ಆಳಂದ: ತಾಲೂಕಿನ ವಿವಿಧೆಡೆ ಜಯ ಕರ್ನಾಟಕ ಗ್ರಾಮ ಶಾಖೆಯನ್ನು ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ ಅವರ ನೇತೃತ್ವದಲ್ಲಿ ಉದ್ಘಾಟನೆ ಕೈಗೊಳ್ಳಲಾಗಿದೆ.
ದೇವಂತಗಿ, ಜವಳಿ (ಡಿ), ಕೊರಳ್ಳಿ ತಾಂಡಾ, ಸಂಗೋಳಗಿ ಜಿ. ಗ್ರಾಮದಲ್ಲಿ ಗ್ರಾಮ ಶಾಖೆಯನ್ನು ಉದ್ಘಾಟಿಸಲಾಯಿತು. ಇನ್ನೂಳಿದ ೧೦ ಗ್ರಾಮ ಶಾಖೆಗಳನ್ನು ಉದ್ಘಾಟನೆ ಶೀಘ್ರವೇ ನೆರವೇರಿಸಲಾಗುವುದು ಎಂದು ಮಲ್ಲಿಕಾರ್ಜುನ ಸಾರವಾಡ ಅವರು ತಿಳಿಸಿದ್ದಾರೆ.
ಉದ್ಘಾಟನೆಗೊಂಡ ಸಂಗೋಳಗಿ (ಜಿ), ಶಾಖೆಗೆ ಆಕಾಶ ಕಬಾಡೆ (ಅಧ್ಯಕ್ಷ), ಪ್ರಮೋದ ನಂದಗಾಂವ (ಉಪಾಧ್ಯಕ್ಷ), ದೇವಂತಿ ಶಾಖೆಯ ಅರುಣಕುಮಾರ ತಡಲಗಿ (ಅಧ್ಯಕ್ಷ), ವಿಶಾಲ ಸರಸಂಬಿ (ಉಪಾಧ್ಯಕ್ಷ), ಕೊರಳ್ಳಿ ತಾಂಡಾಕ್ಕೆ ಅಶೋಕ ರಾಠೋಡ (ಅಧ್ಯಕ್ಷ), ಷಣ್ಮೂಖ ರಾಠೋಡ (ಉಪಾಧ್ಯಕ್ಷ), ಅನೀಲ ಚವ್ಹಾಣ (ಕಾರ್ಯಾಧ್ಯಕ್ಷ), ಜವಳಿ ಡಿ. ಶಾಖೆಗೆ ನಾಗರಾಜ ವಡೆಯರ್ (ಅಧ್ಯಕ್ಷ), ಅರವಿಂದ ವಡೆಯರ (ಉಪಾಧ್ಯಕ್ಷ)ರನ್ನಾಗಿ ನೇಮಕ ಮಾಡಲಾಗಿದೆ.
ಈ ಸಂದರ್ಭದಲ್ಲಿ ನಿಂಬರಗಾ ವಲಯ ಅಧ್ಯಕ್ಷ ಸಂಗನಗೌಡ ಪಾಟೀಲ, ಮುಖಂಡ ಯಲ್ಲಾಲಿಂಗ ದೇವಂತಗಿ, ಕೊರಳ್ಳಿ ಗ್ರಾಮ ಘಟಕದ ಅಧ್ಯಕ್ಷ ಸಿದ್ಧಾರ್ಥ ಪೋದ್ದಾರ. ಕಾರ್ಯಾಧ್ಯಕ್ಷ ಸರ್ವೇಶ ಚೌಲ ಸೇರಿ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.