಾಯದ ಜನರು ಶಿಕ್ಷಣವಂತರಾಗಿ ವರ್ಗರಹಿತ ಮತ್ತಿ ಜಾತಿ ರಹಿತ ಸಮಾಜ ಕಟ್ಟಲು ಮುಂದಾಗಬೇಕು ಎಂದರು.
ಸಾಹಿತಿ ಧರ್ಮಣ್ಣ ಎಚ್ ಧನ್ನಿ ಉಪನ್ಯಾಸ ಭಾಷಣ ಮಾಡಿ, ಡಾ ಅಂಬೇಡ್ಕರವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದರೆ ನಾವು ಪ್ರಬುದ್ಧ ಭಾರತ ನಿರ್ಮಿಸಬಹುದಾಗಿದೆ. ಮಕ್ಕಳಿಗೆ ಭಾರತೀಯ ಸಂವಿಧಾನದ ಆಶಯಗಳನ್ನು ತಿಳಿಸಿ ಕೊಡಬೇಕಾಗಿದೆ. ಅದಕ್ಕಾಗಿ ಬುದ್ಧ ಬಸವ, ಡಾ ಅಂಬೇಡ್ಕರರ ದಾರಿ ನಮ್ಮದಾಗಲಿ ಎಂದು ಹೇಳಿದರು.
ದಣ್ಣೂರ ಗ್ರಾಪಂ ಅಧ್ಯಕ್ಷೆ ಶಾಂತಾಬಾಯಿ ಭೀಮಶ್ಯಾ ಸಿಂಗೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಂಸ್ಕಾರ ಪ್ರತಿಷ್ಠಾನದ ಅಧ್ಯಕ್ಷ ವಿಠ್ಠಲ ಚಿಕಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಡಿಓ ಮಲ್ಲಿಕಾರ್ಜುನ ಗಿರಿ, ಹಾಸ್ಟೇಲ್ ಮೇಲ್ವಿಚಾರಕ ರಮೇಶ ಕರಾಟಮಾಲ, ಸಂಗೀತ ಕಲಾವಿದ ಎಂ ಎನ್ ಸುಗಂಧಿ ರಾಜಪೂರ ಅವರು ಮಾತನಾಡಿದರು.
ಗ್ರಾಮದ ಮುಖಂಡರಾದ ಕಲ್ಯಾಣಿ ಬಿರಾದಾರ, ಶ್ರೀಕಾಂತ ವಾಡಿ, ಪೀರಪ್ಪ ಹಾದಿಮನಿ, ಪೊಲೀಸ್ ಅಧಿಕಾರಿ ಈರಣ್ಣ, ಕಲಾವಿದರಾದ ಶಶಿಕಾಂತ ಕಾಂಬಳೆ ನಿರಗುಡಿ, ಗಂಗುಬಾಯಿ ಕೌಲಗಿ, ಪಿ ಆರ್ ಪಾಂಡು, ಜಯಶ್ರೀ ಗುತ್ತೇದಾರ, ಮುತ್ತಣ್ಣ ಲಿಂಗಸೂರ, ಶಿಲ್ಪಾ ಕಲಬುರಗಿ, ಮಹೇಶ ಬಡರ್ಗೆ, ಅಂದಪ್ಪ ಡೋಣಿ, ಸತೀಶ ಕರಕಂಚಿ, ಶಿವಕುಮಾರ ಡೋಣಿ, ಭೀಮಶ್ಯಾ ಸಿಂಗೆ ಸೇರಿ ಅನೇಕ ಗಣ್ಯರು ಭಾಗವಹಿಸಿದರು. ನಂತರ ಓಂ ಸಾಯಿ ಜನಜಾಗೃತಿ ಕಲಾ ತಂಡದವರಿಂದ ಅಸ್ಪೃಶ್ಯತೆ ನಿರ್ಮೂಲನೆಯ ಬೀದಿ ನಾಟಕ ಜರುಗಿತು.